Athani Takkennavar
Beereshwara13
GIT add4

ಸಿದ್ದರಾಮಯ್ಯ ಅವಧಿಯದ್ದು 100% ಲೂಟಿ ಸರ್ಕಾರ-INC, ಸ್ಕ್ಯಾಮ್ ರಾಮಯ್ಯ; ಬಿಜೆಪಿ ಕೌಂಟರ್ ಅಟ್ಯಾಕ್

100% ಕಮಿಷನ್ ಎನ್ನುವುದಕ್ಕೆ ಇನ್ನೆಷ್ಟು ಪುರಾವೆ ಬೇಕು?; ಲಿಸ್ಟ್ ಕೊಟ್ಟ ಬಿಜೆಪಿ

KLE1099 Add

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬಿಜೆಪಿ ಸರ್ಕಾರದ ಭ್ರಷಾಚಾರದ ವಿರುದ್ಧ ಪೇಸಿಎಂ ಅಭಿನ ಆರಂಭಿಸಿರುವ ವಿಪಕ್ಷ ಕಾಂಗ್ರೆಸ್ ಗೆ ರಾಜ್ಯ ಬಿಜೆಪಿ ಪ್ರತಿ ದಾಳಿ ನಡೆಸಿದ್ದು, ಸಿದ್ದರಾಮಯ್ಯ ಸರ್ಕಾರ ಹಗರಣಗಳ ಸರ್ಕಾರವಾಗಿತ್ತು ಎಂದು ವಾಗ್ದಾಳಿ ನಡೆಸಿದೆ.

ಈ ಕುರಿತು ಪೋಸ್ಟರ್ ಬಿಡುಗಡೆ ಮಾಡಿರುವ ಬಿಜೆಪಿ, 100% ಲೂಟಿ ಸರ್ಕಾರ-INC ಸ್ಕ್ಯಾಮ್ ರಾಮಯ್ಯ ಎಂದು ಕಿಡಿಕಾರಿದೆ. ಕಾಂಗ್ರೆಸ್ ಪಕ್ಷ ಹಗರಣ ಮಾಡಲೆಂದೇ ಅಧಿಕಾರಕ್ಕೆ ಬಂದಿದ್ದೋ ಎಂಬ ರೀತಿಯಲ್ಲಿ ಸಿದ್ದರಾಮಯ್ಯ ಸರ್ಕಾರ ಆಡಳಿತ ನಡೆಸಿತ್ತು. ಹಗರಣಗಳ ಸರಮಾಲೆಯನ್ನೇ ಕೊರಳಿಗೆ ಹಾಕಿ ಓಡಾಡಿದ ಖ್ಯಾತಿ ಕಾಂಗ್ರೆಸ್ ಸರ್ಕಾರಕ್ಕೆ ಸಲ್ಲುತ್ತದೆ ಎಂದು ಹಿಗ್ಗಾ ಮುಗ್ಗಾ ವಾಕ್ಪ್ರಹಾರ ನಡೆಸಿದೆ.

ಸಿದ್ದರಾಮಯ್ಯ ಅವರ ಅಧಿಕಾರಾವಧಿಯಲ್ಲಿ ಹಗರಣ ಮಾಡುವುದೇ ಆಡಳಿತ ಎಂಬಂತಾಗಿತ್ತು. ಶಿಕ್ಷಕರ ಅಕ್ರಮ ನೇಮಕಾತಿ ಹಗರಣದಲ್ಲಿನ ಕಮಿಷನ್, ಸ್ಟೀಲ್ ಬ್ರಿಡ್ಜ್ ನಿರ್ಮಾಣದಲ್ಲಿ ಕಮಿಷನ್‌, ಬಿಬಿಎಂಪಿಯಲ್ಲಿ ನಡೆಸಿದ 1400 ಕೋಟಿ ಹಗರಣದ ಕಮಿಷನ್, ನಾಗಾರ್ಜುನ ಕಂಪನಿಯಿಂದ 15% ಕಮಿಷನ್ ಪಡೆದು ಸ್ಟೀಲ್ ಬ್ರಿಡ್ಜ್ ನಿರ್ಮಾಣಕ್ಕೆ “ಕೈ” ಹಾಕಿದ ಸತ್ಯಸಂಗತಿ‌ ಗೋವಿಂದ ರಾಜ್ ಡೈರಿಯಲ್ಲಿ ಬಯಲಾಗಿದ್ದು ಮರೆತು ಹೋಯಿತೇ? ಸಿದ್ದರಾಮಯ್ಯ ಅವಧಿಯ ಕಾಂಗ್ರೆಸ್ ಸರ್ಕಾರ 100% ಕಮಿಷನ್ ಸರ್ಕಾರ ಎನ್ನುವುದಕ್ಕೆ ಇನ್ನೆಷ್ಟು ಪುರಾವೆ ಬೇಕು? ಎಂದು ಲಿಸ್ಟ್ ಕೊಟ್ಟು ಪ್ರಶ್ನಿಸಿದೆ.

ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಎಲ್ಲ ಯೋಜನೆಗಳಲ್ಲೂ ಹಗರಣ ನಡೆದಿದೆ. ಅನ್ನಭಾಗ್ಯ ಅಕ್ಕಿ ಕಳವು, ಅರ್ಕಾವತಿ ರೀಡೂ ಹಗರಣ, ಹಾಸಿಗೆ ತಲೆದಿಂಬು ಖರೀದಿ ಹಗರಣ, ಕಲ್ಲು ಗಣಿಕಾರಿಕೆ, ಮರಳು ದಂಧೆ, ಟ್ರಾನ್ಸ್‌ಫರ್ ದಂಧೆ ಭ್ರಷ್ಟರಾಮಯ್ಯ ಅವರೇ ಇದಕ್ಕೆಲ್ಲಾ ಪಡೆದ ಕಮೀಷನ್ ಎಷ್ಟು? ಎಂದು ಹಿಗ್ಗಾ ಮುಗ್ಗಾ ವಾಗ್ದಾಳಿ ನಡೆಸಿದೆ.

Nivedita Navalgund
You cannot copy content of this page