ಪ್ರಗತಿವಾಹಿನಿ ಸುದ್ದಿ, ಬನವಾಸಿ – ಉತ್ತರ ಕನ್ನಡ ಜಿಲ್ಲೆಯ ಬನವಾಸಿಯಲ್ಲಿ ನಡೆದ ಕದಂಬೋತ್ಸವದಲ್ಲಿ  ರಶ್ಮಿ ಹೆಗಡೆ ಇವಳಿಗೆ ಹಿಂದೂಸ್ತಾನಿ ಸಂಗೀತ ಕ್ಷೇತ್ರದಲ್ಲಿ ಹೊಂದಿರುವ ಪ್ರತಿಭೆಯನ್ನು ಗುರುತಿಸಿ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯ ವತಿಯಿಂದ ನೀಡಲಾದ ಈ ಪ್ರಶಸ್ತಿ ಪುರಸ್ಕಾರವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಂತ್ರಿಗಳು ಹಾಗೂ ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರಾದ  ಶಶಿಕಲಾ ಜೊಲ್ಲೆ ಅವರು  ಪ್ರದಾನ ಮಾಡಿದರು.
 ರಶ್ಮಿ ಹೆಗಡೆ ಬೆಳಗಾವಿಯ ಕೆಎಲ್ಇ ಕಾಮರ್ಸ್ ಕಾಲೇಜಿನಲ್ಲಿ ಬಿಕಾಂ ಪದವಿಯನ್ನು ಓದುತ್ತಿದ್ದಾಳೆ.