Athani Takkennavar
Beereshwara13
GIT add4

ಬ್ರಹ್ಮಕುಮಾರಿ ಸಂಸ್ಥೆಯ ಕಲಾ ಮತ್ತು ಸಂಸ್ಕೃತಿ ವಿಭಾಗದ ಸಮ್ಮೇಳನ

ಸೆ.27ರವರೆಗೆ ನಡೆಯಲಿರುವ ಕಾರ್ಯಕ್ರಮ

KLE1099 Add

ಪ್ರಗತಿವಾಹಿನಿ ಸುದ್ದಿ; ಹುಬ್ಬಳ್ಳಿ: ನಿರಾಕಾರ ಭಗವಂತನ ಮಹಾನ ಸಂಕಲ್ಪ ಈಸೃಷ್ಟಿಯಲ್ಲಿ ಸಾಕಾರಗೊಳ್ಳಲಿ. ಭಗವದ್ಗೀತೆಯ ಪರಮಾತ್ಮನ ಪ್ರತ್ಯಕ್ಷತೆ ವಿಶ್ವದಲ್ಲಿ ಅತಿಶೀಘ್ರವಾಗಲಿದೆ ಎಂದು ರಾಜರುಷಿ ಬಸವರಾಜ ಅವರು ತನ್ನ ಉದ್ಘಾಟನಾ ಭಾಷಣದಲ್ಲಿ ಹೇಳಿದರು.

ಈ ಸೃಷ್ಟಿ ನಾಟಕದಲ್ಲಿ ಪ್ರತಿಯೊಬ್ಬರು ಕಲಾಕಾರರಾಗಿದ್ದಾರೆ. ಸಂಗಮಯುಗವು ಭಗವಂತನ ಅವತರಣೆಯುಗವಾಗಿದೆ. ನಾವೆಲ್ಲರೂ ಸಾಧನಾರ‍್ತಿಯಾಗಿ ಪರಮಾತ್ಮನ ಪ್ರತ್ಯಕ್ಷತೆ ಮಾಡೋಣವೆಂದು ಕರೆ ನೀಡಿದರು.

ಕಲಾ ಮತ್ತು ಸಂಸ್ಕೃತಿ ವಿಭಾಗದ ಅಧ್ಯಕ್ಷನಾಗಿರುವ ಬ್ರಹ್ಮಾಕುಮಾರ ದಯಾಳಭಾಯಿ ಮೌಂಟ್ಅಬು ಅವರು ನಾವು ಎಲ್ಲಿ ಹೋದರು ಸಕಾರಾತ್ಮಕ ವಿಚಾರಗಳನ್ನು ಮಾಡಬೇಕು. ತನು-ಮನ-ಧನದಿಂದ ಸೇವೆಯನ್ನು ಮಾಡಿ ನಮ್ಮ ಜೀವನ ಸಾರ್ಥಕಗೊಳಿಸಬೇಕು, ಇದೇ ಕಲಾಕಾರನ ಗುರಿಯಾಗಿರಬೇಕು ಎಂದು ಹೇಳಿದರು.

5,000ಕ್ಕೂ ಹೆಚ್ಚು ಗೀತೆ ರಚಿಸಿ ಹಾಡಿರುವ ಬ್ರಹ್ಮಾಕುಮಾರ್ ಸತೀಶ್, ಮೌಂಟ್ಅಬು ಅವರು ನಾವು ಶ್ರೀಮಆಧ್ಯಾತ್ಮಿಕ ಕಲಾಕಾರ ಆಗುವ ಬಗ್ಗೆ ವಿವರಣೆ ನೀಡಿದರು. ಕುಮಾರಿ ಪುಷ್ಪಾಂಜಲಿ ಅವರ ಭರತನಾಟ್ಯವು ಕಣ್ಣಿಗೆ ಹಬ್ಬವಾಗಿತ್ತು.

