ಮೆಡಿಕಲ್ ಸೀಟ್ ಬ್ಲಾಕಿಂಗ್ ನಲ್ಲಿ 1,100 ಕೋಟಿ ಅವ್ಯವಹಾರ

ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಶಂಕರ್ ಬಿದರಿ ಆರೋಪ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದಲ್ಲಿ ಮೆಡಿಕಲ್ ಸೀಟ್ ಬ್ಲಾಕಿಂಗ್ ಅವ್ಯವಹಾರ ನಡೆದಿದ್ದು, ಬರೋಬ್ಬರಿ 1,100 ಕೋಟಿ ಮೆಡಿಕಲ್ ಸೀಟು ಹಗರಣ ಆಗಿದೆ ಎಂದು ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಶಂಕರ್ ಬಿದರಿ ಆರೋಪಿಸಿದ್ದಾರೆ.

ತಮ್ಮ ಫೇಸ್‍ಬುಕ್ ಪೇಜ್‍ನಲ್ಲಿ ಬರೆದುಕೊಂಡಿರುವ ಶಂಕರ ಬಿದರಿ, ಮೆಡಿಕಲ್ ಸೀಟ್​ ಬ್ಲಾಕಿಂಗ್​ನಲ್ಲಿ ಬರೋಬ್ಬರಿ 1,100 ಕೋಟಿ ಹಣ ವ್ಯವಹಾರವಾಗಿದೆ. ಖಾಸಗಿ ಮೆಡಿಕಲ್ ಕಾಲೇಜುಗಳು ಇದರಿಂದ ಸಾವಿರಾರು ಕೋಟಿ ಹಣ ಲೂಟಿ ಮಾಡಿದ್ದಾರೆ. ಖುದ್ದು ರಾಜೀವ್ ಗಾಂಧಿ ಆರೋಗ್ಯ ವಿವಿ ಕುಲಪತಿಗಳಿಗೆ ಅಕ್ರಮದ ಕುರಿತು ತನಿಖೆ ಮಾಡಿ ಎಂದು ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಪತ್ರ ಬರೆದಿದ್ದರೂ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದಿದ್ದಾರೆ.

ಸಾವಿರಾರು ಕೋಟಿ ಅವ್ಯವಹಾರ ನಡೆದರೂ ಸಹ ಐಟಿ ಇಲಾಖೆ ಏನು ಮಾಡುತ್ತಿದೆ? ಖಾಸಗಿ ಲಾಬಿಗೆ ಮಣಿದು ಪ್ರಕರಣದ ಬಗ್ಗೆ ಸರ್ಕಾರ ಹಾಗೂ ಐಟಿ ಇಲಾಖೆ ಮೌನ ವಹಿಸಿದೆಯೇ? ಎಂದು ಪ್ರಸ್ನಿಸಿದ್ದಾರೆ.

ನಿವೃತ್ತ ಪೊಲೀಸ್ ಅಧಿಕಾರಿ ಶಂಕರ್ ಬಿದರಿಯವರೇ ಸ್ವತ: ಮೆಡಿಕಲ್ ಸೀಟ್ ಬ್ಲಾಕಿಂಗ್ ನಲ್ಲಿ ಸಾಅವಿರಾರು ಕೋಟಿ ಅವ್ಯವಹಾರ ನಡೆದ ಬಗ್ಗೆ ಪ್ರಸ್ತಾಪಿಸಿರುವುದು ರಾಜ್ಯಾದ್ಯಂತ ಸಂಚಲನಕ್ಕೆ ಕಾರಣವಾಗಿದೆ.