Beereshwara add4
Crease add 5
KLE1099 Add

ಬೆಲ್ಲದ್ ಫೋನ್ ಕದ್ದಾಲಿಕೆ ಪ್ರಕರಣ ಗಂಭೀರ : ಸಿದ್ದರಾಮಯ್ಯ

ನ್ಯಾಯಾಧೀಶರಿಂದ ತನಿಖೆಗೆ ಒತ್ತಾಯ

Prashant Burge add
Comedy -Dileep Kurandwade

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ಫೋನ್ ಕದ್ದಾಲಿಕೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆ ನಡೆಸುವಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ಮುಖ್ಯಂತ್ರಿ ಬಿ.ಎಸ್.ವೈಗೆ ಒತ್ತಾಯಿಸಿದ್ದಾರೆ.

ಬೆಲ್ಲದ್ ಫೋನ್ ಕದ್ದಾಲಿಕೆಯಾಗಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಸ್ವತ: ಬೆಲ್ಲದ್ ತಮಗೆ ಯುವರಾಜ ಎಂಬ ವ್ಯಕ್ತಿ 10 ದಿನಗಳ ಹಿಂದೆ ಕರೆಮಾಡಿ ನನ್ನನ್ನು ಅನಗತ್ಯವಾಗಿ ಜೈಲಿಗೆ ಹಾಕಿದ್ದಾರೆ. ಸಹಾಯಮಾಡುವಂತೆ ಹೇಳಿದ್ದ. ಈ ಫೋನ್ ಕರೆ ಹಿಂದೆ ದೊಡ್ದ ಪಿತೂರಿಯೇ ಇದೆ. ನನ್ನ ಫೋನ್ ಕದ್ದಾಲಿಕೆ ನಡೆಸಲಾಗುತ್ತಿದೆ ಎಂದು ಆರೋಪಿಸಿ ಸ್ಪೀಕರ್ ಕಾಗೇರಿ ಹಾಗೂ ಗೃಹ ಸಚಿವ ಬೊಮ್ಮಾಯಿಗೆ ಪತ್ರ ಬರೆದು ದೂರು ನೀಡಿದ್ದಾರೆ. ಬೆಲ್ಲದ್ ಫೋನ್ ಕದ್ದಾಲಿಕೆ ಆರೋಪ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಹೈಕೋರ್ಟ್ ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಸಿ ಸತ್ಯಾಂಶ ಬಯಲಿಗೆಳೆಯಲಿ ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಅಲ್ಲದೇ ಇದು ಕೇವಲ ಬೆಲ್ಲದ್ ಫೋನ್ ಗೆ ಮಾತ್ರ ಸಂಬಂಧಿಸಿದ್ದಾಗಿರಲ್ಲ ಎನಿಸುತ್ತೆ. ರಾಜ್ಯ ಬಿಜೆಪಿಯ ಅಸಮಾಧಾನಿತ ಶಾಸಕರ ಫೋನ್ ಕೂಡ ಕದ್ದಾಲಿಕೆಯಾಗುತ್ತಿರಬಹುದು. ಅಷ್ಟೇ ಅಲ್ಲ ವಿಪಕ್ಷ ನಾಯಕರ ಫೋನ್ ಕದ್ದಾಲಿಕೆ ಸಾಧ್ಯತೆಯೂ ಇದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಹೀಗಾಗಿ ನ್ಯಾಯಾಧೀಶರಿಂದ ತನಿಖೆಯಾಗಲಿ ಎಂದು ಒತ್ತಾಯಿಸಿದ್ದಾರೆ.

ರಾಜ್ಯಪಾಲರ ಐಷಾರಾಮಿ ಜೀವನಕ್ಕೆ 3,26,98,613 ಖರ್ಚು