ವಿಶ್ವ ಒಂದೇ ಪರಿವಾರ ಎಂಬ ಹಾಡು ದಾವಣಗೆರೆ ನೃತ್ಯ ತಂಡದಿಂದ ಮೂಡಿಬಂತು. ದುಬೈಯಿಂದ ಬಂದ ಗಾಯಕ್ವಾಡ್ಭಾಯಿಯವರ ಕೊಳಲು ವಾದನ ಮಧುರವಾಗಿತ್ತು. ಕಾರ್ಯಕ್ರಮದಲ್ಲಿ ಬ್ರಹ್ಮಕುಮಾರಿ ಪೂನಂದೆಹಲಿ, ಬ್ರಹ್ಮಾಕುಮಾರಿ ಪ್ರೇಮ್ಬಹೇನ್, ಹರಿಯಾಣ, ಬ್ರಹ್ಮಾಕುಮಾರ ನಿತಿನ್, ಮೌಂಟ್ಅಬು, ಬ್ರಹ್ಮಾಕುಮರ‍್ವಿಶ್ವನಾಥ ಮತ್ತು ಬ್ರಹ್ಮಾಕುಮಾರಿ ಶಾರದಾ ಬೆಂಗಳೂರು ಮತ್ತು ಸುಮಾರು 280 ಕಲಾವಿದರು, ನೃತ್ಯ ಕಲಾಕಾರರು ಭಾಗವಹಿಸಿದ್ದರು.

ನಿರೂಪಣೆ ಬ್ರಹ್ಮಾಕುಮಾರಿ ಲೀಲಾ ದಾವಣಗೆರೆ ಅವರು ಮಾಡಿದರು. ಬ್ರಹ್ಮಾಕುಮಾರಿರ‍್ಮಲವಲಯ ಸಂಚಾಲಕಿ ಹುಬ್ಬಳ್ಳಿ, ಸ್ವಾಗತಿಸಿದ್ದಾರೆ. ವಂದರ‍್ಪಣೆ ಬ್ರಹ್ಮಾಕುಮರ‍್ವಿಶ್ವನಾಥ್ ಅವರು ಮಾಡಿದರು.

ಈ ಸಮ್ಮೇಳನವು 21 ರಿಂದ 27ವರೆಗೆ ಹುಬ್ಬಳ್ಳಿಯ ಭಗವದ್ಗೀತಾ ಜ್ಞಾನಲೋಕ ಮ್ಯೂಸಿಯಂನಲ್ಲಿ,”ಸ್ವತಂತ್ರ ಭಾರತದ ಅಮೃತ್ಮಹೋತ್ಸವದಿಂದ ಸ್ರ‍್ಣಮಭಾರತದ ಕಡೆಗೆ, ಕಾರ್ಯಕ್ರಮದ ಅಂಗವಾಗಿ ಕಲೆ ಮತ್ತು ಸಂಸ್ಕೃತಿ ವಿಭಾಗದಿಂದ ಆಯೋಜಿಲಾಗಿದೆ. ಇದರಲ್ಲಿ ವಿಕೃತ ಮನಸುಗಳನ್ನು ಪರಿವರ್ತನೆ ಮಾಡುವುದು ಹೇಗೆ ಎಂಬ ವಿಷಯದ ಬಗ್ಗೆ 7 ದಿನಗಳ ಕಾಲ ಕಲಾಕಾರರು ಆಧ್ಯಾತ್ಮವಾದಿಗಳಿಂದ ವಿಚಾರಗೋಷ್ಠಿನಡಯಲಿದೆ.

ಭೀಮ್ಸ್ ಆಸ್ಪತ್ರೆಗೆ ಹೆಚ್ಚುವರಿಯಾಗಿ 450 ಹಾಸಿಗೆಯ ಆಸ್ಪತ್ರೆ ನಿರ್ಮಾಣಕ್ಕೆ ಮನವಿ ಮಾಡಿದ ಶಾಸಕ ಅನಿಲ ಬೆನಕೆ

ಭೀಮ್ಸ್ ಆಸ್ಪತ್ರೆಗೆ ಹೆಚ್ಚುವರಿಯಾಗಿ 450 ಹಾಸಿಗೆಯ ಆಸ್ಪತ್ರೆ ನಿರ್ಮಾಣಕ್ಕೆ ಮನವಿ ಮಾಡಿದ ಶಾಸಕ ಅನಿಲ ಬೆನಕೆ

Nivedita Navalgund
You cannot copy content of this page