
Shocking News: ಮೂಡಲಗಿ ಹಳ್ಳದಲ್ಲಿ ಸಿಕ್ಕಿದ ಭ್ರೂಣಗಳ ಪೋಸ್ಟ್ ಮಾರ್ಟಂ ವರದಿ ಬಹಿರಂಗ
Shocking News: Post mortem report of embryos found in a ditch


ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಮೂಡಲಗಿಯ ಹಳ್ಳದಲ್ಲಿ ಪತ್ತೆಯಾಗಿದ್ದ 7 ಭ್ರೂಣಗಳ ಪರೀಕ್ಷಾ ವರದಿ(ಪಿಎಂ) ಬಂದಿದೆ.
ಏಳರಲ್ಲಿ ಆರು ಗಂಡು ಭ್ರೂಣವಾಗಿದ್ದು, ಒಂದು ಗರ್ಭಕೋಶವಾಗಿರುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹೇಶ್ ಕೋಣಿ ಅವರು ಸ್ಪಷ್ಟಪಡಿಸಿದ್ದಾರೆ.
ಶುಕ್ರವಾರ ಮೂಡಲಗಿ ಬಳಿ ಹಳ್ಳಿದಲ್ಲಿ ಬಾಕ್ಸ್ ಒಂದರಲ್ಲಿ 7 ಭ್ರೂಣಗಳು ಪತ್ತೆಯಾಗಿದ್ದವು . ಹೆಣ್ಣು ಭ್ರೂಣಗಳನ್ನು ಹತ್ಯೆ ಮಾಡಿರಬಹುದು ಎಂದು ಶಂಕಿಸಲಾಗಿತ್ತು.
ಈ ಸಂಬಂಧ ವಿವಿಧ ಸ್ಕ್ಯಾನಿಂಗ್ ಸೆಂಟರ್ ಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿ, ಬೀಗ ಕೂಡ ಹಾಕಿದ್ದರು.
ಇದೀಗ ಭ್ರೂಣಗಳ ಲಿಂಗ ಪತ್ತೆಯಾಗಿದ್ದು ಎಲ್ಲ 6 ಭ್ರೂಣಗಳೂ ಗಂಡು ಎನ್ನುವುದು ಗೊತ್ತಾಗಿದೆ. ಒಂದು ಮಾತ್ರ ಗರ್ಭ ಕೋಶ ಎಂದು ಗೊತ್ತಾಗಿದೆ. ಆದರೆ ಯಾವ ಕಾರಣಕ್ಕೆ ಅವುಗಳನ್ನು ಹತ್ಯೆ ಮಾಡಲಾಗಿದೆ ಎನ್ನುವುದು ತನಿಖೆಯಿಂದ ಗೊತ್ತಾಗಬೇಕಿದೆ.
ಸಮಗ್ರ ತನಿಖೆಗೆ ನಿರ್ಧಾರ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ
ಮೂಡಲಗಿಯ ಹಳ್ಳದಲ್ಲಿ ಪತ್ತೆಯಾಗಿರುವ ಭ್ರೂಣಗಳು ಗಂಡು ಭ್ರೂಣಗಳಾಗಿರುವುದರಿಂದ ಹೆಣ್ಣು ಭ್ರೂಣ ಹತ್ಯೆ ಅಲ್ಲ ಎಂಬುದು ಗೊತ್ತಾಗುತ್ತದೆ.
ಆರು ಗಂಡು ಭ್ರೂಣಗಳು ಸ್ಥೂಲ ಜನ್ಮಜಾತ ಬೆಳವಣಿಗೆಯ ವೈಪರೀತ್ಯ ಹೊಂದಿರುವುದು ಎಂಬುದು ವೈದ್ಯಕೀಯ ತಜ್ಞರ ವರದಿಯಲ್ಲಿ ತಿಳಿಸಲಾಗಿರುತ್ತದೆ.
ಫಾರ್ಮಾಲಿನ್ ಬಳಸಿ ಸಂಗ್ರಹಾಲಯದಲ್ಲಿ ಶೇಖರಿಸಿಡುವ ಪ್ರಯತ್ನ ಮೇಲ್ನೋಟಕ್ಕೆ ಕಂಡುಬಂದಿರುತ್ತದೆ.
ಆದಾಗ್ಯೂ ಭ್ರೂಣಗಳು ಹೇಗೆ ಸಂಗ್ರಹಿಸಲಾಯಿತು ಎಂಬುದನ್ನು ಸಮಗ್ರವಾಗಿ ತನಿಖೆ ನಡೆಸಲಾಗುವುದು.
ಹೇಗೆ ಇದ್ದರೂ ಇದು ಕಾನೂನು ಬಾಹಿರ ಆಗಿರುವುದರಿಂದ ಆ ನಿಟ್ಟಿನಲ್ಲಿ ಸಮಗ್ರ ತನಿಖೆ ನಡೆಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ.
7 ಭ್ರೂಣಗಳ ಮೃತದೇಹ ಪತ್ತೆ ಕೇಸ್; ತನಿಖಾ ತಂಡ ರಚಿಸಿದ DHO
ಬೆಳಗಾವಿಯಲ್ಲಿ ಅವ್ಯಾಹತವಾಗಿ ನಡೆಯುತ್ತಿದೆಯೇ ಹೆಣ್ಣು ಭ್ರೂಣಗಳ ಹತ್ಯೆ?
ಬೆಳಗಾವಿ: ಮೂಡಲಗಿ ಹಳ್ಳದಲ್ಲಿ ತೇಲಿ ಬಂತು 7 ನವಜಾತ ಶಿಶುಗಳ ಮೃತದೇಹ

ನಿಖರ, ನಿರಂತರ ಮತ್ತು ನಿಷ್ಪಕ್ಷಪಾತ ಸುದ್ದಿಗಳಿಗಾಗಿ ಪ್ರಗತಿವಾಹಿನಿ ಗ್ರುಪ್ ಸೇರಲು NEWS ಎಂದು ಟೈಪ್ ಮಾಡಿ 8197712235 ನಂಬರ್ ಗೆ ವಾಟ್ಸಪ್ ಮಾಡಿ.
ದಯವಿಟ್ಟು ನಮ್ಮ YouTube ಚಾನೆಲ್ ಗೆ ಸಬ್ ಸ್ಕ್ರೈಬ್ ಮಾಡಿ