GIT add 2024-1
Laxmi Tai add
Beereshwara 33

ನಟಿ ಶ್ರೀಲೀಲಾ ತಾಯಿ ಸ್ವರ್ಣಲತಾ ಸೇರಿದಂತೆ 7 ಜನರ ವಿರುದ್ಧ FIR ದಾಖಲು

ಏನಿದು ಪ್ರಕರಣ?

Anvekar 3
Cancer Hospital 2

ಪ್ರಗತಿವಾಹಿನಿ ಸುದ್ದಿ ಬೆಂಗಳೂರು: ಇತ್ತೀಚೆಗೆ ಸ್ಯಾಂಡಲ್ ವುಡ್ ಹಾಗೂ ಟಾಲಿವುಡ್ ಚಿತ್ರರಂಗದಲ್ಲಿ ಜನಪ್ರಿಯ ನಟಿಯಾಗಿ ಮಿಂಚುತ್ತಿರುವ ನಟಿ ಶ್ರೀಲೀಲಾ ತಾಯಿ ಸ್ವರ್ಣಲತಾ ಸೇರಿದಂತೆ 7 ಜನರ ವಿರುದ್ಧ ಎಫ್ ಐಆರ್ ದಾಖಲಾಗಿದೆ.

ಸ್ವರ್ಣಲತಾ ಅವರಿಗೆ ಬಂಧನ ಭೀತಿ ಎದುರಾಗಿದ್ದು, ಪೊಲೀಸರು ಅವರ ಹುಡುಕಾಟ ನಡೆಸಿದ್ದಾರೆ. ಅಲಯನ್ಸ್ ವಿಶ್ವವಿದ್ಯಾಲಯದ ಒಡೆತನಕ್ಕೆ ಸಂಬಂಧಿಸಿದಂತೆ ವಿಶ್ವ ವಿದ್ಯಾಲಯಕ್ಕೆ ಮಾರಕಾಸ್ತ್ರಗಳಿಂದ ನುಗ್ಗಿ ಗಲಾಟೆ ನಡೆಸಿದ್ದರು ಎಂಬ ಆರೋಪ ಸ್ವರಣಲತಾ ವಿರುದ್ಧ ಕೇಳಿ ಬಂದಿದೆ.

Emergency Service

ಸೆ.10ರಂದು ಸ್ವರ್ಣಲತಾ ಬೌನ್ಸರ್ ಮಧುಕರ್ ಅಂಗೂರ್ ಸೇರಿದಂತೆ ಹಲವರ ಜೊತೆ ಅಲಯನ್ಸ್ ವಿಶ್ವ ವಿದ್ಯಾಲಯಕ್ಕೆ ಅಕ್ರಮವಾಗಿ ನುಗ್ಗಿದ್ದರು. ಕೋರ್ಟ್ ಆದೇಶದಂತೆ ಕಾಲೇಜು ನಮ್ಮದು ಎಂದು ಗಲಾಟೆ ಮಾಡಿದ್ದರು ಎನ್ನಲಾಗಿದೆ.

ಮಾರಕಾಸ್ತ್ರಗಳೊಂದಿಗೆ ಅಕ್ರಮವಾಗಿ ಕಾಲೇಜಿಗೆ ನುಗ್ಗಿ ಗಲಾಟೆ ಮಾಡಿದ ಕಾರಣಕ್ಕೆ ಸ್ವರ್ಣಲತಾ ಹಾಗೂ ಮಧುಕರ್ ಸೇರಿದಂತೆ 7 ಜನರ ವಿರುದ್ಧ ಅಲೈನ್ಸ್ ವಿವಿ ಸಿಬ್ಬಂದಿ ನಿವೇದಿತಾ ಮಿಶ್ರಾ ಪೊಲಿಸರಿಗೆ ದೂರು ನೀಡಿದ್ದರು. ಈ ಹಿನ್ನಲೆಯಲ್ಲಿ ಸ್ವರ್ಣಲತಾ ಸೇರಿ 7 ಜನರ ವಿರುದ್ಧ ಎಫ್ ಐ ಆರ್ ದಾಖಲಿಸಿಕೊಂಡಿರುವ ಪೊಲೀಸರು ಸ್ವರಣಲತಾ ಬಂಧನಕ್ಕಾಗಿ ಹುಡುಕಾಟ ನಡೆಸಿದ್ದಾರೆ.
ವಿಮ್ಸ್ ಆಸ್ಪತ್ರೆಯಲ್ಲಿ 3 ರೋಗಿಗಳ ದಾರುಣ ಸಾವು ಪ್ರಕರಣ; ನಿರ್ದೇಶಕ ಡಾ.ಗಂಗಾಧರ್ ಹೇಳಿದ್ದೇನು?

https://pragati.taskdun.com/latest/https-pragativahini-com-world-world-cities-millionaires-places-henlyandpartners-group-report/

Bottom Add3
Bottom Ad 2