GIT add 2024-1
Laxmi Tai add
Beereshwara 33

ನಿಪ್ಪಾಣಿಯಲ್ಲಿ 8 ಕೋಟಿ ರೂಪಾಯಿ ವೆಚ್ಚದ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಉದ್ಘಾಟನೆ

ತಾಯಿ-ಮಗುವಿನ ಸದೃಢ ಆರೋಗ್ಯಕ್ಕಾಗಿ ಸುಸಜ್ಜಿತ ಆಸ್ಪತ್ರೆ ಉದ್ಘಾಟನೆ.

Anvekar 3
Cancer Hospital 2
ಪ್ರಗತಿವಾಹಿನಿ ಸುದ್ದಿ; ಚಿಕ್ಕೋಡಿ: ಆರೋಗ್ಯ ವ್ಯವಸ್ಥೆ ಎಲ್ಲಕ್ಕಿಂತ ದೊಡ್ಡ ಸವಾಲು. ದುಡ್ಡಿರುವವರಿಗೂ ಆರೋಗ್ಯದ ಅರಿವಾಗಿದೆ. ಹೀಗಾಗಿ ಮುಖ್ಯಮಂತ್ರಿ ಅವರು ಪ್ರಾರ್ಥಮಿಕ ಚಿಕಿತ್ಸಾ ಕೇಂದ್ರ ಮೆಲ್ದರ್ಜೆಗೆ ಎರುಸುತ್ತಿದ್ದಾರೆ. ರಾಜ್ಯದಲ್ಲು ಮೋದಲ, ಎರಡನೆ, ಹಾಗೂ ಮೂರನೆಯ ಹಂತದ ಚಿಕಿತ್ಸೆಯ 25 ವರುಷದ ದೂರದೃಷ್ಟಿ ಇಟ್ಟು ಕೊಂಡು ವಿಶೇಷ ತಂಡನಿರ್ಮಿಸಿ ರಚಿಸಿ ಕಾರ್ಯ ನಿರ್ವಹಿಸುತ್ತಿದೆ. ಬಡವರಿಗೂ ಉಚಿತ, ಮುಕ್ತ ಆರೋಗ್ಯ ಸೇವೆ ಕಲ್ಪಿಸುವ ಸದುದ್ದೇಶ ರಾಜ್ಯ ಸರಕಾರದ್ದಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ವೈದ್ಯಕೀಯ ಸಚಿವರಾದ ಡಾ. ಕೆ. ಸುಧಾಕರ್ ಹೇಳಿದರು.
ನಿಪ್ಪಾಣಿ ತಾಲೂಕಿನ ಜೊಲ್ಲೆ ಮಹಾವಿದ್ಯಾಲಯದಲ್ಲಿ ಸೋಮವಾರಜಿಲ್ಲಾಡಳಿತ, ಜಿಲ್ಲಾಪಂಚಾತ್ ಆರೋಗ್ಯ ಮತ್ತು ಕುಟುಂಬಕಲ್ಯಾಣ ಇಲಾಖೆ ಬೆಳಗಾವಿ ಅಪರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ  ಚಿಕ್ಕೋಡಿ ಹಾಗೂ ಇಂಜಿನಿಯರಿಂಗ್ ಘಟಕ ಇವರ ಸಂಯುಕ್ತಾಶ್ರಯದಲ್ಲಿ  ಆಯೋಜಿಸಲಾದ ತಾಯಿ ಹಾಗೂ ಮಕ್ಕಳ  ಆಸ್ಪತ್ರೆ ಉದ್ಘಾಟನೆ  ನೇರವೇರಿಸಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ನಿಪ್ಪಾಣಿಗೆ  ಬೇಕಾದ ಎಲ್ಲ  ವೈದ್ಯಕಿಯ ಸವಲತ್ತುಗಳನ್ನು ಆದ್ಯತೆಯ ಮೇರಿಗೆ ಮಾಡಿಕೊಡಲಾಗುವದು.  ಜೀವದ ಹಂಗು ತೊರೆದು ಚಿಕಿತ್ಸೆ ನೀಡಲು ಮುಂದಾಗಿದ್ದ  ಆರೋಗ್ಯ  ಸಿಬ್ಬಂದಿಗಳಿಗೆ ಕೃತಜ್ಞತೆ ತಿಳಿಸಿದರು. ಆಸ್ಪತ್ರೆ ಉತ್ತಮವಾಗಬೇಕಾದರೆ ಅಧಿಕಾರಿಗಳು ವೈದ್ಯಕೀಯ ಒಕ್ಕೂಟದ ನಡೆಯಿಂದ ಮಾತ್ರ ಸಾಧ್ಯ. ಖಾಸಗಿ ಆಸ್ಪತ್ರೆಗಳು ನಾಚುವಂತೆ ಸರಕಾರಿ ಆಸ್ಪತ್ರೆಗಳಲ್ಲಿ ಸ್ವಚ್ಛತೆ ಹಾಗೂ ಚಿಕಿತ್ಸೆಯ ಪಣ ತೊಡಿ ಎಂದರು.
ರಾಜ್ಯದಲ್ಲಿ ಮುಖ್ಯಮಂತ್ರಿ ಯಡಯೂರಪ್ಪಾ ಅವರು ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ದೇಶದಲ್ಲೇ ಕರ್ನಾಟಕ ರಾಜ್ಯ ಕೋವಿಡ್ ನಿಯಂತ್ರಣ ಪಟ್ಟಿಯಲ್ಲಿ ಮುಂಚುಣಿಯಲ್ಲಿದೆ. ರಾಜ್ಯದಲ್ಲಿ ಸೊಂಕಿನಿಂದ ಸಾವು ಶೇಕಡಾ 1.2 ಅಗುತ್ತಿದ್ದರೆ, ಸೋಂಕು  ತಗಲುವ ಸಂಖ್ಯೆ ಸರಾಸರಿ ಕಡಿಮೆ ಇದೆ. ಶೇಕಡಾ 98 ರಷ್ಟು ಗುಣಮುಖರಾಗುತ್ತಿದ್ದಾರೆ.
ರಾಜ್ಯದಲ್ಲಿ ಏಕ ಮಾತ್ರ ಮಹಿಳಾ ಮಂತ್ರಿ ಶಶಿಕಲಾ ಜೋಲ್ಲೆ. ವಾಸ್ತವ ಅರ್ಥೈಸಿಕೊಂಡು ಅಭಿವೃದ್ದಿಗೆ ಸಾಕ್ಷಿಯಾದ ದಂಪತಿಗಳು ರಾಜ್ಯದಲ್ಲಿ ಯಾರಾದರು ಇದ್ದರೆ ಅದು ಜೊಲ್ಲೆ ದಂಪತಿಗಳು ಎಂದರು.
ತಾಯಿ ಮಗುವಿನ ಆರೋಗ್ಯ, ಸಂಪೂರ್ಣ ಆರೈಕೆ ಆಸ್ಪತ್ರೆಯ ಸದುದ್ದೇಶ. ಡಯಾಲಾಸೀಸ್ ಆಸ್ಪತ್ರೆ ನಿಪ್ಪಾಣಿ ತಾಲುಕಿಗೆ ಕ್ಯಾಬಿನೇಟ್ ನಲ್ಲಿ ಮಂಜೂರು ಮಾಡಲಾಯಿತು. ನೂತನ ತಾಲೂಕಿಗೆ ಸುಸಜ್ಜಿತ ತಾಲುಕಾ ಆಸ್ಪತ್ರೆ ನೂತನ ಕಟ್ಟಡಕ್ಕೆ ಮಂಜುರು ನೀಡುವ ಭರವಸೆ ನೀಡಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ ರಾಜ್ಯ ಸರಕಾರ ಕೊರೊನಾ ಸಂದರ್ಭವನ್ನು ಅಂತ್ಯಂತ ಒಳ್ಳೆಯ ರೀತಿಯಲ್ಲಿ ನಿಭಾಯುಸಿದೆ ಅದರಲ್ಲಿ ಸಚಿವ ಸುಧಾಕರ ಅವರ ಪಾತ್ರ ಹೆಚ್ಚಿನದ್ದು.  ನಿಪ್ಪಾಣಿ ಯಲ್ಲಿ ವೈದ್ಯಕೀಯ ಇಲಾಖೆ ಚಾತುರ್ಯದ ಸೇವೆಯಿಂದ ಕೊರೊನಾ ನಿಯಂತ್ರಣದಲ್ಲಿದೆ.  ಒಂದು ಸಾವು ಆಗದಿರುವದು ನಮ್ಮ ಭಾಗಕ್ಕೆ ಹೆಮ್ಮೆ. ಈ ಸಂದರ್ಭದಲ್ಲಿ ಹೊರಾಡಿದ ಎಲ್ಲರಿಗೂ ಅಭಿನಂದನೆಗಳು. ನನಗೂ  ಕೊರೊನಾ ತಗುಲಿದ ಸಂದರ್ಭದಲ್ಲಿ ಜನರಲ್ಲಿನ ಭಯ ನಿವಾರಿಸಲು ನಾನೂ ಚಿಕಿತ್ಸೆ ಪಡೆದೆ. ನಮ್ಮ ಸಂಸ್ಥೆಯ ಮುಖಾಂತರ ಸೋಂಕಿತರಿಗೆ ಪ್ರಾಮಾಣಿಕ ಚಿಕಿತ್ಸೆ ನೀಡುವ ಕಾರ್ಯವಾಗಿದೆ ಇದಕ್ಕೆ ಎಲ್ಲಾ ವೈದ್ಯರು ನೀಡಿದ ಸಹಕಾರ ದೊಡ್ಡದು ಎಂದರು.
ರಾಷ್ಟ್ರೀಯ ಹೆದ್ದಾರಿ ತವಂದಿ ಘಾಟ್ ಬಳಿ ಪದೇ ಪದೇ ಭೀಕರ ಅಪಘಾತ ಸಂಭವಿಸುತ್ತವೆ. ಪ್ರಾಣ ಉಳಿಸಲು ಅತ್ಯಾಧುನಿಕ ಸೌಲಭ್ಯವುಳ್ಳ ಆಸ್ಪತ್ರೆ ಮಂಜುರಾಗಬೇಕೆಂದು ಬೆಡಿಕೆ ಇಟ್ಟರು.
ಡಾ.‌ ವಿಠ್ಠಲ ಶಿಂದೆ ಪ್ರಾಸ್ತಾವಿಕ ಮಾತನಾಡಿ ಆಸ್ಪತ್ರೆಯ ಮಾಹಿತಿ ನೀಡಿದರು. ಕೊರೊನಾ ವಾರಿಯರ್ಸ್ ಗೆ ಇದೇ ವೇಳೆ ಸನ್ಮಾನಿಸಲಾಯಿತು.
Emergency Service
Bottom Add3
Bottom Ad 2