Athani Takkennavar
Beereshwara13
GIT add4

ಸಾರ್ವಜನಿಕರ ಅಹವಾಲುಗಳಿಗೆ ಡಾ. ಸೋನಾಲಿ ಸರ್ನೋಬತ್ ಸ್ಪಂದನೆ

ಮಹಿಳೆಯರು, ವಿದ್ಯಾರ್ಥಿಗಳ ಸಂಕಷ್ಟ ಆಲಿಸಿದ ಬಿಜೆಪಿ ನಾಯಕಿ

KLE1099 Add

ಪ್ರಗತಿವಾಹಿನಿ ಸುದ್ದಿ; ಖಾನಾಪುರ: ಖಾನಾಪುರದಲ್ಲಿ ಬಿಜೆಪಿ ಪಕ್ಷದ ವತಿಯಿಂದ ಸ್ಥಾಪಿಸಲಾಗಿರುವ ಸಾರ್ವಜನಿಕ ಕುಂದುಕೊರತೆ ಪರಿಹಾರ ಕೇಂದ್ರದಲ್ಲಿ ಗುರುವಾರ, ಬಿಜೆಪಿಯ ಖಾನಾಪುರ ತಾಲೂಕು ಮಹಿಳಾ ಮೋರ್ಚಾ ಪ್ರಬಾರಿ ಹಾಗೂ ಗ್ರಾಮೀಣ ಮಹಿಳಾ ಮೋರ್ಚಾ ಉಪಾಧ್ಯಕ್ಷೆಯೂ ಆಗಿರುವ ಡಾ. ಸೋನಾಲಿ ಸರ್ನೋಬತ್ ಅವರು ಸ್ವತಃ ಉಪಸ್ಥಿತರಿದ್ದು ಜನರ ಸಮಸ್ಯೆಗಳನ್ನು ಆಲಿಸಿದರು.

ತಾಲೂಕಿನ ಹಲವಾರು ಜನ ವಿವಿಧ ಸಮಸ್ಯೆಗಳ ಪರಿಹಾರಕ್ಕಾಗಿ ಕೇಂದ್ರಕ್ಕೆ ಭೇಟಿ ನೀಡಿದರು. ಅಡುಗೆ ಅನಿಲ ಸಂಪರ್ಕ, ಪಡಿತರ ವಿತರಣೆ, ವಿದ್ಯಾರ್ಥಿ ವೇತನ ಮೊದಲಾದ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸಿ ಪರಿಹರಿಸುವ ಪ್ರಯತ್ನ ಮಾಡಿದರು.

ವಿದ್ಯಾರ್ಥಿಗಳು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು. ಜನರ ಸಮಸ್ಯೆಗಳನ್ನು ಆಲಿಸಿದರು.

ಡಾ‌. ಸೋನಾಲಿ ಸರ್ನೋಬತ್ ಅವರು ಪ್ರತಿ ಗುರುವಾರ ಮಧ್ಯಾಹ್ನ 2 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಕೇಂದ್ರದಲ್ಲಿ ಹಾಜರಿದ್ದು ಸಾರ್ವಜನಿಕರ ಭೇಟಿಗೆ ಲಭ್ಯರಿರುತ್ತಾರೆ.

 

 

ಅಲ್ಲದೇ ಕಚೇರಿಯ ದೂರವಾಣಿ ಸಂಖ್ಯೆ 08336-200105 ಗೆ ಪ್ರತಿ ಗುರುವಾರ ಬೆಳಗ್ಗೆ 11 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಕರೆ ಮಾಡಬಹುದಾಗಿದೆ.

 

 

 

 

ವಿಧಾನಸೌಧ ಮೊಗಸಾಲೆಯಲ್ಲಿ ಆಕಸ್ಮಿಕವಾಗಿ ಎದುರಾದ ಮಾಜಿ ಸಿಎಂಗಳು; ಸಿದ್ದರಾಮಯ್ಯ ಹಾಸ್ಯಕ್ಕೆ ಮನಸಾರೆ ನಕ್ಕ ಯಡಿಯೂರಪ್ಪ

ವಿಧಾನಸೌಧ ಮೊಗಸಾಲೆಯಲ್ಲಿ ಆಕಸ್ಮಿಕವಾಗಿ ಎದುರಾದ ಮಾಜಿ ಸಿಎಂಗಳು; ಸಿದ್ದರಾಮಯ್ಯ ಹಾಸ್ಯಕ್ಕೆ ಮನಸಾರೆ ನಕ್ಕ ಯಡಿಯೂರಪ್ಪ

Nivedita Navalgund
You cannot copy content of this page