GIT add 2024-1
Laxmi Tai add
Beereshwara 33

ಇಂದು 2ನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿದೆ ನಿಮ್ಮ ಮಗು ಪ್ರಗತಿವಾಹಿನಿ

ಅಪಾರ ಸಂಖ್ಯೆಯ ಓದುಗರು, ಜಾಹಿರಾತುದಾರರು, ಗೌರವ ವರದಿಗಾರರು, ಅಭಿಮಾನಿಗಳಿಗೆ ಹೃದಯಪೂರ್ವಕ ನಮನಗಳು

Anvekar 3
Cancer Hospital 2

ನಿಮ್ಮ ಪ್ರೀತಿಯ ಹುಟ್ಟಿ ಇಂದಿಗೆ ಒಂದು ವರ್ಷ ಪೂರ್ಣವಾಗಿದೆ. 2018ರ ನವೆಂಬರ್ 21ರಂದು ಪ್ರಗತಿವಾಹಿನಿ ತನ್ನ ಮೊದಲ ಸುದ್ದಿಯ ಮೂಲಕ ಓದುಗರ ಮಡಿಲಿಗೆ ತನ್ನನ್ನು ಅರ್ಪಿಸಿಕೊಂಡಿತು. ಅಂದಿನಿಂದ ಎಂದಿಗೂ ಹಿಂದಿರುಗಿ ನೋಡದೆ ತನ್ನ ಓಟವನ್ನು ಮುಂದುವರಿಸಿದೆ. ಇದಕ್ಕೆ ಕಾರಣ ನಿಮ್ಮ ಅಪೂರ್ವವಾದ ಬೆಂಬಲ, ಪ್ರೋತ್ಸಾಹ.

ಪ್ರಗತಿವಾಹಿನಿ ಆರಂಭಿಸುವಾಗ ಅದನ್ನು ಓದುಗರು ಯಾವ ರೀತಿ ಸ್ವೀಕರಿಸುತ್ತಾರೋ ಎನ್ನುವ ಅಳುಕು, ಆತಂಕ ಇತ್ತು. ಆದರೆ ಕೇವಲ ಒಂದೇ ವರ್ಷದಲ್ಲಿ ಮುಂಚೂಣಿ ಮಾಧ್ಯಮಗಳ ಸಾಲಿಗೆ ತಂದು ನಿಲ್ಲಿಸಿದ್ದೀರಲ್ಲ, ಅದಕ್ಕಿಂತ ಖುಷಿಯ ಸಂಗತಿ ಬೇರೇನಿದೆ?

ಪ್ರಮುಖ ಪತ್ರಿಕೆಯೊಂದು ಪ್ರಗತಿವಾಹಿನಿ ಸ್ಪರ್ಧೆ ಎದುರಿಸುವುದಕ್ಕಾಗಿಯೇ ವರದಿಗಾರರ ಸಭೆ ನಡೆಸಿ ತಂತ್ರಗಾರಿಕೆ ರೂಪಿಸುತ್ತದೆ, `ನೀವು ಯಾವುದಕ್ಕೆ ಬೇಕಾದರೂ ಸುದ್ದಿ ಕಳಿಸಿ, ಪ್ರಗತಿವಾಹಿನಿಗೆ ಮಾತ್ರ ಕಳಿಸಬೇಡಿ. ಅದು ನಮ್ಮ ಪ್ರತಿಸ್ಪರ್ಧಿ’ ಎಂದು ತನ್ನ ವರದಿಗಾರರಿಗೆ ಎಚ್ಚರಿಕೆ ಕೊಡುತ್ತದೆ ಎಂದರೆ ಪ್ರಗತಿವಾಹಿನಿಯ ಯಶಸ್ಸಿಗೆ ಇನ್ನೇನು ದೃಢೀಕರಣ ಬೇಕು ಹೇಳಿ.

ಪ್ರಗತಿವಾಹಿನಿ ಯಾರಿಗೂ ಪ್ರತಿಸ್ಪರ್ಧಿ ಖಂಡಿತ ಅಲ್ಲ. ಎಲ್ಲ ಮಾಧ್ಯಮಗಳನ್ನೂ ಪ್ರೀತಿಸುತ್ತ, ಎಲ್ಲರೂ ಬೆಳೆಯಬೇಕು, ಎಲ್ಲರೊಂದಿಗೆ ಬೆಳೆಯಬೇಕೆನ್ನುವುದೇ ನಮ್ಮ ಧ್ಯೇಯ. ಆರೋಗ್ಯಕರ ಸ್ಪರ್ಧೆಯ ಮೂಲಕ ಮುನ್ನಡೆಯೋಣ ಎನ್ನುವುದೇ ನಮ್ಮ ನಮ್ರ ವಿನಂತಿ.

