KLE1099 Add

ಆಭರಣ ಪ್ರಿಯರಿಗೆ ಗುಡ್ ನ್ಯೂಸ್

ಚಿನ್ನ-ಬೆಳ್ಳಿ ದರ ಯಾವ ನಗರದಲ್ಲಿ ಎಷ್ಟಿದೆ ?

Beereshwara 6

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಚಿನ್ನ ಬೆಳ್ಳಿ ಖರೀದಿಸುವ ಪ್ಲಾನ್ ಇದ್ದರೆ ಆಭರಣ ಪ್ರಿಯರಿಗೆ ಇಲ್ಲಿದೆ ಸಿಹಿ ಸುದ್ದಿ. ಇಂದು ಬಂಗಾರದ ಬೆಲೆಯಲ್ಲಿ ಕೊಂಚ ಇಳಿಕೆ ಕಂಡುಬಂದಿದೆ.

ದೈನಂದಿನ ವಹಿವಾಟಿನಲ್ಲಿ ಚಿನ್ನ, ಬೆಳ್ಳಿಯ ದರದಲ್ಲಿ ಬದಲಾವಣೆ ಸರ್ವೇ ಸಾಮಾನ್ಯ. ಆದರೆ ಯಾವ ನಗರದಲ್ಲಿ ಚಿನ್ನ, ಬೆಳ್ಳಿ ದರ ಎಷ್ಟಿದೆ ಎಂಬ ಕುತೂಹಲ ಪ್ರತಿಯಿಬ್ಬರಲ್ಲೂ ಇದ್ದೇ ಇರುತ್ತದೆ.

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬಂಗಾರದ ಬೆಲೆ 22 ಕ್ಯಾರಟ್ 10 ಗ್ರಾಂ ಚಿನ್ನದ ಬೆಲೆ 45,040 ರೂಪಾಯಿ ಇದೆ. 100 ಗ್ರಾಂ ಚಿನ್ನಕ್ಕೆ 4,50,400 ರೂಪಾಯಿ ಆಗಿದೆ. 24 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 49,140 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,91,400 ರೂ ಆಗಿದೆ.

ಬೆಳ್ಳಿ ದರದಲ್ಲಿಯೂ ಇಳಿಕೆ ಕಂಡುಬಂದಿದ್ದು, ಕೆಜಿ ಬೆಳ್ಳಿ ದರ 62,000 ರೂಪಾಯಿ ನಿಗದಿಯಾಗಿದೆ.

ಚೆನ್ನೈನಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 45,230 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,52,300 ರೂಪಾಯಿ ಆಗಿದೆ. 24 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 49,340 ರೂಪಾಯಿ ಆಗಿದೆ. 100 ಗ್ರಾಂ ಚಿನ್ನಕ್ಕೆ 4,93,400 ರೂ.ಆಗಿದೆ. ಇನ್ನು ಬೆಳ್ಳಿ ದರದಲ್ಲಿ ಕೆಜಿ ಬೆಳ್ಳಿಗೆ 67,200 ರೂಪಾಯಿ ಆಗಿದೆ.

ಹೈದರಾಬಾದ್ ನಲ್ಲಿ 22 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 45,040 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,50,400 ರೂಪಾಯಿ ನಿಗದಿಯಾಗಿದೆ. 24 ಕ್ಯಾರಟ್ 10 ಗ್ರಾಂ ಚಿನ್ನಕ್ಕೆ 49,140 ರೂಪಾಯಿ ಆಗಿದೆ. 100 ಗ್ರಾಂ ಚಿನ್ನಕ್ಕೆ 4,91,400 ರೂಪಾಯಿ ನಿಗದಿಯಾಗಿದೆ.

ಬೆಳ್ಳಿದರದಲ್ಲಿ ಕೆಜಿ ಬೆಳ್ಳಿಗೆ 67,200 ರೂಪಾಯಿ ಆಗಿದೆ.

ಮೂರು ಕೃಷಿ ಕಾಯ್ದೆ ರದ್ದತಿ ಮಸೂದೆ ಅಂಗೀಕಾರ

You cannot copy content of this page