Advertisement -Home Add
Chandargi Sports School
Wanted Home Add

ಒಂದೇ ದಿನ 2313 ಜನರಲ್ಲಿ ಸೋಂಕು ದೃಢ, 57 ಜನರ ಸಾವು

ಬೆಂಗಳೂರು ಒಂದರಲ್ಲೇ 1447 ಮಂದಿಯಲ್ಲಿ ವೈರಸ್ ಪತ್ತೆ, ಒಂದೇ ದಿನ 57 ಜನರ ಸಾವು

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಮಹಾಮಾರಿ ಶರವೇಗದಲ್ಲಿ ಹೆಚ್ಚುತ್ತಿದ್ದು, ಇಂದು ಒಂದೇ ದಿನ 2313 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ಸೋಂಕಿತರ ಸಂಖ್ಯೆ ರಾಜ್ಯದಲ್ಲಿ 33,418ಕ್ಕೆ ಏರಿಕೆಯಾಗಿದೆ.

ಈ ಕುರಿತು ಮಾಹಿತಿ ನೀಡಿರುವ ವೈದ್ಯಕೀಯ ಶಿಕ್ಷಣ ಸಚಿವ ಕೆ.ಸುಧಾಕರ್, ಇಂದು ರಾಜ್ಯದಲ್ಲಿ 2313 ಜನರಲ್ಲಿ ಹೊಸದಾಗಿ ಕೊವಿಡ್ ಪಾಸಿಟೀವ್ ದೃಢಪಟ್ಟಿದೆ. ಅದರಲ್ಲೂ ರಾಜಧಾನಿ ಬೆಂಗಳೂರು ಒಂದರಲ್ಲೇ 1447 ಜನರಲ್ಲಿ ಸೋಂಕು ಪತ್ತೆಯಾಗಿದ್ದು, ಇಂದು 29 ಜನ ಸಾವನ್ನಪ್ಪಿದ್ದಾರೆ ಎಂದರು.

ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ 57 ಜನ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಕೊರಿನಾಗೆ ಬಲಿಯಾದವರ ಸಂಖ್ಯೆ 543ಕ್ಕೆ ಏರಿಕೆಯಾಗಿದೆ ಎಂದು ತಿಳಿಸಿದರು.

ಬೆಳಗಾವಿಯಲ್ಲಿ 15 ಜನರಿಗೆ ಸೋಂಕು ತಗುಲಿದೆ. ದಕ್ಷಿಣ ಕನ್ನಡ 139, ವಿಜಯಪುರ 89, ಬಳ್ಳಾರಿ 66, ಕಲಬುರಗಿ 58, ಯಾದಗಿರಿ, ಮೈಸೂರು51, ಧಾರವಾಡ 50 ಜನರಿಗೆ ಸೋಂಕು ತಗುಲಿದೆ.

ಹಾವೇರಿ 42, ಉಡುವಿ 34, ಉತ್ತರ ಕನ್ನಡ 33, ಕೊಡಗು 33, ಮಂಡ್ಯ 31, ರಾಯಚೂರು 245, ರಾಮನಗರ 23, ದಾವಣಗೆರೆ 21, ಬೀದರ್, ಗದಗ 19, ಚಿಕ್ಕಬಳ್ಳಾಪುರ 12, ತುಮಕೂರು 10, ಕೋಲಾರ, ಚಾಮರಾಜನಗರ 9, ಕೊಪ್ಪಳ 7, ಹಾಸನ, ಶಿವಮೊಗ್ಗ, ಬಾಗಲಕೋಟೆ ತಲಾ 6, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು ತಲಾ 1 ಸೋಂಕು ಪ್ರಕರಣ ಪತ್ತೆಯಾಗಿದೆ.