GIT add 2024-1
Laxmi Tai add
Beereshwara 33

1200 ಜನರ ಬಲಿ ಪಡೆದ ಹುಬ್ಬಳ್ಳಿ -ಧಾರವಾಡ ಕಿಲ್ಲರ್ ಬೈಪಾಸ್

ಬೃಹತ್ ಜನಾಂದೋಲನ ಆರಂಭ

Anvekar 3
Cancer Hospital 2

ಬೃಹತ್ ಜನಾಂದೋಲನ ಆರಂಭ

ಪ್ರಗತಿವಾಹಿನಿ ಸುದ್ದಿ, ಧಾರವಾಡ :   ಕಿಲ್ಲರ್ ಬೈಪಾಸ್ ರಸ್ತೆಯನ್ನು ತುರ್ತಾಗಿ ಅಗಲೀಕರಣ ಮಾಡುವಂತೆ ಬೃಹತ್ ಜನಾಂದೋಲನವೊಂದು ಆರಂಭವಾಗಿದೆ.

ಮೊನ್ನೆ ದಾವಣಗೆರೆಯ 11 ಮಹಿಳೆಯರನ್ನು ಬಲಿಪಡೆದಿರುವ ಹುಬ್ಬಳ್ಳಿ -ಧಾರವಾಡ ಬೈಪಾಸ್ ರಸ್ತೆ ಈವರೆಗೆ 1200ಕ್ಕೂ ಹೆಚ್ಚು ಜನರನ್ನು ಬಲಿ ಪಡೆದಿದೆ. ಪ್ರತಿ ನಿತ್ಯ ನಡೆಯುವ ಅಪಘಾತದಲ್ಲಿ ಸಾವಿರಾರು ಜನರು ಗಾಯಗೊಂಡಿದ್ದಾರೆ. ಆದರೆ ಈ ರಸ್ತೆಯನ್ನು ಅಗಲೀಕರಣಗೊಳಿಸುವ ಬಗ್ಗೆ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಗಂಭೀರವಾಗಿಲ್ಲ.

ಈ ಹಿನ್ನೆಲೆಯಲ್ಲಿ, ಹುಬ್ಬಳ್ಳಿಯ ಗಬ್ಬೂರ ಕ್ರಾಸ್ ನಿಂದ ಧಾರವಾಡ ತಾಲೂಕಿನ ನರೇಂದ್ರ ಕ್ರಾಸ್ ವರೆಗೆ ಬರುವ ಬೈಪಾಸ್ ಗಳ ರಸ್ತೆ ಅಗಲೀಕರಣ, ತಾಂತ್ರಿಕ ನಿರ್ಮಾಣ, ಸರ್ವಿಸ್ ರೋಡ್ ನಿರ್ಮಾಣಕ್ಕೆ ಆಗ್ರಹಿಸಿ ಸೋಮವಾರ ಹಿರಿಯ ನ್ಯಾಯವಾದಿ ಪಿ.ಎಚ್.ನೀರಲಕೇರಿ ಅವರ ನೇತೃತ್ವದಲ್ಲಿ ಪಾದಯಾತ್ರೆ ನಡೆಯಿತು.

ನರೇಂದ್ರ ಬಳಿಯ ಟೋಲ್ ನಿಂದ ಇಟಿಗಟ್ಟಿ ಗ್ರಾಮದವರೆಗೆ ನಡೆದ ಪಿ.ಎಚ್. ನೀರಲಕೇರಿಯವರ ಪಾದಯಾತ್ರೆಗೆ ಮಾಜಿ ಶಾಸಕ ಶಿವಾನಂದಅಂಬಡಗಟ್ಟಿ, ಎಐಸಿಸಿ ಸದಸ್ಯ ದೀಪಕ ಚಿಂಚೋರೆ, ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಹೆಚ್. ಕೊರವರ, ಸೇರಿದಂತೆ ಅನೇಕರು ಸಾಥ್ ನೀಡಿದರು.

