Yoga add Final 1
KLE1099 Add

ಹೆತ್ತ ಮಗುವನ್ನೇ ಅಪಾರ್ಟ್ ಮೆಂಟ್ ನಿಂದ ಕೆಳಗೆ ಎಸೆದು ಹತ್ಯೆಗೈದ ತಾಯಿ

ಸಿಸಿಟಿವಿ ದೃಶ್ಯ ನೋಡಿ ಪೊಲೀಸರೇ ಶಾಕ್

GIT Add 3
Beereshwara add 12

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ನಾಲ್ಕು ವರ್ಷದ ಮಗುವನ್ನು ಹೆತ್ತ ತಾಯಿಯೇ ಅಪಾರ್ಟ್ ಮೆಂಟ್ ನಿಂದ ಕೆಳಗೆ ಎಸೆದಿರುವ ಹೃದಯ ವಿದ್ರಾವಕ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ಸಂಪಂಗಿರಾಮನಗರದ ಅದ್ವಿತ್ ಅಪಾರ್ಟ್ ಮೆಮ್ಟ್ ನಲ್ಲಿ ಈ ಘಟನೆ ನಡೆದಿದ್ದು, ನಾಲ್ಕು ವರ್ಷದ ಕಂದಮ್ಮನನ್ನು ಅಪಾರ್ಟ್ ಮೆಂಟ್ ನ ನಾಲ್ಕನೇ ಫ್ಲೋರ್ ನಿಂದ ತಾಯಿ ಸುಷ್ಮಾ ಕೆಳಗೆ ಎಸೆದಿದ್ದಾಳೆ. ಬಳಿಕ ತಾನೂ ಕೆಳಗೆ ಹಾರಲು ಯತ್ನಿಸಿದ್ದಾಳೆ. ಈ ವೇಳೆ ಅಕ್ಕಪಕ್ಕದ ನಿವಾಸಿಗಳು ಮಹಿಳೆಯನ್ನು ರಕ್ಷಿಸಿದ್ದಾರೆ.

ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಮಗು ಸಾವನ್ನಪ್ಪಿದೆ. ದ್ವಿತಿ ಮೃತ ಮಗು. ಮಗು ಅಪಾರ್ಟ್ ಮೆಂಟ್ ನಿಂದ ಕೆಳಗೆ ಬಿದ್ದು ಸಾವನ್ನಪ್ಪಿದ ಬಗ್ಗೆ ಪೊಲೀಸರಿಗೆ ಮಾಹಿತಿ ಗೊತ್ತಾಗುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು, ಮಗುವಿನ ತಾಯಿಯನ್ನು ವಿಚಾರಣೆ ನಡೆಸಿದಾಗ ಮಗುವನ್ನು ಆಟವಾಡಿಸುತ್ತಿದ್ದಾಗ ಆಕಸ್ಮಿಕವಾಗಿ ಕೈಜಾರಿ ಮಗು ಕೆಳಗೆ ಬಿದ್ದಿದೆ ಎಂದು ಹೇಳಿದ್ದಾಳೆ. ಆದರೆ ಸಿಸಿಟಿವಿಯನ್ನು ಪರಿಶೀಲಿಸಿದ ಪೊಲೀಸರಿಗೆ ಹೆತ್ತ ತಾಯಿಯ ಹೈಡ್ರಾಮಾ ಬಯಲಾಗಿದೆ.

ಮಹಿಳೆ ಸುಷ್ಮಾ ಉದ್ದೇಶ ಪೂರ್ವಕವಾಗಿಯೇ ಬುದ್ಧಿಮಾಂದ್ಯ ಮಗುವನ್ನು ಅಪಾರ್ಟ್ ಮೆಂಟ್ ನ ನಾಲ್ಕನೇ ಮಹಡಿಯಿಂದ ಕೆಳಗೆ ಎಸೆದಿದ್ದು, ಬಳಿಕ ಕಂಬಿ ಹತ್ತಿ ತಾನೂ ಕೆಳಗೆ ಬೀಳುತ್ತಿರುವಂತೆ ನಾಟಕವಾಡುತ್ತಾ ಕಾಪಾಡಿ, ಕಾಪಾಡಿ ಎಂದು ಕೂಗಿದ್ದಾಳೆ. ಈ ವೇಳೆ ಅಕ್ಕ ಪಕ್ಕದ ಮನೆಯವರು ಮಹಿಳೆಯನ್ನು ರಕ್ಷಿಸಿದ್ದಾರೆ. ಹೆತ್ತ ತಾಯಿಯೇ ಬುದ್ದಿಮಾಂದ್ಯ ಮಗುವನ್ನು ಅಪಾರ್ಟ್ ಮೆಂಟ್ ನಿಂದ ಕೆಳಗೆ ಎಸೆದು ಹತ್ಯೆ ಮಾಡಿದ್ದಾಳೆ.
KSRTC ಬಸ್ ಬ್ರೇಕ್ ಫೇಲ್; ಭೀಕರ ಅಪಘಾತ

Home add- Bottom