ನಾಳೆಯೇ ಅಯೋಧ್ಯಾ ತೀರ್ಪು -Big Breaking

ದೇಶಾದ್ಯಂತ ಭಾರೀ ಬಂದೋಬಸ್ತ್

Vishwanath Patil Add

ಪ್ರಗತಿವಾಹಿನಿ ಸುದ್ದಿ, ನವದೆಹಲಿ -ಇಡೀ ದೇಶವೇ ತುದಿಗಾಲಲ್ಲಿ ನಿಂತು ಕಾಯುತ್ತಿರುವ ಅಯೋಧ್ಯಾ ವಿವಾದದ ತೀರ್ಪು ಶನಿವಾರ ಹೊರಗೆ ಬರಲಿದೆ. ಶನಿವಾರ ಬೆಳಗ್ಗೆ 10.30ಕ್ಕೆ ತೀರ್ಪು ಪ್ರಕಟವಾಗಲಿದೆ.

ಸುಮಾರು 3 ದಶಕಳಿಗೂ ಹೆಚ್ಚು ಕಾಲದಿಂದ ವಿವಾದಕ್ಕೊಳಗಾಗಿರುವ ಅಯೋಧ್ಯಾ ವಿವಾದ ಇದೀಗ ಅಂತಿಮ ಘಟ್ಟಕ್ಕೆ ಬಂದಿದೆ. ರಾಜಿ ಯತ್ನ ಸೇರಿದಂತೆ ಎಲ್ಲ ರೀತಿಯಿಂದಲೂ ಪ್ರಯತ್ನಿಸಿ ಬಗೆಹರಿಯದ್ದರಿಂದ ಇದೀಗ ಸುಪ್ರಿಂ ಕೋರ್ಟ್ ತೀರ್ಪು ನೀಡುತ್ತಿದೆ. ಐವರು ಸದಸ್ಯರ ಸುಪ್ರಿಂ ಕೋರ್ಟ್ ನ್ಯಾಯಾಧೀಶರ ತಂಡ ತೀರ್ಪು ನೀಡುತ್ತಿದೆ.

Jolle Add

ಅಯೋಧ್ಯಾ ತೀರ್ಪು ಯಾವುದೇ ಕ್ಷಣದಲ್ಲಿ ಹೊರಬರುವ ಸಾಧ್ಯತೆ ಹಿನ್ನೆಲೆಯಲ್ಲಿ ದೇಶಾದ್ಯಂತ ಭಾರೀ ಬಂದೋಬಸ್ತ್ ಏರ್ಪಡಿಸಲಾಗಿದೆ. ಕಳೆದ ಒಂದು ವಾರದಿಂದಲೇ ಎಲ್ಲೆಡೆ ಕಟ್ಟೆಚ್ಚರ ವಹಿಸಲಾಗುತ್ತಿದೆ. ಸಾಮಾಜಿಕ ಜಾಲತಾಣಗಳ ಮೇಲೆ ನಿಗಾವಹಿಸಲಾಗಿದೆ. ಎಲ್ಲೆಡೆ ಕ್ರಿಮಿನಲ್ಸ್ ಗಳ ಮೇಲೆ ಎಚ್ಚರ ವಹಿಸಲಾಗಿದೆ. ಪ್ರತಿ ಜಿಲ್ಲೆ, ತಾಲೂಕುಗಳಲ್ಲಿ ಶಾಂತಿ ಸಭೆಗಳನ್ನು ನಡೆಸಲಾಗಿದೆ.

ಯಾವುದೇ ರೀತಿಯಲ್ಲಿ ಸೌಹಾರ್ದತೆ ಕೆಡಿಸಲು ಯತ್ನಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಲಾಗಿದೆ. ಇದೀಗ ನಾಳೆಯೇ ತೀರ್ಪು ಪ್ರಕಟವಾಗಲಿದೆ ಎನ್ನುವ ಸುದ್ದಿ ಹೊರಬಿದ್ದಿದೆ.