Advertisement

ರಾಜಧಾನಿಯಲ್ಲಿ ಸ್ಫೋಟಕ ಮಾದರಿ ವಸ್ತು ಪತ್ತೆ

ಐಸ್ ಕ್ರೀಮ್ ಡಬ್ಬಿಯಲ್ಲಿ ಇತ್ತು ಪೊಟ್ಯಾಶಿಯಂ ನೈಟ್ರೇಟ್

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬೆಂಗಳೂರಿನಲ್ಲಿ ಸ್ಪೋಟಕ ಮಾದರಿಯ ಅನುಮಾನಾಸ್ಪದ ವಸ್ತು ಪತ್ತೆಯಾಗಿದ್ದು, ಕೆಲಕಾಲ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ.

ಬೆಂಗಳೂರಿನ ಕತ್ರಿಗುಪ್ಪೆ- ಅಶೋಕನಗರ ಜಕ್ಷನ್ ನಲ್ಲಿ ಈ ಸ್ಫೋಟಕ ಪತ್ತೆಯಾಗಿದ್ದು, ಸ್ಥಳೀಯರು ಬೆಳಿಗ್ಗೆ 10:30ಕ್ಕೆ ಹನುಮಂತ ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.

ತಕ್ಷಣ ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಹಾಗೂ ಎಫ್ ಎಸ್ ಎಲ್ ತಂಡ ಸ್ಫೋಟಕವನ್ನು ಕೆಂಪೇಗೌಡ ಮೈದಾನಕ್ಕೆ ತೆಗೆದುಕೊಂಡು ಹೋಗಿ ಪರಿಶೀಲಿಸಿದ್ದಾರೆ. ಈ ವೇಳೆ ಐಸ್ ಕ್ರೀಮ್ ಡಬ್ಬಿಯಲ್ಲಿ ಪಟಾಕಿಯಲ್ಲಿ ಬಳಸುವ ಪೊಟ್ಯಾಶಿಯಂ ನೈಟ್ರೇಟ್ ಎಂಬ ರಾಸಾಯನಿಕವನ್ನು ತುಂಬಿಡಲಾಗಿತ್ತು ಎಂದು ತಿಳಿದುಬಂದಿದೆ.

ತಕ್ಷಣ ಸ್ಪೋಟಕವನ್ನು ಬಾಂಬ್ ನಿಷ್ಕ್ರಿಯ ದಳ ಯಶಸ್ವಿಯಾಗಿ ನಿಷ್ಕ್ರಿಯಗೊಳಿಸಿದೆ. ಕೊರೊನಾ ಲಾಕ್ ಡೌನ್ ನಡುವೆಯೂ ಈ ಸ್ಫೋಟಕವನ್ನು ರಸ್ತೆಯಲ್ಲಿ ಇಟ್ಟವರು ಯಾರು ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ.