Advertisement -Home Add

ಕೆ.ಕಲ್ಯಾಣ್ ದಂಪತಿ ಕಲಹ: ಆತ್ಮಹತ್ಯೆಗೆ ಶರಣಾದ ಗಂಗಾ ಕುಲ್ಕರ್ಣಿ

ವಿಷ ಕುಡಿದು ಕೋರ್ಟ್ ಗೆ ಬಂದ ಗಂಗಾ ಕುಲ್ಕರ್ಣಿ

ಪ್ರಗತಿವಾಹಿನಿ ಸುದ್ದಿ; ಕೊಪ್ಪಳ: ಖ್ಯಾತ ಚಿತ್ರಸಾಹಿತಿ ಕೆ.ಕಲ್ಯಾಣ್ ದಾಂಪತ್ಯದಲ್ಲಿ ಬಿರುಕು ಪ್ರಕರಣದಿಂದ ಮುನ್ನೆಗೆ ಬಂದಿದ್ದ ಗಂಗಾ ಕುಲ್ಕರ್ಣಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಕೆ.ಕಲ್ಯಾಣ್ ಹಾಗೂ ಅಶ್ವಿನಿ ದಾಂಪತ್ಯದಲ್ಲಿ ಬಿರುಕು ಮೂಡಲು ಪ್ರಮುಖ ಕಾರಣಳಾಗಿದ್ದ ಅಡುಗೆ ಕೆಲಸದ ಮಹಿಳೆ ಗಂಗಾ ಕುಲ್ಕರ್ಣಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಗಂಗಾ ಕುಲ್ಕರ್ಣಿ ಕೊಪ್ಪಳದ ಕುಷ್ಟಗಿ ಕೋರ್ಟ್ ಗೆ ಹಾಜರಾಗಿದ್ದರು. ಕೋರ್ಟ್ ಗೆ ಬರುವ ಮುನ್ನವೇ ಗಂಗಾ ಕುಲ್ಕರ್ಣಿ ವಿಷ ಸೇವಿಸಿದ್ದರು ಎನ್ನಲಾಗಿದೆ. ಕೋರ್ಟ್ ಆವರಣದಲ್ಲಿಯೇ ಗಂಗಾ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಕೆಲ ವರ್ಷಗಳ ಹಿಂದೆ ಗಂಗಾ ಕುಲ್ಕರ್ಣಿ ಕೊಪ್ಪಳ ಜಿಲ್ಲೆಯ ಕುಷ್ಟಗಿಯಲ್ಲಿ ಹಲವು ಜನರಿಗೆ ಸರ್ಕಾರಿ ನೌಕರಿ ಕೊಡಿಸುವುದಾಗಿ ಹೇಳಿ ಹಣ ಪಡೆದು ವಂಚಿಸಿದ್ದರು. ಇದೇ ಪ್ರಕರಣದ ವಿಚಾರಣೆ ಸಂಬಂಧ ಗಂಗಾ ಕುಲ್ಕರ್ಣಿ ಇಂದು ಕುಷ್ಟಗಿ ಕೋರ್ಟ್ ಗೆ ಹಾಜರಾಗಿದ್ದರು.

ಮನೆ ಕೆಲಸದವಳಿಂದಾಗಿ ನಮ್ಮ ಸಂಸಾರದಲ್ಲಿ ಬಿರುಕು – ಕೆ.ಕಲ್ಯಾಣ್

2 ಗಂಟೆ ಕೌನ್ಸಿಲಿಂಗ್ ಮಾಡಿದರೆ ಪತ್ನಿ ಸರಿ ಹೋಗ್ತಾಳೆ, ಅವಳು ಕೆಟ್ಟವಳಲ್ಲ – ಕೆ.ಕಲ್ಯಾಣ್

ಡೊಂಗಿ ಮಂತ್ರವಾದಿ ಶಿವಾನಂದ ವಾಲಿ ಲಪಟಾಯಿಸಿದ್ದು 6 ಕೋಟಿ ರೂ. ಕೆ.ಕಲ್ಯಾಣ್ ಆಸ್ತಿ