*ಅಂಬೇಡ್ಕರ್ ಹೆಸರೇ ಅಭಿಮಾನದ ಸಂಕೇತ : ಲಕ್ಷ್ಮೀ ಹೆಬ್ಬಾಳಕರ್*

ಪ್ರಗತಿವಾಹಿನಿ ಸುದ್ದಿ: ಅತ್ಯಂತ ಕಷ್ಟದಲ್ಲಿ ಓದಿ ದೇಶಕ್ಕೆ ಮಾದರಿ ಸಂವಿಧಾನ ನೀಡಿರುವ ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರ ಹೆಸರೇ ಅಭಿಮಾನದ ಸಂಕೇತ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ. ಗೋಜಗಾ ಗ್ರಾಮದ ಅಂಬೇಡ್ಕರ್ ಗಲ್ಲಿಯಲ್ಲಿ ವಿಶ್ವರತ್ನ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಮೂರ್ತಿಯ ಅಳವಡಿಕೆಯ ಕಾಮಗಾರಿಗೆ ಭಾನುವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಇಂದು ಮಹಿಳೆಯರು ಸ್ವತಂತ್ರವಾಗಿ ಓಡಾಡುತ್ತಿದ್ದರೆ, ಹಕ್ಕಿನಿಂದ ಮಾತನಾಡುತ್ತಿದ್ದರೆ, ಮಹಿಳೆಯರಿಗೆ ಸಮಾನತೆ ಸಿಕ್ಕಿದ್ದರೆ ಅದು ಅಂಬೇಡ್ಕರ್ ಅವರ ಸಂವಿಧಾನದಿಂದ. … Continue reading *ಅಂಬೇಡ್ಕರ್ ಹೆಸರೇ ಅಭಿಮಾನದ ಸಂಕೇತ : ಲಕ್ಷ್ಮೀ ಹೆಬ್ಬಾಳಕರ್*