Beereshwara add 9
KLE1099 Add

ಭೀಕರ ರಸ್ತೆ ಅಪಘಾತ; ಬಿಜೆಪಿ ಶಾಸಕನ ಪುತ್ರ ಸೇರಿ 7 ವಿದ್ಯಾರ್ಥಿಗಳು ದುರ್ಮರಣ

ಕಾಡುಪ್ರಾಣಿ ಕಾರಿಗೆ ಅಡ್ಡ ಬಂದು ಘಟನೆ

ಪ್ರಗತಿವಾಹಿನಿ ಸುದ್ದಿ; ಮುಂಬೈ: ಭೀಕರ ರಸ್ತೆ ಅಪಘಾತದಲ್ಲಿ ಬಿಜೆಪಿ ಶಾಸಕರ ಪುತ್ರ ಸೇರಿದಂತೆ 7 ಜನರು ದುರ್ಮರಣಕ್ಕಿಡಾಗಿರುವ ಘಟನೆ ಮಹಾರಾಷ್ಟ್ರದ ವಾರ್ಧಾದಲ್ಲಿ ನಡೆದಿದೆ.

ಕಾರಿನಲ್ಲಿ ಸೆಲ್ಸುರಾ ಹಳ್ಳಿಯ ಮಾರ್ಗದಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಕಾಡುಪ್ರಾಣಿಯೊಂದು ಅಡ್ಡಬಂದ ಪರಿಣಾಮ ಈ ಅಪಘಾತ ಸಂಭವಿಸಿದೆ. ಕಾಡುಪ್ರಾಣಿಯನ್ನು ತಪ್ಪಿಸಲು ಹೋಗಿ ಕಾರು ಚಾಲಕನ ನಿಯಂತ್ರಣ ತಪ್ಪಿ ಸೇತುವೆ ಕೆಳಗಿನ ಮೋರಿಗೆ ಬಿದ್ದಿದೆ. ಕಾರು ಸಂಪೂರ್ಣ ಜಖಂ ಆಗಿದ್ದು, ಬಿಜೆಪಿ ಶಾಸಕರ ಪುತ್ರ ಸೇರಿ 7 ವೈದ್ಯಕೀಯ ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ.

ಓರ್ವ ವಿದ್ಯಾರ್ಥಿಯ ಹುಟ್ಟುಹಬ್ಬ ಸಂಭ್ರಮಾಚರಣೆಗಾಗಿ ಈ ವಿದ್ಯಾರ್ಥಿಗಳು ತೆರಳುತ್ತಿದ್ದರು. ಪಾರ್ಟಿ ಮುಗಿಸಿ ವಾಪಸ್ ಬರುವಾಗ ಈ ದುರಂತ ಸಂಭವಿಸಿದೆ ಎಂದು ಎಸ್ ಪಿ ಪ್ರಶಾಂತ್ ಹೋಲ್ಕರ್ ತಿಳಿಸಿದ್ದಾರೆ.

ಘಟನೆಯಲ್ಲಿ ಬಿಜೆಪಿ ಶಾಸಕ ವಿಜಯ್ ಭರತ್ ಲಾಲ್ ಪುತ್ರ ಆವಿಷ್ಕಾರ್, ನೀರಜ್​ ಚವನ್​, ನಿತೇಶ್​ ಸಿಂಗ್​, ವಿವೇಕ್​ ನಂದನ್​, ಪ್ರತ್ಯುಷ್​ ಸಿಂಗ್​, ಶುಭಂ ಜೈಸ್ವಾಲ್​, ಪವನ್​ ಶಕ್ತಿ ಮೃತಪಟ್ಟಿದ್ದಾರೆ.

You cannot copy content of this page