*ಕೆಎಲ್‌ಇ ಕಟ್ಟಿದ ಸಪ್ತಋಷಿಗಳು*

13 ನವ್ಹೆಂಬರ್‌ 2026 ಕೆಎಲ್‌ಇ ಸಂಸ್ಥೆಯ 111ನೇ ಸಂಸ್ಥಾಪನಾ ದಿನಾಚರಣೆ ತನ್ನಿಮಿತ್ತ ಲೇಖನ ಪ್ರಾ. ಬಿ.ಎಸ್.ಗವಿಮಠ (ನಿವೃತ್ತ -ಆಜೀವ ಸದಸ್ಯರು, ಕೆಎಲ್‍ಇ ಸಂಸ್ಥೆ) ಏಳು ಜನ ಯುವಕರು ಉತ್ತರ ಕರ್ನಾಟಕ ಅಂದರೆ ಅಂದಿನ ಮುಂಬೈ ಕರ್ನಾಟಕದ ಜಿಲ್ಲೆಗಳಿಂದ ಪುಣೆಗೆ ಹೋಗಿ ಸ್ನಾತಕೋತ್ತರ ಪದವೀಧರರಾಗಿ ಮರಳಿ ಬಂದಾಗ 22, 23, 24ರ ತರುಣರಾಗಿದ್ದರು. 1914ರಲ್ಲಿ ಅವರು ಬೆಳಗಾವಿ ಕಲ್ಮಠದಲ್ಲಿ  ಸಭೆ ಮಾಡಿ ಬೆಳಗಾವಿಯಲ್ಲಿಯೇ ಡೆಕ್ಕನ್ ಎಜ್ಯುಕೇಶನ್ ಸೊಸೈಟಿ ಮಾದರಿಯ ಒಂದು ಶಿಕ್ಷಣ ಸಂಸ್ಥೆ ಸ್ಥಾಪಿಸಲು ನಿರ್ಧರಿಸಿದರು. ಅವರಿಗೆ ಸರ್ವ ರೀತಿಯಿಂದಲೂ ಪ್ರೋತ್ಸಾಹಿಸಿದವರು ರಾವ್ ಬಹದ್ದೂರ್ ಅರಟಾಳ ರುದ್ರಗೌಡರು. ಅವರು ನೀಡಿದ ಆರ್ಥಿಕ ಸಹಾಯದಿಂದ 1916 ರಲ್ಲಿ ಬೆಳಗಾವಿಯ ಕೋಟೆಯಲ್ಲಿ ಗಿಲಗಂಚಿ ಅರಟಾಳ ಆಂಗ್ಲೋ ವ್ಹರ್ನಾಕ್ಯುಲರ ಶಾಲೆ ಪ್ರಾರಂಭಿಸಿದರು. 1917ರಲ್ಲಿ ಸಂಸ್ಥೆಯನ್ನು ಸರಕಾರದಲ್ಲಿ ನೋಂದಾಯಿಸಿದರು. ಹತ್ತು ಜನರ ಆಡಳಿತ ಮಂಡಳಿಯಲ್ಲಿ ರಾ. ಬ. ಅರಟಾಳ ರುದ್ರಗೌಡರು ಅಧ್ಯಕ್ಷರಾಗಿ, ರಾ.ಬ.ವಿ.ಜಿ.ನಾಯಕ ಚಚಡಿ  ದೇಸಾಯಿ ಉಪಾಧ್ಯಕ್ಷರಾಗಿ,  ರಾ.ಬ.ವೈಜಪ್ಪ ಅನಿಗೋಳರವರು  ಹಾಗೂ ಲಿಂಗಾಯತ ಸಮಾಜದ ಅತ್ಯಂತ ಮಾನ್ಯತೆ ಪಡೆದ ಪ್ರತಿನಿಧಿಗಳಾಗಿ ಕಾರ್ಯನಿರ್ವಹಿಸಿದರು. ಅಂದು ಅವರು ನೆಟ್ಟ ಸಸಿ ಇಂದು ಬೃಹದಾಕಾರವಾಗಿ, 320 ಶಾಖೆಗಳಲ್ಲಿ ಟಿಸಿಲೊಡೆದು ಇಡೀ ವಿಶ್ವದ ತುಂಬಾ ಪ್ರಸಿದ್ಧಿ ಪಡೆದಿದೆ. ಆ ಏಳು ಜನ ಶಿಕ್ಷಕರಾದ  ಪಂಡಿತಪ್ಪ ಚಿಕ್ಕೋಡಿ (ಬೆಳಗಾವಿ), ಎಂ. ಆರ್. ಸಾಖರೆ (ಬೆಳಗಾವಿ), ಎಸ್. ಎಸ್. ಬಸವನಾಳ (ಧಾರವಾಡ), ಬಿ.ಬಿ. ಮಮದಾಪುರ (ಗೋಕಾಕ), ಎಚ್.ಎಫ್. ಕಟ್ಟಿಮನಿ (ಹುಬ್ಬಳ್ಳಿ), ಬಿ.