Beereshwara add4
Crease wise add 8
KLE1099 Add

ಕನ್ನಡದ ಅಭಿಮಾನಕ್ಕೆ 500 ರೂ. ದಂಡ ವಿಧಿಸಿದ ಕರ್ನಾಟಕದ ಪೊಲೀಸರು!

ಬೆಂಗಳೂರಿನ ಬ್ಯಾಟರಾಯನಪುರ ಠಾಣೆ ಪೊಲೀಸರು ಈ ಸಾಧನೆ ಮಾಡಿದ್ದಾರೆ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು –  ನಂಬರ್ ಪ್ಲೇಟ್ ಕೆಳಗಡೆ ಕನ್ನಡ ಧ್ವಜದ ಬಣ್ಣದ ಗೆರೆ ಎಳೆದಿದ್ದಕ್ಕಾಗಿ ಬೈಕ್ ಸವಾರನಿಗೆ ಪೊಲೀಸರು 500 ರೂ. ದಂಡ ವಿಧಿಸಿದ್ದಾರೆ.
ಬೆಂಗಳೂರಿನ ಬ್ಯಾಟರಾಯನಪುರ ಠಾಣೆ ಪೊಲೀಸರು ಈ ಸಾಧನೆ ಮಾಡಿದ್ದಾರೆ.
ಈ ಸ್ಕೂಟರ್ ನ ನಂಬರ್ ಪ್ಲೇಟ್ ನಲ್ಲಿ ಕನ್ನಡದ ಅಭಿಮಾನಿ ಎಳೆದ ಕನ್ನಡದ ಬಾವುಟದ ಗೆರೆ  ಪೋಲಿಸರ ಕಣ್ಣಿಗೆ ಬಿದ್ದಿದೆ. ಬಾಪೂಜಿ ನಗರದಲ್ಲಿ ಆತನನ್ನು ನಿಲ್ಲಿಸಿದ ಪೊಲೀಸರು 500 ರೂಪಾಯಿ   ದಂಡ ಕಟ್ಟಿಸಿಕೊಂಡರು.
ದಂಡದ ಪಾವತಿಯಲ್ಲಿ ಡಿಫರಂಟ್ ರಜಿಸ್ಟರ್ಡ್ ನಂಬರ್ ಪ್ಲೇಟ್ ಎಂದು ಉಲ್ಲೇಖಿಸಲಾಗಿದೆ. ಇದಕ್ಕೆ 500 ರೂ. ದಂಡ ವಿಧಿಸುವ ಮೂಲಕ ಪೊಲೀಸರು ಸಾಧನೆ ಮೆರೆದಿದ್ದಾರೆ. ಕನ್ನಡದ ರಾಜಧಾನಿ ಬೆಂಗಳೂರಿನಲ್ಲೇ ಕನ್ನಡಿಗರಿಗೆ ಈ ಗತಿ.
ಎಂತೆಂತಹ ವಿಚಿತ್ರ ನಂಬರ್ ಪ್ಲೇಟ್ ಹಚ್ಚಿಕೊಂಡು ಲಕ್ಷಾಂತರ ವಾಹನಗಳು ತಿರುಗುತ್ತಿದ್ದರೂ ಪೊಲೀಸರ ಕಣ್ಣಿಗೆ ಈ ಕನ್ನಡ ಧ್ವಜದ ಗೆರೆ ಕಾಣಿಸಿದ್ದಕ್ಕೆ ಮೆಚ್ಚಲೇಬೇಕು!