

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಹಣಕಾಸು ವ್ಯವಹಾರದಲ್ಲಿ ಅಕ್ರಮ ಹಿನ್ನೆಲೆಯಲ್ಲಿ ಮಂತ್ರಿ ಗ್ರೂಪ್ ಸಿಎಂಡಿ ಸುಶೀಲ್ ಪಾಂಡುರಂಗ ಮಂತ್ರಿಯನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ.
ಬೆಂಗಳೂರಿನ ಇಡಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾದ ಸುಶೀಲ್ ಪಾಂಡುರಂಗರನ್ನು ಬಂಧಿಸಲಾಗಿದೆ ಎಂದು ಇಡಿ ಅಧಿಕಾರಿಗಳು ಸ್ಪಷ್ಟ ಪಡಿಸಿದ್ದಾರೆ.
ಮಾಲ್, ವಿಲ್ಲಾ, ಫ್ಲ್ಯಾಟ್ ಖರೀದಿದಾರರಿಂದ 1 ಕೋಟಿಗೂ ಅಧಿಕ ಹಣ ಸಂಗ್ರಹ ಮಾಡಿದ್ದ ಆರೋಪ ಹಿನ್ನೆಲೆಯಲ್ಲಿ ಇಡಿ ಅಧಿಕಾರಿಗಳು ಕಳೆದ ವರ್ಷ ಮಂತ್ರಿ ಗ್ರೂಪ್ ಮೇಲೆ ದಾಳಿ ನಡೆಸಿದ್ದರು. ಕೆಲ ದಾಖಲೆ ಪತ್ರಗಳನ್ನು ವಶಕ್ಕೆ ಪಡೆದಿದ್ದರು. ಖರೀದಿದಾರರಿಂದ ಹಣ ಪಡೆದು 7-8 ವರ್ಷವಾದರೂ ಫ್ಲ್ಯಾಟ್ ಕೊಡದೆ ವಂಚಿಸಿದ್ದರು. ಖರೀದಿದಾರರಿಂದ ದೂರು ಕೂಡ ದಾಖಲಾಗಿತ್ತು.
ಇದೀಗ ಶುಕ್ರವಾರ ಪ್ರಿವೆನ್ಶನ್ ಆಫ್ ಮನಿ ಲಾಂಡರಿಂಗ್ ಅಕ್ಟ್ ಅಡಿ ಸುಶೀಲ್ ಪಾಂಡುರಂಗ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಇಡಿ ನೋಟೀಸ್ ನೀಡಿತ್ತು. ಇಂದು ವಿಚಾರಣೆಗೆ ಹಾಜರಾದ ಸುಶೀಲ್ ಅವರನ್ನು ಇಡಿ ಅಧಿಕಾರಿಗಳು ಬಂಧಿಸಿದ್ದಾರೆ.
ಮಕ್ಕಳಿಗಾಗಿ ವಿಶಿಷ್ಟ ಕನಸಿನ ಯೋಜನೆ ರೂಪಿಸಿದ ಶಾಸಕ ಅಭಯ ಪಾಟೀಲ

ನಿಖರ, ನಿರಂತರ ಮತ್ತು ನಿಷ್ಪಕ್ಷಪಾತ ಸುದ್ದಿಗಳಿಗಾಗಿ ಪ್ರಗತಿವಾಹಿನಿ ಗ್ರುಪ್ ಸೇರಲು NEWS ಎಂದು ಟೈಪ್ ಮಾಡಿ 8197712235 ನಂಬರ್ ಗೆ ವಾಟ್ಸಪ್ ಮಾಡಿ.
ದಯವಿಟ್ಟು ನಮ್ಮ YouTube ಚಾನೆಲ್ ಗೆ ಸಬ್ ಸ್ಕ್ರೈಬ್ ಮಾಡಿ