Advertisement -Home Add

ನಾಳೆಯಿಂದಲೇ ಪಿಯುಸಿ ಪ್ರವೇಶ ಆರಂಭ

ಗುರುವಾರದಿಂದ 4 ದಿನ ಅರ್ಜಿ ವಿತರಣೆ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯದಲ್ಲಿ ಗುರುವಾರದಿಂದಲೇ ಪಿಯುಸಿ ಪ್ರವೇಶ ಆರಂಭಿಸುವಂತೆ ರಾಜ್ಯಸರಕಾರ ಸೂಚಿಸಿದೆ.

ನಾಳೆಯಿಂದ 4 ದಿನ ಅರ್ಜಿ ಫಾರ್ಮ್ ವಿತರಿಸಿ ಪ್ರವೇಶ ನೀಡುವಂತೆ, ಕಡಿಮೆ ಶುಲ್ಕ ಪಡೆಯುವಂತೆ ಪದವಿಪೂರ್ವ ಕಾಲೇಜುಗಳಿಗೆ ಸೂಚಿಸಲಾಗಿದೆ.

ಈವರೆಗೆ ಕೊರೋನಾ ಹಿನ್ನೆಲೆಯಲ್ಲಿ ಪ್ರವೇಶಕ್ಕೆ ತಡೆ ನೀಡಲಾಗಿತ್ತು. ಎಸ್ಎಸ್ಎಲ್ ಸಿ ಫಲಿತಾಂಶ ಪ್ರಕಟವಾಗಿರುವುದರಿಂದ ಇದೀಗ 2020 -21ನೇ ಸಾಲಿಗೆ ಪ್ರವೇಶ ಆರಂಭಿಸುವಂತೆ ತಿಳಿಸಲಾಗಿದೆ.