GIT add 2024-1
Laxmi Tai add
Beereshwara 33

ಎನ್ ಕೌಂಟರ್ ಸುಲಭವಲ್ಲ, ನಕಲಿ ಎಂದು ಸಾಬೀತಾದರೆ ಜೀವಾವಧಿ ಶಿಕ್ಷೆ

ಎನ್ ಕೌಂಟರ್ ಮಾಡುವುದೂ ಸುಲಭವಲ್ಲ, ಅದು ಅನಿವಾರ್ಯಗಿತ್ತು ಎಂದು ಪ್ರೂವ್ ಮಾಡುವುದೂ ಸುಲಭವಲ್ಲ.

Anvekar 3
Cancer Hospital 2

ಎಂ.ಕೆ.ಹೆಗಡೆ, ಬೆಳಗಾವಿ – ಹೈದರಾಬಾದ್ ನಲ್ಲಿ ಪಶು ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಎನ್ ಕೌಂಟರ್ ಮಾಡಿ ಕೊಲ್ಲಲಾಗಿದೆ. ಪೊಲೀಸರ ಈ ಕ್ರಮ ರಾಷ್ಟ್ರಾದ್ಯಂತ ಸಂಭ್ರಮವನ್ನುಂಟು ಮಾಡಿದೆ. ( ಪಶುವೈದ್ಯೆ ಅತ್ಯಾಚಾರಿಗಳ ಎನ್ ಕೌಂಟರ್: ಹುಬ್ಬಳ್ಳಿ ಅಧಿಕಾರಿ ನೇತೃತ್ವ )

ಅದರಲ್ಲೂ ಎನ್ ಕೌಂಟರ್ ತಂಡದ ನೇತೃತ್ವ ವಹಿಸಿದ್ದವರು ಸೈಬರಾಬಾದ್ ಪೊಲೀಸ್ ಆಯುಕ್ತ ವಿಶ್ವನಾಥ ಸಜ್ಜನರ್, ಅವರು ಕರ್ನಾಟಕದ ಹುಬ್ಬಳ್ಳಿಯವರು ಎನ್ನುವ ವಿಷಯ ಗೊತ್ತಾಗುತ್ತಿದ್ದಂತೆ ಕರ್ನಾಟಕದಲ್ಲಿ ಭಾರಿ ಪ್ರಶಂಸೆ ವ್ಯಕ್ತವಾಗುತ್ತಿದೆ. ವಿಶ್ವನಾಥ ಸಜ್ಜನರ್ ರಾತ್ರಿ ಬೆಳಗಾಗುವುದರಲ್ಲಿ ಪ್ರಸಿದ್ಧರಾಗಿಬಿಟ್ಟಿದ್ದಾರೆ.

ಆರೋಪಿಗಳನ್ನು ಮಹಜರು ಮಾಡಲೆಂದು ಕರೆದೊಯ್ಯುವಾಗ ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದರು. ಆಗ ಪೊಲೀಸರು ಎನ್ ಕೌಂಟರ್ ಮಾಡಬೇಕಾಯಿತು ಎಂದು ಸಜ್ಜನರ್ ಪ್ರತಿಕ್ರಿಯೆ ನೀಡಿದ್ದಾರೆ. ಬೆಳಗಿನಜಾವ 3.30ರ ಹೊತ್ತಿಗೆ, ಎಲ್ಲಿ ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿತ್ತೋ ಅದೇ ಜಾಗದಲ್ಲಿ ಎನ್ ಕೌಂಟರ್ ಮಾಡಲಾಗಿದೆ.

