Athani Takkennavar
Beereshwara13
GIT add4

PFI, SDPI ಸಂಘಟನೆಗಳ ಕಚೇರಿ ಮೇಲೆ NIA ಬೃಹತ್ ದಾಳಿ; ಹಲವು ಮುಖಂಡರು ವಶಕ್ಕೆ

NIA massive raid on offices of PFI, SDPI organizations; Many leaders were arrested

KLE1099 Add
ಪ್ರಗತಿವಾಹಿನಿ ಸುದ್ದಿ,​ ​ಮಂಗಳೂರು: ಕರ್ನಾಟಕ ಸೇರಿದಂತೆ ದೇಶದ 11 ರಾಜ್ಯಗಳಲ್ಲಿ ಏಕಕಾಲಕ್ಕೆ ಪಿಎಫ್ ಐ, ಎಸ್ ಡಿಪಿಐ ಸಂಘಟನೆಗಳ ಮುಖಂಡರ ಮನೆ ಹಾಗೂ ಕಚೇರಿಗಳ ಮೇಲೆ ರಾಷ್ಟ್ರೀಯ ತನಿಖಾ ದಳ (ಎನ್ ಐ ಎ) ದಾಳಿ ನಡೆಸಿದ್ದು, 106ಕ್ಕೂ ಹೆಚ್ಚು ಪಿಎಫ್ ಐ ಮುಖಂಡರನ್ನು ಬಂಧಿಸಿದೆ.
 ಕರ್ನಾಟಕದ  ದಕ್ಷಿಣ ಕನ್ನಡ, ಮಂಗಳೂರು,​ ಶಿರಸಿ,​ ಕೊಪ್ಪಳ, ಬೆಂಗಳೂರು,ಕಲಬುರ್ಗಿ, ಶಿವಮೊಗ್ಗ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಇಂದು ಮುಂಜಾನೆ 3 ಗಂಟೆಯಿಂದಲೇ ಪಿಎಫ್ ಐ ಪ್ರಮುಖರ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಿರುವ ಎನ್ ಐಎ ಅಧಿಕಾರಿಗಳು ಹಲವು ಮುಖಂದರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಮಂಗಳೂರಿನ  ನೆಲ್ಲಿಕಾಯಿ ರಸ್ತೆಯಲ್ಲಿರುವ ಪಿಎಫ್ ಐ ಕಚೇರಿ ಮೇಲೆ ಮುಂಜಾನೆ 3:30ರ ಸುಮಾರಿಗೆ  ಎನ್ ಐ ಎ ಅಧಿಕಾರಿಗಳು ದಾಳಿ  ನಡೆಸಿ ಪರಿಸೀಲನೆ ನಡೆಸಿದ್ದಾರೆ. ಎಸ್ ಡಿಪಿಐ ಜಿಲ್ಲಾ ಅಧ್ಯಕ್ಷ ಅಬೂಬಕರ್ ಕುಳಾಯಿ ಸಹೋದರನ ಮನೆಗೂ ಅಧಿಕಾರಿಗಳು ಪ್ರವೇಶಿಸಿದ್ದು, ದಾಖಲೆ ಪರಿಶೀಲನೆ ನಡೆಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಟಿಪ್ಪುನಗರದಲ್ಲಿರುವ ಅಜೂಜ್ ಅಬ್ದುಲ್ ಹೊನ್ನಾವರ್ ನಿವಾಸದ​ ​ಮೇಲೆ ದಾಳಿ ನಡೆಸಿ ಆತನನ್ನು ವಶಕ್ಕೆ ಪಡೆದಿದ್ದಾರೆ. ಕೊಪ್ಪಳ ಪಿಎಫ್ ಐ ಸಂಘಟನೆ ಜಿಲ್ಲಾಧ್ಯಕ್ಷ ಅಬ್ದುಲ್ ಫಯಾಜ್ ಮನೆ ಮೇಲೆ ದಾಳಿ ನಡೆಸಿ ಆತನನ್ನು ವಶಕ್ಕೆ ಪಡೆದಿದ್ದಾರೆ.
ಈ ನಡುವೆ ಡಿ.ಜೆ.ಹಳ್ಳಿ, ಕೆ.ಜಿ ಹಳ್ಳಿ ಗಲಭೆಗೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿಯೂ ದಾಳಿ ನಡೆಸಿರುವ ಅಧಿಕಾರಿಗಳು ಪ್ರೆಜರ್ ಟೌನ್ ನಲ್ಲಿರುವ ಪಿಎಫ್ ಐ ಸಂಘಟನೆ ಕಚೇರಿಗೆ ಬೀಗ ಜಡಿದು, ಪ್ರಮುಖರನ್ನು ವಶಕ್ಕೆ ಪಡೆದಿದ್ದಾರೆ. ಪಿಎಫ್ ಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎ.ಕೆ.ಆಶ್ರಫ್,  ಮೊಹಿದ್ದೀನ್ ಹಳೆಗುಂದಿ, ನವಾಜ್ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕಲಬುರ್ಗಿಯಲ್ಲಿ ಪಿಎಫ್ ಐ ಸಂಘಟನೆಯ ಇಬ್ಬರು ಮುಖಂಡರನ್ನು ವಶಕ್ಕೆ ಪಡೆಯಲಾಗಿದೆ. ಒಟ್ಟಾರೆ ರಾಜ್ಯದಲ್ಲಿ  ಒಟ್ಟು 20ಕ್ಕೂ ಹೆಚ್ಚು ಪಿಎಫ್ ಐ ಮುಖಂ​ಡ​ರನ್ನು ಎನ್ ಐಎ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
