Athani Takkennavar
Beereshwara13
GIT add4

ಹಿಂಡಲಗಾ ಜೈಲಿನಿಂದ ವಿಡಿಯೋ ಕಾಲ್ ಮೂಲಕ ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡ ಜನಪ್ರತಿನಿಧಿ

ಕೊಲೆ ಆರೋಪದಲ್ಲಿ ಜೈಲು ಸೇರಿರುವ ಪುರಸಭೆ ಸದಸ್ಯ

KLE1099 Add

ಪ್ರಗತಿವಾಹಿನಿ ಸುದ್ದಿ; ಸಂಕೇಶ್ವರ: ಮಹಿಳೆಯೊಬ್ಬರನ್ನು ಕೊಲೆ ಮಾಡಿದ ಆರೋಪಿ, ಸಂಕೇಶ್ವರ ಪುರಸಭೆಯ ಸದಸ್ಯ, ಗುರುವಾರ ನಡೆದ ಪುರಸಭೆಯ ಸಾಮಾನ್ಯ ಸಭೆಗೆ ಜೈಲಿನಿಂದ ವಿಡಿಯೋ ಕಾಲ್ ಮೂಲಕ ಪಾಲ್ಗೊಂಡರು.

ಸಂಕೇಶ್ವರ ಪುರಸಭೆಯ 14 ನೇ ವಾರ್ಡಿನ ಬಿಜೆಪಿ ಸದಸ್ಯ ಉಮೇಶ ಕಾಂಬ್ಳೆ ಆನ್ ಲೈನ್ ಮೂಲಕ ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡವರು.

ಉಮೇಶ ಕಾಂಬ್ಳೆ ಸಂಕೇಶ್ವರದಲ್ಲಿ ಕೆಲ ತಿಂಗಳ ಹಿಂದೆ ನಡೆದ ಮಹಿಳೆಯೊಬ್ಬರ ಕೊಲೆಯ ಆರೋಪಿಯಾಗಿದ್ದು ಅವರನ್ನು ಬೆಳಗಾವಿಯ ಹಿಂಡಲಗಾ ಕಾರಾಗ್ರಹದಲ್ಲಿ ಇರಿಸಲಾಗಿದೆ. ಆದರೆ ಜನಪ್ರತಿನಿಧಿಯಾಗಿರುವ ಅವರ ಹಕ್ಕುಗಳಿಗೆ ಚ್ಯುತಿ ಬಾರದಂತೆ ತಂತ್ರಜ್ಞಾನ ಬಳಕೆ ಮೂಲಕ ಅವರಿಗೆ ಸಾಮಾನ್ಯ ಸಭೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿದ್ದು ಗಮನ ಸೆಳೆಯಿತು.

ಅಪ್ರಾಪ್ತರ ಅಶ್ಲೀಲ ವಿಡಿಯೋ ಅಪ್ಲೋಡ್; ಆರೋಪಿಗೆ ಶಿಕ್ಷೆ ಪ್ರಕಟ

ಅಪ್ರಾಪ್ತರ ಅಶ್ಲೀಲ ವಿಡಿಯೋ ಅಪ್ಲೋಡ್; ಆರೋಪಿಗೆ ಶಿಕ್ಷೆ ಪ್ರಕಟ

Nivedita Navalgund
You cannot copy content of this page