ಈ ಪಾದಯಾತ್ರೆಯಲ್ಲಿ ಕೆಲಗೇರಿ ಗ್ರಾಮಸ್ಥರು, ಲಾರಿ ಮಾಲೀಕರ ಸಂಘ, ಜನಜಾಗೃತಿ ಸಂಘ ಸೇರಿದಂತೆ ಹಲವರು ಸ್ವಯಂ ಪ್ರೇರಿತವಾಗಿ ಪಕ್ಷಾತೀತವಾಗಿ ಬೆಂಬಲ ನೀಡಿದರು.

Emergency Service

ಇದೇ ವೇಳೆ ಕೆಲಗೇರಿ ಹಾಗೂ ಸುತ್ತಮುತ್ತಲಿನ ಬಡಾವಣೆ ನಿವಾಸಿಗಳು ಪಾದಯಾತ್ರೆಗೆ ಸ್ವಯಂಪ್ರೇರಿತವಾಗಿ ಬೆಂಬಲ ಸೂಚಿಸಿ, ಕಳೆದ ಇಪ್ಪತ್ತು ವರ್ಷಗಳಲ್ಲಿ ಬೈಪಾಸ್  ರಸ್ತೆಅಪಘಾತದಲ್ಲಿ ಪ್ರಾಣ ಕಳೆದುಕೊಂಡ 1200 ಅಮಾಯಕ ಜನರಿಗೆ ಶ್ರದ್ದಾಂಜಲಿ ಸಲ್ಲಿಸಿದರು. ಹಾಗೂ ಷಟ್ಪಥ ರಸ್ತೆ ನಿರ್ಮಾಣಕ್ಕೆ ಆಗ್ರಹಿಸಿದರು.

ಈ ವೇಳೆ ಕೇಂದ್ರ ಮತ್ತು ರಾಜ್ಯ ಸರಕಾರಗಳ ಹಾಗೂ ವಿಶೇಷವಾಗಿ ಜಿಲ್ಲೆಯ ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ ವಿರುದ್ದ ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು. ಈಗಲಾದರೂ ಎಚ್ಚೆತ್ತುಕೊಂಡು ಕಾಲಮಿತಿಯೊಳಗೆ ಪ್ರಾಮಾಣಿಕ ಪ್ರಯತ್ನ ಮಾಡುವ ಮೂಲಕ ಜನರ ಪ್ರಾಣ ಉಳಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.

ಹಿರಿಯ ನ್ಯಾಯವಾದಿ ಪಿ.ಎಚ್. ನೀರಲಕೇರಿ ಮಾತನಾಡಿ, ದೇಶದ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುವ ಈ ರಾಷ್ಟ್ರೀಯ ಹೆದ್ದಾರಿ ಹೊರತು ಪಡಿಸಿದ ದೇಶದ ಎಲ್ಲಾ ಬೈಪಾಸ್ ಅಗಲೀಕರಣಗೊಂಡಿವೆ. ಆದರೆ, ಇದು ಮಾತ್ರ ಎರಡು ದಶಕಗಳು ಕಳೆದರೂ ಜಿಲ್ಲೆಯ ಜನಪ್ರತಿನಿಧಿಗಳ ದಿವ್ಯನಿರ್ಲಕ್ಷ್ಯದಿಂದ ಅಭಿವೃದ್ದಿ ಕಾಣದಿರುವುದು ನೋವಿನ ಸಂಗತಿಯಾಗಿದೆ ಎಂದು ಕಿಡಿಕಾರಿದರು.

ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿ ಅಭಿವೃದ್ದಿ, ಬೈಪಾಸ್ ಅಗಲೀಕರಣ, ನಿರ್ಮಾಣ, ನಿರ್ವಹಣೆ, ಸರ್ವೀಸ್ ರೋಡ್ ಹೆಸರಿನಲ್ಲಿ ಪ್ರತಿ ವರ್ಷ ಕೋಟ್ಯಾಂತರ ರೂಪಾಯಿ ಸಂಗ್ರಹಿಸಿರುವ ರಸ್ತೆ ನಿರ್ಮಾಣ ಸಂಸ್ಥೆಯ ಗುತ್ತಿಗೆದಾರ ಅಶೋಕ ಖೇಣಿ ವಿರುದ್ದ  ರಾಜ್ಯ ಹಾಗೂ ಕೇಂದ್ರ ಸರಕಾರ ಈಗಲಾದರೂ ಛಾಟೀ ಬೀಸಬೇಕು. ಜಿಲ್ಲೆಯ ಜನಪ್ರತಿನಿಧಿಗಳು ಅವರಿಗೆ ಬಿಸಿ ತಾಕಿಸುವ ಬದಲಿಗೆ ಗುತ್ತಿಗೆದಾರರ ತಾಣಕ್ಕೆ ತಕ್ಕಂತೆ ಕುಣಿಯುವ ಬದಲಿಗೆ ಇವರು ಪಟ್ಟು ಹಿಡಿದು ಮೊದಲು ಕೆಲಸ ಮಾಡಿಸಬೇಕು ಎಂದು ಸಲಹೆ ನೀಡಿದರು.

ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಹೆಚ್. ಕೊರವರ ಮಾತನಾಡಿ, ನಂದಿ ಇನ್ಪಾಸ್ಟಕ್ಷರ್ ಮಾಲೀಕ ಅಶೋಕ ಖೇಣಿ ಹುಬ್ಬಳ್ಳಿ-ಧಾರವಾಡ ಅವಳಿನಗರ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಯಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚು ಶುಲ್ಕ ಸಂಗ್ರಹಿಸುತ್ತಿದ್ದಾರೆ.

ಹೆದ್ದಾರಿ ಅಕ್ಕಪಕ್ಕದ ಹಳ್ಳಿಗಳಿಗೆ ತೆರಳುವ ಸರ್ವೀಸ್ ರಸ್ತೆ, ಅಕ್ಕಪಕ್ಕದ ಹೊಲ, ಮನೆಗಳಿಗೆ ಹೋಗುವ ರೈತರ ಅಗತ್ಯಕ್ಕೆ ತಕ್ಕಂತೆ ರಸ್ತೆ ನಿರ್ಮಾಣ ಮಾಡಬೇಕು. ಅವಳಿನಗರ ವ್ಯಾಪ್ತಿಯಲ್ಲಿಯೇ ಕಳೆದ ಎರಡು ದಶಕಗಳಲ್ಲಿ 10 ಸಾವಿರ ಜಾನುವಾರು, 1200 ಜನ ಪ್ರಾಣ ಕಳೆದುಕೊಂಡಿದ್ದಾರೆ ಎಂದರು.

ಎಐಸಿಸಿ ಸದಸ್ಯ ದೀಪಕ ಚಿಂಚೋರೆ ಮಾತನಾಡಿ, ನಂದಿ ಇನ್ಪಾಸ್ಟಕ್ಷರ್ ಕಂಪನಿ ಮಾಲೀಕ ಅಶೋಕ ಖೇಣಿ ಅವರು ಹೆದ್ದಾರಿ ನಿರ್ವಹಣೆ, ರಸ್ತೆಯ ಅಗಲೀಕರಣ, ಹುಬ್ಬಳ್ಳಿ-ಧಾರವಾಡ ಅವಳಿನಗರ ಸುತ್ತಮುತ್ತಲಿನ 26 ಕಿಲೊ ಮೀಟರ್ ಬೈಪಾಸ್ ನಿರ್ವಹಣೆ ಹೆಸರಿನಲ್ಲಿ ಪ್ರತಿ ತಿಂಗಳು ಕೋಟ್ಯಾಂತರ ರೂಪಾಯಿ ಸುಲಿಗೆ ಮಾಡುತ್ತಿದ್ದಾರೆ. ಹೀಗಾಗಿ ಮೊದಲಿಗೆ ಯಾವುದೇ ಕಾರಣಕ್ಕೂ ಅವರಿಗೆ ಟೋಲ್ ಸಂಗ್ರಹ ಮಾಡಲು ಬಿಡಬಾರದು. ತಕ್ಷಣ ಅವರನ್ನು ಬಂಧಿಸಿ, ಟೋಲ್ ಸಂಗ್ರಹ ಸ್ಥಗಿತಗೊಳಿಸಬೇಕು ಎಂದರು.

 

Bottom Add3
Bottom Ad 2