*ಕೇದಾರನಾಥ ಯಾತ್ರೆ ವೇಳೆ ದುರಂತ: ಕೊಪ್ಪಳ ಮೂಲದ ಅರ್ಚಕ ಹೃದಯಾಘಾತದಿಂದ ಸಾವು*

ಪ್ರಗತಿವಾಹಿನಿ ಸುದ್ದಿ: ಕೇದಾರನಾಥ ಯಾತ್ರೆಗೆ ತೆರಳಿದ್ದ ರಾಜ್ಯದ ಅರ್ಚಕರೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ನಡೆದಿದೆ. ಕೊಪ್ಪಳ ಮೂಲದ 32 ವರ್ಷದ ಸಿದ್ದಯ್ಯ ಹಿರೇಮಠ ಮೃತ ಅರ್ಚಕರು. ಜೂನ್ 10ರಂದು ಕೇದಾರನಾಥ ಯಾತ್ರೆಗೆ ತೆರಳಿದ್ದ ಸಿದ್ದಯ್ಯ ಹಿರೇಮಠ, ವಿವಿಧ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿ, ಕೇದಾರನಾಥನ ದರ್ಶನವನ್ನೂ ಪಡೆದು ಋಷಿಕೇಶಕ್ಕೆ ಆಗಮಿಸಿದ್ದರು. ಋಷಿಕೇಶಕ್ಕೆ ಬಂದಿದ್ದಾಗ ಅವರಿಗೆ ಹೃದಯಾಘಾತವಾಗಿದೆ. ಹೃದಯಾಘಾತದಿಂದ ಸಿದ್ದಯ್ಯ ಹಿರೇಮಠ ಕೊನೆಯುಸಿರೆಳೆದಿದ್ದಾರೆ. *ಆಟೋ ಚಾಲಕನ ಮೇಲೆ ಹರಿದ ಕ್ರೇನ್; ವ್ಯಕ್ತಿ ಸ್ಥಳದಲ್ಲೇ ದುರ್ಮರಣ*