*ಕಾವಾಡಿಗಳ ನೇಮಕಾತಿಯಲ್ಲಿಯೂ ಭಾರಿ ಅಕ್ರಮ ಬಹಿರಂಗ*

ಪ್ರಗತಿವಾಹಿನಿ ಸುದ್ದಿ: ಸರ್ಕಾರಿ ಹುದ್ದೆಗಳ ನೇಮಕಾತಿಯಲ್ಲಿ ಇತ್ತೀಚೆಗೆ ಸಾಲು ಸಾಲು ಅಕ್ರಮಗಳು ಬೆಳಕಿಗೆ ಬರುತ್ತಿವೆ. ಇದೀಗ ಆನೆ ಕಾವಾಡಿಗಳ ಹುದ್ದೆಗಳ ನೇಮಕಾತಿಯಲ್ಲೂ ಭಾರಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಆನೆಗಳ ಜೊತೆ ಒಡನಾಟವಿಲ್ಲದ, ನಕಲಿ ದಾಖಲೆ ನೀಡಿದವರಿಗೆ, ವಯೋಮಿತಿ ಮೀರಿದವರಿಗೂ ಹುದ್ದೆ ನೀಡಲಾಗಿದೆ. ಮೈಸೂರು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಆಯ್ಕೆ ಪ್ರಾಧಿಕಾರದಿಂದ ಇತ್ತೀಚೆಗೆ ಮೈಸೂರು ವೃತ್ತದ 26 ಹುದ್ದೆಗಳಿಗೆ ಕಾವಾಡಿಗಳ ನೇಮಕಾತಿಗೆ ನೇರ ಸಂದರ್ಶನ ನಡೆದಿತ್ತು. ಇದೇ ಸೆಪ್ಟೆಂಬರ್ 30 ಹಾಗೂ ಅಕ್ಟೋಬರ್ 1 … Continue reading *ಕಾವಾಡಿಗಳ ನೇಮಕಾತಿಯಲ್ಲಿಯೂ ಭಾರಿ ಅಕ್ರಮ ಬಹಿರಂಗ*