*12 ದಿನ ಕಳೆದರೂ ಜಗ್ಗದ ಆಶಾ ಕಾರ್ಯಕರ್ತೆಯರು*: *ಮತ್ತೆ ಸಂಧಾನಕ್ಕೆ ಮುಂದಾದ ಖಾದರ್, ಇಂದಾದರೂ ಸಿಗುತ್ತಾ ಪರಿಹಾರ?*

ಪ್ರಗತಿವಾಹಿನಿ ಸುದ್ದಿ: ಆಶಾ ಕಾರ್ಯಕರ್ತೆಯರ ಹೋರಾಟ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಮಳೆ, ಚಳಿ ಯಾವುದಕ್ಕೂ ಜಗ್ಗದೆ ಸಾವಿರಾರು ಮಹಿಳೆಯರು ಬೀದಿಯಲ್ಲೇ ಹೋರಾಟ ಮುಂದುವರಿಸಿದ್ದಾರೆ. ಮುಖ್ಯಮಂತ್ರಿ ಲಿಖಿತ ಭರವಸೆ ನೀಡುವುದಿಲ್ಲ ಎಂಬ ನಿಲುವು ಪ್ರಕಟಿಸಿದರೂ ಕಾರ್ಯಕರ್ತೆಯರು ತಮ್ಮ ಪಟ್ಟು ಸಡಿಲಿಸಿಲ್ಲ. ಇದೀಗ ಹೋರಾಟಕ್ಕೆ ತೆರೆ ಎಳೆಯಲು ಆರೋಗ್ಯ ಸಚಿವ ಯು.ಟಿ. ಖಾದರ್ ಮತ್ತೊಂದು ಸುತ್ತಿನ ಮಾತುಕತೆಗೆ ಮುಂದಾಗಿದ್ದಾರೆ. ಈ ಸಭೆಯಲ್ಲಾದರೂ ಬೇಡಿಕೆಗಳಿಗೆ ಪರಿಹಾರ ಸಿಗುತ್ತಾ ಎಂಬ ಕುತೂಹಲ ಮೂಡಿದೆ. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಯುತ್ತಿರುವ ಆಶಾ ಕಾರ್ಯಕರ್ತೆಯರ ಅನಿರ್ದಿಷ್ಟಾವಧಿ … Continue reading *12 ದಿನ ಕಳೆದರೂ ಜಗ್ಗದ ಆಶಾ ಕಾರ್ಯಕರ್ತೆಯರು*: *ಮತ್ತೆ ಸಂಧಾನಕ್ಕೆ ಮುಂದಾದ ಖಾದರ್, ಇಂದಾದರೂ ಸಿಗುತ್ತಾ ಪರಿಹಾರ?*