PFI, SDPI ಬ್ಯಾನ್ ಮಾಡುವ ನಿಟ್ಟಿನಲ್ಲಿ NIA ದಾಳಿ:
ದೇಶದಲ್ಲಿ ಪಿಎಫ್ ಐ ಹಾಗೂ ಎಸ್ ಡಿ ಪಿಐ ಸಂ​ಘಟನೆ ನಿಷೇಧ ಮಾಡುವ ನಿಟ್ಟಿನಲ್ಲಿ ಕೆಲಸ ನಡೆಯುತ್ತಿದ್ದು, ಈ ನಿಟ್ಟಿನಲ್ಲಿ ದಾಳಿ ನಡೆದಿದೆ ಎಂದು ಎನ್ ಐ ಎ ದಾಳಿ ಕುರಿತು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದ್ದಾರೆ.
ರಾಜ್ಯದ ವಿವಿಧೆಡೆ ಹಾಗೂ ದೇಶದ ಹಲವೆಡೆಗಳಲ್ಲಿ ಎನ್ ಐಎ ಏಕಕಾಲದಲ್ಲಿ ದಾಳಿ ಕುರಿತು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವರು, ಪಿಎಫ್ ಐ, ಎಸ್ ಡಿಪಿಐ  ಸಂಘಟನೆ ಬ್ಯಾನ್ ಮಾಡುವ ಕೆಲಸ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ.  ಸಂಘಟನೆಗಳನ್ನು ಬ್ಯಾನ್ ಮಾಡಲು ಸಮಯ ಬರಬೇಕು ಎಂದರು.
ರಾಜ್ಯದಲ್ಲಿ ಭಯೋತ್ಪಾದನೆಗೆ ಸಂಚು ರೂಪಿಸಿದ್ದ ಶಂಕಿತ ಉಗ್ರರನ್ನು ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗ ಪೊಲೀಸರಿಗೆ ಅಭಿನಂದನೆಗಳನ್ನು ಹೇಳಬೇಕು. ಧರ್ಮ ನೋಡಿ ಪೊಲೀಸರು ಕಾರ್ಯಾಚರಣೆ ಮಾಡಿಲ್ಲ. ಹಲವೆಡೆ  ರಾಜ್ಯ ಪೊಲೀಸರ ವಿಶೇಷ ತಂಡ ದಾಳಿ ನಡೆಸುತ್ತಿದೆ. ಬೆಂಗಳೂರು, ಮಂಗಳೂರು, ಪುತ್ತೂರಿನಲ್ಲಿ ದಾಳಿ ನಡೆಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ 6 ಕಡೆಗಳಲ್ಲಿ ಪೊಲೀಸರು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ ಎಂದು ಹೇಳಿದರು.
ಇನ್ನೊಂದೆಡೆ ಬೆಂಗಳೂರು ಹಾಗೂ ಮಂಗಳೂರಿನಲ್ಲಿ  ಎನ್ ಐ ಎ ಅಧಿಕಾರಿಗಳು ದಾಳಿ ನಡೆಸಿದ ವಿಚಾರ ಗೊತ್ತಾಗುತ್ತಿದ್ದಂತೆ ಎಸ್ ಡಿಪಿ ಐ, ಪಿಎಫ್ ಐ ಸಂಘಟನೆ ಕಾರ್ಯಕರ್ತರು ಪ್ರಭಟನೆ ನಡೆಸಿದ್ದು, ಗೋ ಬ್ಯಾಕ್ ಎನ್ ಐ ಎ ಎಂದು ಆಕ್ರೋಶ ವ್ಯಕ್ತಪಡಿಸಿದ ಘಟನೆಯೂ ನಡೆದಿದೆ.

ಶಿರಸಿಯಲ್ಲಿಯೂ NIA ಅಧಿಕಾರಿಗಳ ದಾಳಿ; ಇಬ್ಬರು PFI ಮುಖಂಡರು ವಶಕ್ಕೆ

ಕರ್ನಾಟಕ ಸೇರಿ 6 ರಾಜ್ಯಗಳಲ್ಲಿ NIA ಕಾರ್ಯಾಚರಣೆ; 13 ಜಿಲ್ಲೆಗಳಲ್ಲಿ ಶೋಧ

ಭಟ್ಕಳದಲ್ಲಿ ಶಂಕಿತ ಎನ್ ಐಎ ವಶಕ್ಕೆ

Nivedita Navalgund
You cannot copy content of this page