Yoga add Final 1
KLE1099 Add

ಹರ ಘರ ತಿರಂಗಾ ಅಭಿಯಾನ; ಪೂರ್ವ ತಯಾರಿ ಸಭೆ

ತಮ್ಮ ತಮ್ಮ ಮನೆಗಳ ಮೇಲೆ ರಾಷ್ಟ್ರಧ್ವಜ ಹಾರಿಸಲು ಲಕ್ಷ್ಮಣ ಸವದಿ ಕರೆ

GIT Add 3
Beereshwara add 12

ಪ್ರಗತಿವಾಹಿನಿ ಸುದ್ದಿ; ಅಥಣಿ: ಸ್ವಾತಂತ್ರೋತ್ಸವದ ಅಮೃತ ಮಹೋತ್ಸವ ವರ್ಷಾಚರಣೆಯ ನಿಮಿತ್ತವಾಗಿ ಹರ ಘರ ತಿರಂಗಾ ಅಭಿಯಾನದ ಪೂರ್ವ ತಯಾರಿ ಕುರಿತು ತಾಲೂಕಿನ ಎಲ್ಲ ಅಧಿಕಾರಿಗಳು ಮತ್ತು ಪಟ್ಟಣದ ಜನಪ್ರತಿನಿಧಿಗಳ ಸಭೆ ಜರುಗಿತು.

ಮಾಜಿ ಉಪಮುಖ್ಯಮಂತ್ರಿ ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸವದಿಯವರು ಮಾತನಾಡಿ ಸ್ವಾತಂತ್ರ್ಯೊವದ ಅಮೃತ ಮಹೋತ್ಸವದ ಅಂಗವಾಗಿ ರಾಷ್ಟ್ರ ದ್ವಜವನ್ನು ಆಗಸ್ಟ್ 13ರಿಂದ 15ರ ವರೆಗೆ ನಿಯಾಮಾವಳಿ ಅನುಸಾರ ಹಾರಿಸಬಹುದು ಎಂದು ತಿಳಿಸಿದ ಅವರು ಕೊವಿಡ್ ಸಮಯದಲ್ಲಿ ವಿಜೃಂಭಣೆಯಿಂದ ಆಚರಿಸಲು ಸಾದ್ಯವಾಗಿರಲಿಲ್ಲ ಆದರೆ ಈ ಸಲ ಸ್ವಾತಂತ್ರ ಲಭಿಸಿ 75ನೆ ವರ್ಷ ಅಮೃತ ಮಹೋತ್ಸವವಾಗರುವದರಿಂದ ತಾಲೂಕಿನಲ್ಲಿ ಅತೀ ವಿಷೇಶವಾಗಿ ಮತ್ತು ಅತೀ ವಿಜ್ರಭಣೆಯಿಂದ ಆಚರಣೆ ಮಾಡುವ ಉದ್ದೇಶದಿಂದ ಸಮಾಜದ ಎಲ್ಲ ನಾಗರಿಕರನ್ನು ಭಾಗಿಗಳನ್ನಾಗಿ ಮಾಡೋಣ ಎಂದು ಕರೆ ನೀಡಿದರು.

