Advertisement -Home Add

ಜಾನ್ಸನ್ & ಜಾನ್ಸನ್ ಪೌಡರ್ ನಿಂದ ಕ್ಯಾನ್ಸರ್; ಕೋರ್ಟ್ ಮೆಟ್ಟಿಲೇರಿದ ದಂಪತಿ

120 ಮಿಲಿಯನ್ ಡಾಲರ್ ಪರಿಹಾರ ನೀಡುವಂತೆ ಕೋರ್ಟ್ ಸೂಚನೆ

ಪ್ರಗತಿವಾಹಿನಿ ಸುದ್ದಿ; ನ್ಯೂಯಾರ್ಕ್: ಮಕ್ಕಳಿಗೆ ಪ್ರಿಯವಾದ ಜನಪ್ರಿಯ ಜಾನ್ಸನ್ & ಜಾನ್ಸನ್ ಕಂಪನಿ ಪೌಡರ್ ಬಳಕೆಯಿಂದ ಕ್ಯಾನ್ಸರ್ ಬಂದಿದೆ ಎಂದು ಆರೋಪಿಸಿ ದಂಪತಿ ಕೋರ್ಟ್ ಮೆಟ್ಟಿಲೇರಿ ಪರಿಹಾರ ಪಡೆದುಕೊಂಡಿರುವ ಘಟನೆ ನಡೆದಿದೆ.

ಡೊನ್ನಾ ಓಲ್ಸ್ (67), ರಾಬರ್ಟ್ (65) ಎಂಬುವವರು ಪ್ರತಿಷ್ಠಿತ ಜಾನ್ಸನ್ & ಜಾನ್ಸನ್ ಕಂಪನಿ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದು, ಈ ಕಂಪನಿ ಪೌಡರ್ ಬಳಕೆಯಿಂದ ಕ್ಯಾನ್ಸರ್ ಬಂದಿದೆ ಎಂದು ಆರೋಪಿಸಿ, 325 ಮಿಲಿಯನ್ ಡಾಲರ್ ಪರಿಹಾರ ನೀಡುವಂತೆ ಕೋರಿದ್ದರು. 14 ದಿನಗಳಕಾಲ ತನಿಖೆ ನಡೆಸಿದ ಮ್ಯಾನ್ಹ್ಯಟ್ ನ್ಯಾಯಾಲಯ ನ್ಯಾಯಾಧೀಶ ಲೆಬೋವಿಸ್ಟ್ 325 ಮಿಲಿಯನ್ ಡಾಲರ್ ಪರಿಹಾರವನ್ನು 120 ಮಿಲಿಯನ್ ಡಾಲರ್ ಗೆ ಇಳಿಸಿ, ದಂಪತಿಗೆ ಪರಿಹಾರ ನೀಡುವಂತೆ ಆದೇಶಿಸಿದೆ.

ಹಾಗಾಗಿ ಕಂಪನಿ ದಂಪತಿಗಳಿಗೆ 890 ಕೋಟಿ ರೂ ಪರಿಹಾರ ನೀಡಬೇಕಿದ್ದು, ಜಾನ್ಸನ್ & ಜಾನ್ಸನ್ ಕಂಪನಿ ಮೇಲ್ಮನವಿ ಸಲ್ಲಿಸುವ ಸಾಧ್ಯತೆಯಿದೆ.