ಹಲವಾರು ಪತ್ರಕರ್ತ ಸಹೋದ್ಯೋಗಿಗಳು ತಮ್ಮ ಇತಿ ಮಿತಿ ಮೀರಿ ಪ್ರಗತಿವಾಹಿನಿಗೆ ಸಹಕಾರ ನೀಡುತ್ತ ಬಂದಿದ್ದಾರೆ. ಆ ಎಲ್ಲರಿಗೆ ಪ್ರಗತಿವಾಹಿನಿ ಚಿರಋಣಿಯಾಗಿರುತ್ತದೆ.

ಓದುಗರು ನಿರಂತರವಾಗಿ ಪ್ರಗತಿವಾಹಿನಿಯ ಬೆನ್ನಿಗಿದ್ದಾರೆ. ಹಲವಾರು ಸಂದರ್ಭದಲ್ಲಿ ತಿದ್ದಿ, ತೀಡಿದ್ದಾರೆ. ಸುದ್ದಿಗಳನ್ನು ಕಳಿಸಿ, ಪ್ರಕಟಿಸುವಂತೆ ಪ್ರಿತಿಯ ಒತ್ತಡ ಹೇರಿದ್ದಾರೆ. ಎಲ್ಲರನ್ನೂ ತೃಪ್ತಿಪಡಿಸಲು ಸಾಧ್ಯವಾಗಿಲ್ಲದಿದ್ದರೂ ಯಾರೂ ನಮ್ಮ ಕೈ ಬಿಟ್ಟಿಲ್ಲ.

ಇಂದು ಗೂಗಲ್  Ranking ನಲ್ಲಿ ಪ್ರಗತಿವಾಹಿನಿ ಬೆಳಗಾವಿ ಜಿಲ್ಲೆಯ ಬೇರೆಲ್ಲ ವೆಬ್ ಸೈಟ್ ಗಳಿಗಿಂತ ಗಮನಾರ್ಹ ಅಂತರದ ಮುಂಚೂಣಿಯಲ್ಲಿದೆ. ಕರ್ನಾಟಕ ಮಾತ್ರವಲ್ಲದೆ, ದೇಶದ ವಿವಿಧೆಡೆ, ಅಮೇರಿಕ, ಸಿಂಗಾಪುರ, ಆಸ್ಟ್ರೇಲಿಯಾ, ಲಂಡನ್ ಸೇರಿದಂತೆ ವಿಶ್ವದ ನಾನಾ ಭಾಗಗಳಲ್ಲಿ ಪ್ರಗತಿವಾಹಿನಿಗೆ ನಿರಂತರ ಓದುಗರಿದ್ದಾರೆ.

ಅನೇಕ ಹಿತೈಷಿಗಳು ಜಾಹಿರಾತುಗಳನ್ನು ನೀಡಿ ಪ್ರೋತ್ಸಾಹಿಸುತ್ತಿದ್ದಾರೆ. ಜಾಹಿರಾತುಗಳಿಲ್ಲದೆ ಮಾಧ್ಯಮ ಸಂಸ್ಥೆ ಉಳಿಯುವುದು, ಬೆಳೆಯುವುದು ಕಷ್ಟ ಎನ್ನುವುದು ನಿಮಗೂ ಗೊತ್ತಿದೆ. ಹಾಗಾಗಿ ಇನ್ನು ಮುಂದೆ ಕೂಡ ನಿಮ್ಮ ಸಹಕಾರ, ಪ್ರೋತ್ಸಾಹವನ್ನು ಬಯಸುತ್ತೇವೆ.

Emergency Service

ನಿಮ್ಮ ಸಲಹೆ, ಸೂಚನೆಗಳಿಗೆ ಸದಾ ಸ್ವಾಗತ. ನಿರಂತರ ಸಹಕಾರ, ಬೆಂಬಲವಿರಲಿ. ಪ್ರಗತಿವಾಹಿನಿಯನ್ನು ಇನ್ನಷ್ಟು ಬೆಳೆಸುತ್ತ, ಜೊತೆಗೆ ನೀವೂ ಬೆಳೆಯಿರಿ ಎನ್ನುವ ಸದಾಶಯದೊಂದಿಗೆ,

ನಮಸ್ಕಾರ

ಎಂ.ಕೆ.ಹೆಗಡೆ

ಪ್ರಧಾನ ಸಂಪಾದಕ

ವಾಟ್ಸಪ್ -8197712235

hegdemk@gmail.com

—————-

ಸಂಬಂಧಿಸಿದ ಸುದ್ದಿ

ನಿಮ್ಮ ಪ್ರೀತಿಯ ಪ್ರಗತಿವಾಹಿನಿಗೆ ವಾರ್ಷಿಕೋತ್ಸವದ ಸಂಭ್ರಮ

 

Bottom Add3
Bottom Ad 2