ಎಸ್. ಹಂಚಿನಾಳ (ಹುಬ್ಬಳ್ಳಿ), ಸರ್ದಾರ್ ವೀರನಗೌಡ ಪಾಟೀಲ (ಹುಬ್ಬಳ್ಳಿ). ಇವರು ಸಂಸ್ಥೆಯ ಆಜೀವ ಸದಸ್ಯರಾದರು. ಸಂಸ್ಥೆಯ ಸಮಸ್ತ ಆಗುಹೋಗುಗಳಿಗೆ ತಾವೇ ಹೊಣೆಹೊತ್ತು ನಿಸ್ವಾರ್ಥಸೇವೆ ನೀಡಿದರು. ಸರ್ಕಾರದಲ್ಲಿ ಉನ್ನತ ಹುದ್ದೆಗಳು ಸಹಜವಾಗಿ ಲಭಿಸುತ್ತಿದ್ದ ಕಾಲದಲ್ಲಿ ಅವುಗಳಿಗೆ ಆಸೆ ಪಡದೆ ಫಲಾಪೇಕ್ಷೆ ಇಲ್ಲದೆ ವಿದ್ಯಾದಾನ ಮಾಡಿದ ಪುಣ್ಯಾತ್ಮರು. ಈ ಏಳು ಜನ ಶಿಕ್ಷಕರೇ ಸಂಸ್ಥೆಯ ಆಜೀವ ಸದಸ್ಯರಾಗಿದ್ದರು. ಆಜೀವ ಸದಸ್ಯರ ಮಂಡಳಿಗೆ ‘ಬೋರ್ಡ್ ಆಫ್ ಲೈಫ್ ಮೆಂಬರ್ಸ್’ ಎನ್ನುತ್ತಿದ್ದರು. ಇವರೇ ಸಂಸ್ಥೆಯ ಎಲ್ಲ ಆಗುಹೋಗುಗಳಿಗೆ ಜವಾಬ್ದಾರರಾಗಿದ್ದರು. ಇವರು ಪ್ರಾತಃಸ್ಮರಣೀಯರಾದ ಮಹಾದಾನಿಗಳೂ ಆಗಿದ್ದ ಸಿರಸಂಗಿ ಲಿಂಗರಾಜರನ್ನು, ರಾಜಾ ಲಖಮಗೌಡರನ್ನು ಮತ್ತು ಬಿ.ವ್ಹಿ.ಭೂಮರಡ್ಡಿಯವರನ್ನು ಹಾಗೂ ಸಾವಿರಾರು ದಾನಿಗಳನ್ನು ಸಂಪರ್ಕಿಸಿ  ಸಂಸ್ಥೆಗಾಗಿ ಅಪಾರನಿಧಿ ಸಂಗ್ರಹಿಸಿದರು. 1916 ರಲ್ಲಿ ಹೈಸ್ಕೂಲ್ ಪ್ರಾರಂಭಿಸಿದ ಇವರು 1933ರಲ್ಲಿ ಲಿಂಗರಾಜ ಕಾಲೇಜು ಪ್ರಾರಂಭಿಸಿದರು. ಇದು ಮುಂಬೈ ಕರ್ನಾಟಕದ ಮೊಟ್ಟಮೊದಲ ಖಾಸಗಿ ಪದವಿ ಕಾಲೇಜು ಆಗಿತ್ತು.  ಬೆಳಗಾವಿಯಲ್ಲಿ ಶಾಲೆ ಕಾಲೇಜು ಸ್ಥಾಪಿಸಿ, ಜನಸಾಮಾನ್ಯರಿಗೆ ವಿದ್ಯೆ ನೀಡಿ ಕನ್ನಡಪ್ರಜ್ಞೆ ಹುಟ್ಟು ಹಾಕಿದರು. ಸಂಸ್ಥೆಗೆ ಅಖಂಡ ಕರ್ನಾಟಕದ ಪರಿಕಲ್ಪನೆಯ ಹಿನ್ನೆಲೆಯಲ್ಲಿ ಕರ್ನಾಟಕ ಲಿಬರಲ್ ಎಜ್ಯುಕೇಶನ್ ಸೊಸೈಟಿ ಎಂದು ನಾಮಕರಣ ಮಾಡಿದರು. ಆಗ ಇನ್ನೂ ಕರ್ನಾಟಕ ರಾಜ್ಯ ಉದಯವಾಗಿರಲಿಲ್ಲ. ಆದರೆ ಕರ್ನಾಟಕ ರಾಜ್ಯದ ಗುರಿ ಅವರದಾಗಿತ್ತು. 1928ರ ವೇಳೆಗೆ ಈ ಏಳು ಜನ ಶಿಕ್ಷಕರು ಬೆಳಗಾವಿ ಕಾಳಿ ಅಂಬ್ರಾಯಿ ಪ್ರದೇಶದಲ್ಲಿ 17 ಎಕರೆ 8 … Continue reading *ಕೆಎಲ್‌ಇ ಕಟ್ಟಿದ ಸಪ್ತಋಷಿಗಳು*