ಪ್ರತಿಯೊಬ್ಬ ನಾಗರಿಕರು ತಮ್ಮ ಮನೆ ಮೇಲೆ ದ್ವಜಾರೋಹಣ ಹಾರಿಸಬೇಕೆಂಬ ಸಂಕಲ್ಪದೊಂದಿಗೆ ಪಕ್ಷ, ಜಾತಿ, ಎಲ್ಲಕಿಂತ ಮೀಗಿಲು ನಮ್ಮದೇಶ ಮೊದಲು ಎಂಬ ಭಾವನೆ ಎಲ್ಲರಲ್ಲಿ ಮೂಡಬೇಕು ಆ ದೃಷ್ಟಿಯಿಂದ ನಮ್ಮ ಸ್ವಾತಂತ್ರ್ಯಕ್ಕಾಗಿ ಬಲಿದಾನಗೈದ ಮಾಹಾನ್ ಪುರುಷರನ್ನು ಸ್ಮರಿಸೋಣ ಇಂದು ಇದು ಈ ದೇಶದ ಹಬ್ಬ ಎಂಬುವಂತೆ ಆಚರಿಸೋಣ ವಿವಿಧತೆಯಲ್ಲಿ ಏಕತೆಯನ್ನು ಜಗತ್ತಿಗೆ ತೋರಿಸೋಣ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ತಾಲೂಕಿನ ದಂಡಾಧಿಕಾರಿ ಸುರೇಶ ಮುಂಜೆ ಎಲ್ಲ ಅಧಿಕಾರಿಗಳು ಜವಾಬ್ದಾರಿಯುತವಾಗಿ ತಮಗೆ ವಹಿಸಿದ ಕಾರ್ಯ ಅಚ್ಚುಕಟ್ಟಾಗಿ ನಿರ್ವಹಿಸಬೇಕು. ತಾಲೂಕಿನ ಕಲಾವಿದರುಗಳ ಕಲೆ ಪ್ರದರ್ಶನ ಮಾಡುವರ ಜೊತೆಗೆ ಸಂಪರ್ಕ ಸಾಧಿಸುವ ಜವಾಬ್ದಾರಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗೆ ವಹಿದರು ಮತ್ತು ಪ್ರಭಾತ ಫೇರಿ ಸಮಯದಲ್ಲಿ ಹಾದು ಹೋಗುವ ಸ್ಥಳ ಸ್ವಛತೆ ಕಾರ್ಯ ಪುರಸಭೆಯ ಅಧಿಕಾರಿಗೆ ಮತ್ತು ರೂಟ ಮಾರ್ಚ ವೇಳೆ ವಾಹನಗಳ ಸಂಚರಿಸದಂತೆ ನೋಡಿಕೊಳ್ಳುವ ಕಾರ್ಯ ಪೋಲಿಸ್ ಇಲಾಖೆ ಮಾಡಬೇಕೆಂದು ತಿಳಿಸಿದರು. ಇದೆ ವೇಳೆ ಹಲವಾರು ಪುರಸಭೆ ಸದಸ್ಯರು ಸಂಸ್ಕೃತಿಕ ಕಾರ್ಯಕ್ರಮಕ್ಕೆ ಕಾಣಿಕೆ ನೀಡಿ ಸಹಕರಿಸುವುದಾಗಿ ಭರವಸೆ ನೀಡಿದರು.

ಈ ವೇಳೆ ಎಇಓ ಶೇಖರ ಕರಿಬಸಪ್ಪಗೋಳ, ಡಿಎಸ್ಪಿ ಜಲ್ದೆ, ಸಿಪಿಆಯ್ ಶಂಕರಗೌಡ ಬಸನಗೌಡರ, ಪಿಎಸ್ಆಯ್ ಮುಖರಿ, ಎಇಇ ಈರಣ್ಣ ವಾಲಿ, ಶ್ರೀಕಾಂತ್ ಮಾಕಣಿ,ಎಮ್ ವಿ ಬಿರದಾರ ಪಾಟೀಲ್, ಉದಯ ಪಾಟೀಲ, ಎಮ್ ಎಮ್ ಮಲ್ಲುಖಾನ ಸೇರಿದಂತೆ ತಾಲೂಕಿನ ಎಲ್ಲ ಅಧಿಕಾರಿಗಳು ಇದ್ದರು.

60 ವರ್ಷದ ಮಹಿಳೆಗೆ ಯಶಸ್ವಿ ಟೋಟಲ್ ಫೆಮರ್ ರಿಪ್ಲೇಸ್ ಮೆಂಟ್ ಶಸ್ತ್ರಚಿಕಿತ್ಸೆ ನಡೆಸಿದ KLE ವೈದ್ಯರ ತಂಡ

Home add- Bottom