ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಇಂಡಿಯನ್ ಸ್ಪೇಸ್ ರೀಸರ್ಚ್ ಆರ್ಗನೈಸೇಷನ್ (ಇಸ್ರೋ) ಪ್ರಸಕ್ತ ವರ್ಷ ಆಗಸ್ಟ್ ನಲ್ಲಿ ಚಂದ್ರಯಾನ -3 ಉಡಾವಣೆಗೆ ಚಿಂತನೆ ನಡೆಸಿದೆ.
ಲೋಕಸಭೆಯಲ್ಲಿ ಕೇಳಲಾದ ಪ್ರಶ್ನೆಯೊಂದಕ್ಕೆ ಉತ್ತರಿಸಿರುವ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್ ಅವರು ಈ ಕುರಿತು ಸ್ಪಷ್ಟನೆ ನೀಡಿದ್ದಾರೆ. ಚಂದ್ರಯಾನ -2ದ ಅನುಭವಗಳು, ಮತ್ತು ತಂತ್ರಜ್ಞರ ಸಲಹೆ ಆಧರಿಸಿ ಚಂದ್ರಯಾನ-3ರ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ಪ್ರಸಕ್ತ ವರ್ಷ ಆಗಸ್ಟ್ನಲ್ಲಿ ಚಂದ್ರಯಾನ-3 ಸಾಕಾರಗೊಳ್ಳಲಿದೆ ಎಂದು ಅವರು ಹೇಳಿದ್ದಾರೆ.
ಪ್ರಸಕ್ತ ವರ್ಷ ಇಸ್ರೋದಿಂದ ಒಟ್ಟು 19 ಕಾರ್ಯಾಚರಣೆಯನ್ನು ಅನುಷ್ಠಾನಗೊಳಿಸಲು ಯೋಜನೆ ಸಿದ್ಧಪಡಿಸಲಾಗಿದೆ. ಇದರಲ್ಲಿ 8 ಲಾಂಚ್ ವೆಹಿಕಲ್ ಮಿಷನ್, 7 ಸ್ಪೇಸ್ ಕ್ರಾಪ್ಟ್ ಮಿಷನ್ ಹಾಗೂ 4 ಟೆಕ್ನಾಲಜಿ ಡೆಮಾನ್ಸ್ಟ್ರೇಟರ್ ಮಿಷನ್ಗಳು ಸೇರಿವೆ. ಕೋವಿಡ್ ಕಾರಣದಿಂದ ಈಗಾಗಲೇ ಹಮ್ಮಿಕೊಳ್ಳಬೇಕಿದ್ದ ಕೆಲ ಯೋಜನೆಗಳು ಮುಂದೂಡಲ್ಪಟ್ಟಿದ್ದವು. ಅವುಗಳಲ್ಲಿ ಬಹುಪಾಲು ಯೋಜನೆಗಳು ಈ ವರ್ಷ ಅನುಷ್ಠಾನಗೊಳ್ಳುವ ಭರವಸೆಯಿದೆ ಎಂದು ತಿಳಿಸಿದ್ದಾರೆ.
ಚಳಿಗಾಲದ ಓಲಂಪಿಕ್ಸ್, ಕ್ರೀಡೆಯಲ್ಲೂ ವಿಷ ಕಾರಿದ ಚೀನಾ: ಭಾರತ ವಿರೋಧಿ ನಡೆಗೆ ವ್ಯಾಪಕ ಆಕ್ರೋಶ