 

ಎನ್ ಕೌಂಟರ್ ಸುಲಭವಲ್ಲ

ಪೊಲೀಸ್ ಎನ್ ಕೌಂಟರ್ ಎಲ್ಲೆಡೆಯಿಂದ ಪ್ರಶಂಸೆಗೆ ಪಾತ್ರವಾಗುತ್ತಿದೆ. ನ್ಯಾಯಾಲಯದಲ್ಲಿ ತೀರ್ಪು ವಿಳಂಬವಾಗುವುದರಿಂದ ಅತ್ಯಾಚಾರದಂತಹ ಹೀನಾಯ ಪ್ರಕರಣಗಳಿಗೆ ಎನ್ ಕೌಂಟರ್ ಸರಿಯಾದ ಶಿಕ್ಷೆ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.  ವಿಶ್ವನಾಥ ಸಜ್ಜನರ್ ಕೆಲಸಕ್ಕೆ ಸ್ಲಾಘನೆ ವ್ಯಕ್ತವಾಗುತ್ತಿದೆ.

ಆದರೆ ಎನ್ ಕೌಂಟರ್ ಮಾಡುವುದೂ ಸುಲಭವಲ್ಲ, ಅದು ಅನಿವಾರ್ಯಗಿತ್ತು ಎಂದು ಪ್ರೂವ್ ಮಾಡುವುದೂ ಸುಲಭವಲ್ಲ. ಪಕ್ಕದಲ್ಲೇ ನಿಲ್ಲಿಸಿಕೊಂಡು ಯಾರನ್ನೇ ಆಗಲಿ ಎನ್ ಕೌಂಟರ್ ಮಾಡಲು ಬರುವುದಿಲ್ಲ. ಅವರು ತಪ್ಪಿಸಿಕೊಂಡು ಓಡುತ್ತಿರುವುದು ನ್ಯಾಯಾಲಯದಲ್ಲಿ ಸಾಬೀತಾಗಬೇಕಾದರೆ ಅದಕ್ಕೆ ಪೂರಕವಾದ ಸನ್ನಿವೇಶ ಅಲ್ಲಿರಬೇಕಾಗುತ್ತದೆ.

ಪಂಚನಾಮೆ ಮಾಡುವಾಗ ಎಲ್ಲವನ್ನೂ ದಾಖಲಿಸಬೇಕಾಗುತ್ತದೆ. ಅದರಲ್ಲೂ ನಾಲ್ವರ ಎನ್ ಕೌಂಟರ್ ನಡೆದಿರುವುದರಿಂದ, ನಾಲ್ವರೂ ಸಾವಿಗೀಡಾಗಿರುವುದರಿಂದ ಈ ಪ್ರಕರಣವನ್ನು ಎನ್ ಕೌಂಟರ್ ಎಂದು ಸಾಬೀತು ಮಾಡುವುದು ತೀರಾ ಸವಾಲಿನ ಕೆಲಸವೇ ಸರಿ.

Emergency Service

ಗಂಭೀರ ಪ್ರಕರಣ

ನಕಲಿ ಎನ್ ಕೌಂಟರ್ ಆಗಿದ್ದಲ್ಲಿ ಸರ್ವೋಚ್ಛ ನ್ಯಾಯಾಲಯ ಅತ್ಯಂತ ಗಂಭೀರವಾಗಿ ಪರಿಗಣಿಸುತ್ತದೆ. ಈಚೆಗೆ ನಕಲಿ ಎನ್ ಕೌಂಟರ್ ಸಾಬೀತಾದ ಹಿನ್ನೆಲೆಯಲ್ಲಿ 7 ಯೋಧರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. 2009ರಲ್ಲಿ ನಡೆದ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಡೆಹರಾಡೂನ್ ನಲ್ಲಿ ನಡೆದ ಎನ್ ಕೌಂಟರ್ ನಕಲಿ ಎಂದು ಸಾಬೀತಾಗಿದ್ದರಿಂದ 17 ಪೊಲೀಸರಿಗೆ 2014ರಲ್ಲಿ  ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

ಉತ್ತರ ಪ್ರದೇಶದ ಗೊಂಡಾ ಜಿಲ್ಲೆಯಲ್ಲಿ  31 ವರ್ಷಗಳ ಹಿಂದೆ ನಡೆದ ಪ್ರಕರಣವೊಂದಕ್ಕೆ  ಸಂಬಂಧಿಸಿದಂತೆ  2013ರಲ್ಲಿ ಬಂದ ತೀರ್ಪಿನಲ್ಲಿ 8 ಪೊಲೀಸರಿಗೆ ಶಿಕ್ಷೆಯಾಗಿದೆ. ಹಾಗಾಗಿಯೇ ಎಷ್ಟೇ ಒತ್ತಡವಿದ್ದರೂ ಪೊಲೀಸರು ಎನ್ ಕೌಂಟರ್ ಮಾಡಲು ಹಿಂದೇಟು ಹಾಕುವುದು.

