

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವ್ಯಕ್ತಿಯೋರ್ವನಿಗೆ ಚಾಕುವಿನಿಂದ ಇರಿದು ಹತ್ಯೆಗೈಯ್ಯಲು ಯತ್ನಿಸಿದ ಆರೋಪಿಯನ್ನು ರೈಲ್ವೆ ಪೊಲೀಸರು ಬಂಧಿಸಿರುವ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರದ ಲೋಂಡಾ ರೈಲು ನಿಲ್ದಾಣದಲ್ಲಿ ನಡೆದಿದೆ.
ಲೋಂಡಾ ರೈಲು ನಿಲ್ದಾಣದಲ್ಲಿ ಬಶೀರ್ ರಫೀಕ್ ಶೇಖ್ ಎಂಬಾತ ನಾಸೀರ್ ಇಸ್ಮಾಯಿಲ್ ಪಠಾಣ್ (32) ಎಂಬುವವರ ಮೇಲೆ ಹಲ್ಲೆ ನಡೆಸಿ, ಚಾಕುವಿನಿಂದ ಇರಿದು ಕೊಲ್ಲಲು ಯತ್ನಿಸಿದ್ದಾನೆ. ರೈಲ್ವೆ ನಿಲ್ದಾಣದ ಫ್ಲಾಟ್ ಫಾರಂ ನಂ.1 ಹಾಗೂ 2ರ ನಡುವಿನ ಓವರ್ ಬ್ರಿಡ್ಜ್ ಮೇಲೆ ಈ ಘಟನೆ ನಡೆದಿದೆ.
ಗಂಭೀರವಾಗಿ ಗಾಯಗೊಂಡಿರುವ ನಾಸೀರ್ ಇಸ್ಮಾಯಿಲ್ ನನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ನಾಸೀರ್ ಸಹೋದರ ತರ್ಬೇಜ್ ಇಸ್ಮಾಯಿಲ್ ಪಠಾಣ್ ರೈಲ್ವೆ ಪೊಲೀಸರಿಗೆ ನೀಡಿದ ದೂರು ಆಧರಿಸಿ ಆರೋಪಿ ಬಶೀರ್ ರಫಿಕ್ ಶೇಖ್ ನನ್ನು ಬಂಧಿಸಲಾಗಿದೆ.
ಆರೋಪಿ ಬಶೀರ್ ಹಾಗೂ ಆತನಿಂದ ಹಲ್ಲೆಗೊಳಗಾದ ನಾಸೀರ್ ಇಬ್ಬರೂ ಲೋಂಡಾ ಗ್ರಾಮದ ನಿವಾಸಿಗಳೇ ಆಗಿದ್ದಾರೆ ಎಂದು ತಿಳಿದುಬಂದಿದೆ.
Police Warning : ಬೆಳಗಾವಿ ನಾಗರಿಕರಿಗೆ ಪೊಲೀಸರಿಂದ ತುರ್ತು ಎಚ್ಚರಿಕೆ

ನಿಖರ, ನಿರಂತರ ಮತ್ತು ನಿಷ್ಪಕ್ಷಪಾತ ಸುದ್ದಿಗಳಿಗಾಗಿ ಪ್ರಗತಿವಾಹಿನಿ ಗ್ರುಪ್ ಸೇರಲು NEWS ಎಂದು ಟೈಪ್ ಮಾಡಿ 8197712235 ನಂಬರ್ ಗೆ ವಾಟ್ಸಪ್ ಮಾಡಿ.
ದಯವಿಟ್ಟು ನಮ್ಮ YouTube ಚಾನೆಲ್ ಗೆ ಸಬ್ ಸ್ಕ್ರೈಬ್ ಮಾಡಿ