Advertisement -Home Add

ಸಿಗರೇಟ್ ಹಚ್ಚಿ, ಲಿಪ್ ಲಾಕ್ ಮಾಡಿದ ರಚಿತಾ ರಾಮ್

ಮತ್ತೆ ಬೋಲ್ಡ್ ಲುಕ್ ನಲ್ಲಿ ಸುದ್ದಿಯಾದ ಡಿಂಪಲ್ ಕ್ವೀನ್

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಜೋಗಿ ಪ್ರೇಮ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ’ಏಕ್ ಲವ್ ಯಾ’ ಚಿತ್ರದಲ್ಲಿ ಸ್ಯಾಂಡಲ್ ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ ಮತ್ತೆ ಬೋಲ್ಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದು, ಸಿಗರೇಟ್ ಸೇದಿ, ಲಿಪ್ ಲಾಕ್ ಮಾಡಿ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.

ರಕ್ಷಿತಾ ಪ್ರೇಮ್ ಸಹೋದರ ರಾಣಾ ನಾಯಕ ನಟನಾಗಿ ಅಭಿನಯಿಸುತ್ತಿರುವ ’ಏಕ್ ಲವ್ ಯಾ’ ಚಿತ್ರದ ಟೀಸರ್ ವ್ಯಾಲೆಂಟೈನ್ಸ್ ಡೇ ದಿನವೇ ಬಿಡುಗಡೆಗೊಂಡಿದ್ದು, ನಾಯಕಿ ರಚಿತಾ ರಾಮ್ ಮತ್ತೊಮ್ಮೆ ಸಖತ್ ಬೋಲ್ಡ್ ಆಗಿ ಕಾಣಿಸಿಕೊಳ್ಳುವ ಮೂಲಕ ಸುದ್ದಿಯಾಗಿದ್ದಾರೆ.

1 ನಿಮಿಷ 40 ಸೆಕೆಂಡ್‍ಗಳ ಟೀಸರ್ ನಲ್ಲಿ ರಾಣಾ ಆ್ಯಕ್ಷನ್ ಹಾಗೂ ರಚಿತಾ ಲುಕ್ ಗಮನ ಸೆಳೆದಿದ್ದು, ರಚಿತಾ ರಾಮ್ ಸಿಗರೇಟ್ ಸೇದುವ ದೃಶ್ಯದ ಮೂಲಕ ಆರಂಭವಾಗುವ ಟೀಸರ್ ನಲ್ಲಿ ರಾಣಾಗೆ ಲಿಪ್ ಕಿಸ್ ಮಾಡುವ ದೃಶ್ಯದೊಂದಿಗೆ ಮುಕ್ತಾಯವಾಗಿದೆ. ಪ್ರೇಮ್ ಆ್ಯಕ್ಷನ್ ಕಟ್ ಹೇಳಿರುವ ಈ ಚಿತ್ರಕ್ಕೆ ರಕ್ಷಿತಾ ಪ್ರೇಮ್ ನಿರ್ಮಾಣ ಮಾಡಿದ್ದು, ಅರ್ಜುನ್ ಜನ್ಯಾ ಸಂಗೀತ ಸಂಯೋಜನೆ ಮಾಡಿದ್ದಾರೆ.

ಈ ಹಿಂದೆ ’ಐ ಲವ್ ಯು’ ಚಿತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಜೊತೆ ರಚಿತಾ ರಾಮ್ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡು ಸುದ್ದಿಯಾಗಿದ್ದರು. ನಂತರ ಇನ್ನುಮುಂದೆ ಅಂಥ ದೃಶ್ಯಗಳಲ್ಲಿ ಕಾಣಿಸಿಕೊಳ್ಳಲ್ಲ ಎಂದು ಕಣ್ಣೀರಾಗಿದ್ದರು. ಈಗ ಏಕ್ ಲವ್ ಯಾ ಚಿತ್ರದಲ್ಲಿ ಬಿಂದಾಸ್ ಆಗಿ ಸಿಗರೇಟ್ ಸೇದಿ, ಲಿಪ್ ಲಾಕ್ ಮಾಡುವ ಮೂಲಕ ಅಚ್ಚರಿಗೆ ಕಾರಣರಾಗಿದ್ದಾರೆ.