Advertisement -Home Add
Crease wise (28th Jan)
KLE1099 Add

ಸಹೋದರಿಯ ಜೊತೆ ಪತಿಯ ಅಕ್ರಮ ಸಂಬಂಧ; ನಾಲ್ಕನೇ ಗಂಡನಿಂದಲೇ ಹತ್ಯೆಯಾದ ಡ್ರಗ್ ಕ್ವೀನ್

ಪತಿಯಿಂದಲೇ ಹತ್ಯೆಯಾದ ಡ್ರಗ್ ಕ್ವೀನ್ ಶಯನಾ

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಮಾದಕ ಲೋಕದ ಕ್ವೀನ್ ಎಂದೇ ಹೆಸರಾಗಿದ್ದ ಶನಯಾ ತನ್ನ ನಾಲ್ಕನೇ ಪತಿಯಿಂದ ಬರ್ಬರವಾಗಿ ಹತ್ಯೆಯಾಗಿರುವ ಘಟನೆ ದೆಹಲಿಯ ನಿಜಾಮುದ್ದೀನ್ ವಲಯದಲ್ಲಿ ನಡೆದಿದೆ.

ಶನಯಾಳ ಮೇಲೆ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿರುವ ಆಕೆಯ ನಾಲ್ಕನೇ ಪತಿ ವಸೀಮ್ ಕೃತ್ಯದ ಬಳಿಕ ಪೊಲೀಸ್ ಠಾಣೆಗೆ ಬಂದು ತಾನೇ ಶರಣಾಗಿದ್ದಾನೆ.

ಡ್ರಗ್ ಕ್ವೀನ್ ಎಂದೇ ಹೆಸರಾಗಿದ್ದ ಶನಯಾ ನಾಲ್ಕು ಮದುವೆಯಾಗಿದ್ದಳು ಅದಾಗಲೇ ಇಬ್ಬರು ಗಂಡಂದಿರು ಆಕೆಯಿಂದ ದೂರವಾಗಿ ಬಾಂಗ್ಲಾಗೆ ತೆರಳಿದ್ದರು. ಅದಾದ ಬಳಿಕ ಶನಯಾ ಡ್ರಗ್ ಕಿಂಗ್ ಎಂದೇ ಕುಖ್ಯಾತನಾಗಿದ್ದ ಶರಾಪತ್ ಶೇಖ್ ಎಂಬಾತನನ್ನು ವಿವಾಹವಾಗಿದ್ದಳು. ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಶರಾಪತ್ ಶೇಖ್ ನನ್ನು ಪೊಲೀಸರು ಬಂಧಿಸಿ ತಿಹಾರ್ ಜೈಲಿಗೆ ಕಳುಹಿಸಿದ್ದರು. ಇದರ ಬೆನ್ನಲ್ಲೇ ಶನಯಾ ಶರಾಪತ್ ನನ್ನು ಬಿಟ್ಟು ವಸೀಮ್ ಎಂಬಾತನ್ನು ಮದುವೆಯಾಗಿದ್ದಳು. ವಸೀಮ್ ಜೊತೆ ಸಂಭ್ರಮದಿಂದ ಜೀವನ ಸಾಗಿಸಿದ್ದ ಶನಯಾ ಗರ್ಭಿಣಿಯಾಗಿದ್ದಳು. ಆದರೆ ಡ್ರಗ್ಸ್ ಪ್ರಕರಣದಲ್ಲಿ ಪೊಲೀಸರು ಆಕೆಯನ್ನು ಬಂಧಿಸಿದ್ದರು.

ಶನಯಾ ಜೈಲು ಸೇರುತ್ತಿದ್ದಂತೆ ಆಕೆಯ ತಂಗಿ ರೆಹಾನಾ ಜೊತೆ ವಸೀಮ್ ಅಕ್ರಸಂಬಂಧ ಹೊಂದಿದ್ದ. ಈ ನಡುವೆ ಎಂಟು ತಿಂಗಳ ಗರ್ಭಿಣಿಯಾಗುತ್ತಿದ್ದಂತೆ ಶನಯಾ ಪೆರೋಲ್ ಮೇಲೆ ಬಿಡುಗಡೆಯಾಗಿ ಮನೆಗೆ ಬಂದಿದ್ದಳು. ವಸೀಮ್ ಹಾಗೂ ತನ್ನ ಸಹೋದರಿಯ ಕಳ್ಳಾಟಗಳು ಬಯಲಾಗಿದ್ದವು. ಇದೇ ವಿಚಾರವಾಗಿ ವಸೀಮ್ ಜೊತೆ ಶನಯಾ ಜಗಳವಾಡಿದ್ದಳು. ತನ್ನ ತಂಗಿಯ ಜೊತೆಯೇ ಅಕ್ರಮ ಸಂಬಂಧಹೊಂದಿದ್ದ ಪತಿಯನ್ನು ಪ್ರಶ್ನಿಸಿದ್ದಕ್ಕೆ ಕೋಪಗೊಂಡ ವಸೀಮ್ ಶಯನಾಳನ್ನೇ ಗುಂಡಿಟ್ಟು ಹತ್ಯೆಗೈದಿದ್ದಾನೆ. ಶನಯಾ ರಕ್ಷಣೆಗೆ ಬಂದ ಮನೆ ಕೆಲಸದವನ ಮೇಲೂ ವಸೀಮ್ ಗುಂಡು ಹಾರಿಸಿದ್ದು, ಗಂಭೀರವಾಗಿ ಗಾಯಗೊಂಡಿರುವ ಮನೆಗೆಲಸದವನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸತೀಶ್ ಜಾರಕಿಹೊಳಿ ಗನ್ ಮ್ಯಾನ್ ಕೊರೋನಾಕ್ಕೆ ಬಲಿ