Yoga add Final 1
KLE1099 Add

ರ್ಯಾಂಪ್ ವಾಕ್ ಮಾಡಿದ್ದ ಸಿಬ್ಬಂದಿ; 5 ಪೊಲೀಸ್ ಅಧಿಕಾರಿಗಳ ವರ್ಗಾವಣೆ

ಸೌಂದರ್ಯ ಸ್ಪರ್ಧೆಯಲ್ಲಿ ಭಾಗಿಯಾಗಿದ್ದ ಪೊಲೀಸರು

GIT Add 3
Beereshwara add 12

ಪ್ರಗತಿವಾಹಿನಿ ಸುದ್ದಿ; ಚೆನ್ನೈ: ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಐವರು ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ನಾಗಪಟ್ಟನಂ ಪೊಲಿಸ್ ವರಿಷ್ಠಾಧಿಕಾರಿ ಆದೇಶ ಹೊರಡಿಸಿದ್ದಾರೆ.

ತಮಿಳುನಾಡಿನ ಮೈಲಾಡುತುರೈ ಜಿಲ್ಲೆಯ ಸೆಂಬನಾರ್ಕೋವಿಲ್ ನಲ್ಲಿ ಖಾಸಗಿ ಸಂಸ್ಥೆಯೊಂದು ಸೌಂದರ್ಯ ಸ್ಪರ್ಧೆ ಏರ್ಪಡಿಸಿತ್ತು. ಇದರಲ್ಲಿ ನಟಿ ಯಶಿಕಾ ಆನಂದ್ ಅತಿಥಿಯಾಗಿ ಭಾಗವಹಿಸಿದ್ದರು. ಅಲ್ಲದೇ ಪೊಲೀಸ್ ಸಿಬ್ಬಂದಿಗಳು ಕೂಡ ರ್ಯಾಂಪ್ ವಾಗ್ ಮಾಡಿದ್ದರು. ಈ ಬಗ್ಗೆ ಮಾದ್ಯಮಗಳಲ್ಲಿ ಭಾರಿ ಸುದ್ದಿಯಾಗಿತ್ತು.

ಈ ಹಿನ್ನೆಲೆಯಲ್ಲಿ ರ್ಯಾಂಪ್ ವಾಕ್ ಮಾಡಿದ್ದ ಪೊಲೀಸ್ ಇನ್ಸ್ ಪೆಕ್ಟರ್ ಸುಬ್ರಹ್ಮಣ್ಯನ್, ರೇಣುಕಾ, ಅಶ್ವಿನಿ, ನಿತ್ಯಶೀಲಾ ಹಾಗೂ ಶ್ರೀನಿವಾಸ್ ಎಂಬುವವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.

ಪಶುಸಂಗೋಪನಾ ಇಲಾಖೆ ನಕಲಿ ನೇಮಕಾತಿ; ಸಚಿವರ ಹೆಸರಲ್ಲಿ ವಂಚಿಸಿದ್ದ ಆರೋಪಿ ಬಂಧನ

 

ರೆಪೊ ದರ ಮತ್ತಷ್ಟು ಹೆಚ್ಚಳ ಮಾಡಿದ RBI; ಇಂದಿನಿಂದಲೇ ಜಾರಿ

Home add- Bottom