Advertisement -Home Add
Chandargi Sports School
Wanted Home Add

ರಾಜ್ಯದಲ್ಲಿ ಇಂದು 1843 ಜನರಲ್ಲಿ ಕೊವಿಡ್ ಪಾಸಿಟೀವ್

ರಾಜ್ಯದಲ್ಲಿ ಒಂದೇ ದಿನ 30 ಜನ ಬಲಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದಲ್ಲಿ ಕೊರೊನಾ ರಣಕೇಕೆ ಮುಂದುವರೆದಿದ್ದು, ದಿದದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಶರವೇಗದಲ್ಲಿ ಹೆಚ್ಚುತ್ತಿದೆ. ರಾಜ್ಯದಲ್ಲಿ ಇಂದು 1843 ಜನರಲ್ಲಿ ಕೊವಿಡ್ ಪಾಸಿಟೀವ್ ಪತ್ತೆಯಾಗಿದೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್, ಬೆಂಗಳೂರಿನಲ್ಲಿ ಇಂದು 981 ಕೊರೊನಾ ಕೇಸ್ ಪತ್ತೆಯಾಗಿದೆ. 10 ಜನರು ಇಂದು ಕೊರೊನಾಗೆ ಬೆಂಗಳೂರಿನಲ್ಲಿ ಬಲಿಯಾಗಿದ್ದಾರೆ ಎಂದು ತಿಳಿಸಿದರು.

ಇಂದು ಒಂದೇ ದಿನ ರಾಜ್ಯದಲ್ಲಿ 1843 ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ರಾಜ್ಯಾದ್ಯಂತ 30 ಜನ ಸಾವನ್ನಪ್ಪಿದ್ದಾರೆ.

ಆರೋಗ್ಯ ಇಲಾಖೆಯ ಹೆಲ್ತ್ ಬುಲಿಟಿನ್ ಇನ್ನಷ್ಟೆ ಬರಬೇಕಿದೆ.