GIT add 2024-1
Laxmi Tai add
Beereshwara 33

ಬೆಂಗಳೂರಿನಲ್ಲಿ 66 ಪೊಲೀಸರಲ್ಲಿ ಕೊರೊನಾ ಸೋಂಕು

ಇಂದು ಮತ್ತೆ ಇಬ್ಬರು ಸಿಬ್ಬಂದಿಗಳಲ್ಲಿ ವೈರಸ್ ಪತ್ತೆ

Anvekar 3
Cancer Hospital 2

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮತ್ತೆ ಇಬ್ಬರು ಪೊಲೀಸ್​ ಕಾನ್ಸ್​ಟೇಬಲ್​​ಗಳಿಗೆ ಕೊರೋನಾ ಸೋಂಕು ದೃಢ ಪಟ್ಟಿದೆ. ಈ ಮೂಲಕ ಬೆಂಗಳೂರು ನಗರದಲ್ಲಿ ಸೋಂಕಿತ ಪೊಲೀಸರ ಸಂಖ್ಯೆ 66ಕ್ಕೇರಿದೆ.

Emergency Service

ಇಂದು ಕುಮಾರಸ್ವಾಮಿ ಲೇಔಟ್ ಹೆಡ್​ ಕಾನ್ಸ್​ಟೇಬಲ್ ಹಾಗೂ ಸಿಸಿಬಿಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಪೊಲೀಸ್​ಗೆ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಇನ್ನು, ಕುಮಾರಸ್ವಾಮಿ ಲೇಔಟ್​ನ ಹೆಡ್​​ ಕಾನ್ಸ್​ಟೇಬಲ್​​ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗಿದ್ದರಿಂದ ಹತ್ತು ದಿನಗಳ ಕಾಲ ರಜೆಯನ್ನು ನೀಡಲಾಗಿತ್ತು. ಜೊತೆಗೆ ಮೂರು ದಿನಗಳ ಹಿಂದೆ ಕೊರೋನಾ ಚೆಕಪ್ ಸಹ ಮಾಡಲಾಗಿತ್ತು. ಆದರೆ, ಇಂದು ಇವರಿಗೆ ಕೊರೋನಾ ಪಾಸಿಟಿವ್​​​​ ಇರುವುದು ಖಚಿತವಾಗಿದೆ. ಹೀಗಾಗಿ ಈ ಸೋಂಕಿತ ಪೊಲೀಸರನ್ನು ವಿಕ್ಟೋರಿಯಾದ ಐಸೋಲೇಷನ್ ವಾರ್ಡ್​ಗೆ ಶಿಫ್ಟ್​ ಮಾಡಲಾಗಿದೆ.

ಸಿಸಿಬಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಮೂವರು ಪೊಲೀಸರಿಗೆ ಈ ಹಿಂದೆಯೇ ಪಾಸಿಟಿವ್ ಕಾಣಿಸಿಕೊಂಡಿತ್ತು. ಅವರ ಸಂಪರ್ಕದಲ್ಲಿದ್ದ ಮತ್ತೊಬ್ಬ ಪೊಲೀಸ್ ಕಾನ್ಸ್​ಟೇಬಲ್​ಗೆ ಈಗ ಕೊರೋನಾ ಪತ್ತೆಯಾಗಿದೆ. ಓಲಾ ವಂಚನೆ ಪ್ರಕರಣ ಸಂಬಂಧ ಕೊರೋನಾ ಕಾಣಿಸಿಕೊಂಡ ಆರೋಪಿಯನ್ನು ಬಂಧಿಸಿದ್ದರಿಂದ 14 ಜನ ಪೊಲೀಸರನ್ನು ಹೋಮ್​​ ಕ್ವಾರಂಟೈನ್​​ ಮಾಡಲಾಗಿತ್ತು.

Bottom Add3
Bottom Ad 2