Crease wise (28th Jan)
KLE1099 Add

ಕೊರೊನಾ ವೈರಸ್: 24 ಗಂಟೆಗಳಲ್ಲಿ ಚೀನಾದಲ್ಲಿ 5090 ಹೊಸ ಪ್ರಕರಣ ದಾಖಲು

ಸಾವಿನ ಸಂಖ್ಯೆ 1400ಕ್ಕೆ ಏರಿಕೆ

Anand Ads 3 (3)

ಪ್ರಗತಿವಾಹಿನಿ ಸುದ್ದಿ; ಬೀಜಿಂಗ್: ವಿಶ್ವವ್ಯಾಪಿ ಆತಂಕಕ್ಕೆ ಕಾರಣವಾಗಿರುವ ಕೊರೊನಾ ವೈರಸ್‌ಗೆ ಚೀನಾದಲ್ಲಿ ಬಲಿಯಾದವರ ಸಂಖ್ಯೆ 1400ಕ್ಕೆ ಏರಿಕೆಯಾಗಿದೆ.

ಚೀನಾದಲ್ಲಿ ಒಟ್ಟು 64,000 ಜನರಲ್ಲಿ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದೆ. ಕಳೆದ ಎರಡು ದಿನಗಳಿಂದೀಚೆಗೆ ಸೋಂಕಿಗೆ ಒಳಗಾಗುವವರ ಸಂಖ್ಯೆಯಲ್ಲಿ ತೀವ್ರ ಏರಿಕೆ ಕಂಡುಬಂದಿದ್ದು, ವಿಶ್ವಾದ್ಯಂತ ಆತಂಕ ತಂದೊಡ್ಡಿದೆ. ಸೋಂಕಿಗೆ ಬಲಿಯಾದವರ ಕುರಿತು ಚೀನಾ ಸರಕಾರ ಇದೇ ಮೊದಲ ಬಾರಿಗೆ ಅಧಿಕೃತ ಮಾಹಿತಿ ನೀಡಿದೆ.

ಕೊರೊನಾ ವೈಸರ್‌ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯಕೀಯ ಸಿಬ್ಬಂದಿ ಪೈಕಿ 1700 ಮಂದಿ ಸೋಂಕಿತರಾಗಿದ್ದಾರೆ. ಕಳೆದ 24 ಗಂಟೆಗಳಲ್ಲಿ ಚೀನಾದಲ್ಲಿ ಒಟ್ಟು 5090 ಹೊಸ ಕೊರೊನಾ ವೈರಸ್‌ ಪ್ರಕರಣಗಳು ದಾಖಲಾಗಿವೆ. ಇವರಲ್ಲಿ 121 ಜನ ಸಾವನ್ನಪ್ಪಿದ್ದಾರೆ ಎಂದು ಚೀನಾ ಸರಕಾರ ವರದಿ ತಿಳಿಸಿದೆ.

ಪ್ರಸ್ತುತ ಆಂಟಿ ವೈರಲ್ ಔಷಧಗಳು ಹಾಗೂ ಚೀನಾದ ಸಾಂಪ್ರದಾಯಿಕ ವಿಧಾನ ಬಳಸಿ ಕೊರೊನಾ ವೈರಸ್‌ಗೆ ಚಿಕಿತ್ಸೆ ನೀಡಲಾಗುತ್ತಿದೆ.

ಜಪಾನ್‌ನಲ್ಲಿ ಕೊರೊನಾ ವೈರಸ್‌ ಸೋಂಕಿಗೆ ಮೊದಲ ವ್ಯಕ್ತಿಯೊಬ್ಬ ಬಲಿಯಾಗಿದ್ದಾರೆ. ಜಪಾನ್‌ನಲ್ಲಿ ಇದುವರೆಗೂ 3700 ಮಂದಿ ಕೊರೊನಾ ವೈರಸ್‌ ಸೋಂಕಿಗೆ ಒಳಗಾಗಿದ್ದಾರೆ. ಇದರಿಂದ ಎಚ್ಚೆತ್ತುಕೊಂಡಿರುವ ಜಪಾನ್ ಸರಕಾರ ಸೋಂಕಿತರ ರಕ್ಷಣೆಗಾಗಿ ಹಾಗೂ ರೋಗ ಹರಡದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಒಟ್ಟು 96 ದಶಲಕ್ಷ ಡಾಲರ್ ತುರ್ತು ನಿಧಿ ಘೋಷಿಸಿದೆ.