Advertisement -Home Add

ಫೆಬ್ರವರಿ 17 ರಿಂದ ವಿಧಾನಮಂಡಲ ಅಧಿವೇಶನ

ಈ ಬಾರಿಯೂ ಮಾಧ್ಯಮ ಕ್ಯಾಮರಾಗಳಿಗೆ ನಿಷೇಧ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯ ವಿಧಾನಮಂಡಲ ಅಧಿವೇಶನಕ್ಕೆ ದಿನಾಂಕ ನಿಗದಿಯಾಗಿದ್ದು, ಈ ಬಾರಿಯೂ ಮಾಧ್ಯಮ ಹಾಗೂ ಕ್ಯಾಮರಾಗಳಿಗೆ ನಿಷೇಧ ಮುಂದುವರೆಸಲಾಗಿದೆ.

ವಿಧಾನಸೌಧದಲ್ಲಿಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಫೆಬ್ರವರಿ 17 ರಿಂದ ಮಾರ್ಚ್ 31ರ ವರೆಗೆ ರಾಜ್ಯ ವಿಧಾನಮಂಡಲ ವಿಶೇಷ ಅಧಿವೇಶನ ನಡೆಯಲಿದೆ. ಮಾರ್ಚ್​.05 ರಂದು ಮುಖ್ಯಮಂತ್ರಿ ಯಡಿಯೂರಪ್ಪ ಬಜೆಟ್ ಮಂಡಿಸಲಿದ್ದಾರೆ ಎಂದರು.

ಫೆಬ್ರವರಿ 17ರಿಂದ ಆರಂಭವಾಗಲಿರುವ ಅಧಿವೇಶನದಲ್ಲಿ ಮೊದಲ ದಿನ ಬೆಳಗ್ಗೆ 11 ಗಂಟೆಗೆ ರಾಜ್ಯಪಾಲ ವಜುಭಾಯಿ ವಾಲಾ ಎರಡೂ ಸದನಗಳನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

ಫೆಬ್ರವರಿ 22ರ ವರೆಗೆ ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯ ಚರ್ಚೆ ನಡೆಯಲಿದೆ. ಮತ್ತೆ ಮಾರ್ಚ್ 2 ರಂದು ಅಧಿವೇಶನ ಆರಂಭವಾಗಲಿದ್ದು, ಮಾರ್ಚ್.5 ರಂದು ರಾಜ್ಯ ಬಜೆಟ್ ಮಂಡನೆಯಾಗಲಿದೆ. ಅಧಿವೇಶನದಲ್ಲಿ ಲೋಕಾಯುಕ್ತ ಕಾಯ್ದೆಗೆ ತಿದ್ದುಪಡಿ ಸೇರಿದಂತೆ 6 ವಿಧೇಯಕಗಳ ಸ್ವೀಕೃತಕ್ಕೆ ಸರ್ಕಾರ ಮನವಿ ಮಾಡಿದೆ. ಈ ಕುರಿತು ಸದನದಲ್ಲಿ ಚರ್ಚೆ ನಡೆಯಲಿದೆ ಎಂದು ತಿಳಿಸಿದರು.

ಇನ್ನು ಈ ಬಾರಿ ಕೂಡ ಕಳೆದ ಬಾರಿಯಂತೆ ಮಾಧ್ಯಮಗಳಿಗೆ ಅಧಿವೇಶನದಲ್ಲಿ ಪ್ರವೇಶ ನಿಷೇಧಿಸಲಾಗಿದೆ. ಲೋಕಸಭೆ ಹಾಗೂ ರಾಜ್ಯಸಭೆ ಮಾದರಿಯಲ್ಲೇ ಅಧಿವೇಶನ ನಡೆಯಲಿ ಎಂದು ಸ್ಪಷ್ಟಪಡಿಸಿದರು.