Athani Takkennavar
Beereshwara13
GIT add4

ಖಾನಾಪುರ: ಹರ್ ಘರ್ ತಿರಂಗಾ ಕಾರ್ಯಕ್ರಮಕ್ಕೆ ವಿಶೇಷ ಮೆರಗು ನೀಡಿದ ಡಾ.ಸೋನಾಲಿ ಸರ್ನೋಬತ್

ಮನೆ ಮನೆಗಳಿಗೂ ರಾಖಿಯೊಂದಿಗೆ ರಾಷ್ಟ್ರಧ್ವಜ ವಿತರಿಸಿದ ಬಿಜೆಪಿ ಕಾರ್ಯಕರ್ತರು

KLE1099 Add

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: 75 ನೇ ಸ್ವಾತಂತ್ರ್ಯ ದಿನಾಚರಣೆಯ ಮುನ್ನ ಬಿಜೆಪಿ ಕಾರ್ಯಕರ್ತರು ಖಾನಾಪುರದಲ್ಲಿ ಮನೆ ಮನೆಗೂ ರಾಷ್ಟ್ರಧ್ವಜ ಹಾಗೂ ರಾಖಿಗಳನ್ನು ವಿತರಿಸುತ್ತಿರುವುದು ವಿಶೇಷ.

ಡಾ ಸರ್ನೋಬತ್ ಅವರ ನಿಯತಿ ಫೌಂಡೇಶನ್  ಮಹಿಳೆಯರು ಮತ್ತು ಯುವಕರಿಗೆ ಸಹಾಯ ಮಾಡುತ್ತಿದ್ದು, ನಿರ್ಗತಿಕ ಮಹಿಳೆಯರು ತಯಾರಿಸಿದ ರಾಖಿಗಳನ್ನು  ನಿಯತಿ ಫೌಂಡೇಶನ್ ವತಿಯಿಂದ ಖರೀದಿಸಿ ಖಾನಾಪುರದ ಮನೆಗಳಿಗೆ ವಿತರಿಸುತ್ತಿದ್ದಾರೆ.

ಬಿಜೆಪಿ ಜಿಲ್ಲಾಧ್ಯಕ್ಷರಾದ ಸಂಜಯ ಪಾಟೀಲ, ಬಿಜೆಪಿ ಕರ್ನಾಟಕ ರಾಜ್ಯ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಅವರ ನೇತೃತ್ವದಲ್ಲಿ  ಖಾನಾಪುರದ ಮಂಡಲ ಪದಾಧಿಕಾರಿಗಳು, ಡಾ.ಸೋನಾಲಿ ಸರ್ನೋಬತ್, ಬಸವರಾಜ ಕಡೇಮನಿ, ಈಶ್ವರ ಸಾನಿಕೋಪ್, ಬಾಳೇಶ ಚವಣ್ಣವರ, ಪರಶುರಾಮ ಕೋಲ್ಕಾರ, ರಾಹುಲ್ ಆಳ್ವಾನಿ, ರೋಶನ ಸುತಾರ್, ಭಾಜಪ ಮಹಿಳಾ ಮೊರ್ಚಾ ಜಿಲ್ಲಾಧ್ಯಕ್ಷರಾದ ಸೋನಾಲಿ ಸರ್ನೋಬತ್ ಟೀಮ್ ವಿನೊದ ಪಾವಲೆ, ಅರ್ಜುನ್ ಗಾವಡ, ಹನ್ಮಂತ ಟಕ್ಕೇಕರ, ಶಿವಾಜಿ ಸಾಳ್ವಕ್ಕಿ, ವಿನಾಯಕ ನಾಯಕ್, ಭೀಮಾ ಅಗಸರ, ದಯಾನಂದ ಚೋಪಡೆ, ದತ್ತಾರಾಮ ಪಾಟೀಲ, ವಿಕಾಸ ವಡ್ಡರ ಸೇರಿದಂತೆ ಎಲ್ಲಾ ಬಿಜೆಪಿ ಕಾರ್ಯಕರ್ತರು ಖಾನಾಪುರದ ಎಲ್ಲಾ ಮನೆಗಳಿಗೆ ತ್ರಿವರ್ಣ ಧ್ವಜ ಮತ್ತು ರಾಖಿಗಳನ್ನು ವಿತರಿಸುತ್ತಿದ್ದಾರೆ.

ನಾವೆಲ್ಲರೂ ಹರ್ ಘರ್ ತಿರಂಗವನ್ನು ಉತ್ಸಾಹ ಮತ್ತು ಹೆಮ್ಮೆಯಿಂದ ಆಚರಿಸೋಣ ಎಂದು ಡಾ ಸೋನಾಲಿ ಸರ್ನೋಬತ್ ಕರೆ ನೀಡಿದ್ದಾರೆ.

ACB ರದ್ದು; ಎಲ್ಲಾ ಪ್ರಕರಣ ಲೋಕಾಯುಕ್ತಕ್ಕೆ ವರ್ಗಾವಣೆ; ಹೈಕೋರ್ಟ್ ಮಹತ್ವದ ಆದೇಶ

 

ಶ್ರಮಿಕ ಮಹಿಳೆಯರಲ್ಲಿ ಆತ್ಮ ವಿಶ್ವಾಸ ಅಗತ್ಯ: ಡಾ. ಸೋನಾಲಿ ಸರ್ನೋಬತ್

ಕ್ಷತ್ರೀಯ ಮರಾಠಾ ಸಮಾಜದ ಮಹಿಳಾ ಘಟಕದ ಅಧ್ಯಕ್ಷರಾಗಿ ಡಾ.ಸೋನಾಲಿ ಸರ್ನೋಬತ್

Nivedita Navalgund
You cannot copy content of this page