Beereshwara add 5
Crease wise add 8
KLE1099 Add

ಮಹಿಳೆಯರನ್ನು ಹೊತ್ತೊಯ್ದ ತಾಲಿಬಾನಿಗಳು

ಲೈಂಗಿಕ ದಾಸಿಗಳನ್ನಾಗಿಸಿಕೊಳ್ಳಲು ಕೃತ್ಯ; ಮಹಿಳಾ ಹಕ್ಕು ಹೋರಾಟಗಾರ್ತಿ ಆರೋಪ

ಪ್ರಗತಿವಾಹಿನಿ ಸುದ್ದಿ; ಕಾಬೂಲ್: ಅಪ್ಘಾನಿಸ್ತಾನವನ್ನು ತಾಲಿಬಾನಿಗಳು ವಶಕ್ಕೆ ಪಡೆದ ಬೆನ್ನಲ್ಲೇ ಮಹಿಳೆಯರನ್ನು ಟಾರ್ಗೆಟ್ ಮಾಡಿರುವ ಉಗ್ರರು ಮನೆ ಮನೆಗಳಿಗೆ ದಾಳಿಯಿಟ್ಟು ಮಹಿಳೆಯರನ್ನು ಹೊತ್ತೊಯ್ಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಅಪ್ಘಾನ್ ನಲ್ಲಿ ಕ್ಷಣ ಕ್ಷಣಕ್ಕೂ ಅಭದ್ರತೆ, ಭಯದ ವಾತಾವರಣ ನಿರ್ಮಾಣವಾಗುತ್ತಿದ್ದು, ಮಹಿಳೆಯರು, ಮಕ್ಕಳು ರಕ್ಷಣೆಗಾಗಿ ಮೊರೆಯಿಡುತ್ತಿದ್ದಾರೆ. ಇನ್ನೊಂದೆಡೆ ಮನೆ ಮನೆಗಳಲ್ಲಿ ದಾಳಿ ನಡೆಸಿರುವ ತಾಲಿಬಾನಿಗಳು ಹೆಣ್ಣುಮಕ್ಕಳನ್ನು ಹೊತ್ತೊಯ್ದು, ಹೊರ ದೇಶಗಳಿಗೆ ಹಡಗುಗಳ ಮೂಲಕ ಕಳುಹಿಸಿಕೊಡುತ್ತಿದ್ದಾರೆ. ಲೈಂಗಿಕ ದಾಸಿಗಳನ್ನಾಗಿ ಬಳಸಿಕೊಳ್ಳಲು ಈ ಕೃತ್ಯವೆಸಗಲಾಗುತ್ತಿದೆ ಎಂದು ಮಹಿಳಾ ಹಕ್ಕು ಹೋರಾಟಗಾರ್ತಿ ಹಾಗೂ ನ್ಯಾಯವಾದಿ ನಜಿಯಾ ಅಯೂಬಿ ಆರೋಪಿಸಿದ್ದಾರೆ.

ಬಾಲಕಿಯರನ್ನು ತಮ್ಮೊಂದಿಗೆ ವಿವಾಹ ಮಾಡಿಸುವಂತೆ ಉಗ್ರರು ಅಪ್ಘನ್ ವಾಸಿಗಳಿಗೆ ಹಿಂಸಿಸುತ್ತಿದ್ದಾರೆ. ಮತ್ತೊಂದೆಡೆ ಮಹಿಳೆಯರ ಕಳ್ಳ ಸಾಗಾಟ ನಡೆಸಲಾಗುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.

ತಾಲಿಬಾನಿಗಳಿಂದ 150 ಭಾರತೀಯರ ಕಿಡ್ನ್ಯಾಪ್…!