ಹೈದರಾಬಾದ್ ನಲ್ಲಿ ಈಗ ನಡೆದಿರುವ ಪ್ರಕರಣದಲ್ಲಿ ಅತ್ಯಾಚಾರಿಗಳ ಪರವಾಗಿ ವಕಾಲತು ವಹಿಸದಿರಲು ಅಲ್ಲಿನ ವಕೀಲರು ನಿರ್ಧರಿಸಿದ್ದರು. ಇದೀಗ ಅವರ ಎನ್ ಕೌಂಟರ್ ಪ್ರಕರಣದಲ್ಲೂ ಅಂತಹುದೇ ನಿರ್ಧಾರ ತೆಗೆದುಕೊಳ್ಳುತ್ತಾರಾ ಎನ್ನುವುದು ಇನ್ನಷ್ಟೆ ಗೊತ್ತಾಗಬೇಕಿದೆ.

ಒಂದು ವೇಳೆ ವಕಾಲತು ವಹಿಸಲು ಯಾರೂ ಸಿದ್ದವಾಗದಿದ್ದಲ್ಲಿ ಸರಕಾರವೇ ಅಂತವರಿಗೆ ವಕೀಲರ ವ್ಯವಸ್ಥೆ ಮಾಡಿಕೊಡಬೇಕಾಗುತ್ತದೆ. ಈ ದೇಶದ ಕಾನೂನು ಹಾಗಿದೆ.

ಈ ಎಲ್ಲ ಹಿನ್ನೆಲೆಯಲ್ಲಿ ವಿಶ್ವನಾಥ ಸಜ್ಜನರ್ ಅಥವಾ ಇನ್ಯಾರೇ ಎನ್ ಕೌಂಟರ್ ಮಾಡಿದ್ದರೆ ಅವರು ಪ್ರಕರಣ ಎದುರಿಸಲೇಬೇಕಾಗುತ್ತದೆ. ಎನ್ ಕೌಂಟರ್ ನಲ್ಲಿ ಸತ್ತವರು ಆರೋಪಿಗಳೇ ವಿನಃ ಅಪರಾಧಿಗಳಲ್ಲ. ಅಪರಾಧಿಗಳಾಗಿದ್ದರೂ ನ್ಯಾಯಾಯಲಯ ತೀರ್ಪು ನೀಡಬಹುದೇ ವಿನಃ ಪೊಲೀಸರು ರಸ್ತೆಯಲ್ಲಿ ತೀರ್ಪು ನೀಡಲು ಸಾಧ್ಯವಿಲ್ಲ.

ಹಾಗಾಗಿ, ಹೈದರಾಬಾದ್ ಪೊಲೀಸರು ಈಗ ಎಲ್ಲೆಡೆಯಿಂದ ಭಾರಿ ಪ್ರಶಂಸೆಗೆ ಒಳಗಾಗುತ್ತಿದ್ದಾರೆ. ಆದರೆ ಈ ಪ್ರಕರಣ ಮುಂದಿನ ದಿನಗಳಲ್ಲಿ ಯಾವ ರೀತಿಯ ಬೆಳವಣಿಗೆ ಕಾಣುತ್ತದೆ ಎನ್ನುವ ಕುತೂಹಲವಂತೂ ಇದ್ದೇ ಇರುತ್ತದೆ.

ಪಶುವೈದ್ಯೆ ಅತ್ಯಾಚಾರಿಗಳ ಎನ್ ಕೌಂಟರ್: ಹುಬ್ಬಳ್ಳಿ ಅಧಿಕಾರಿ ನೇತೃತ್ವ

Bottom Add3
Bottom Ad 2