Advertisement -Home Add

ಗುಜರಾತ್ ಮಾಜಿ ಸಿಎಂ ಕೇಶುಭಾಯ್ ಪಟೇಲ್ ವಿಧಿವಶ

ಎರಡು ಭಾರಿ ಗುಜರಾತ್ ಸಿಎಂ ಆಗಿ ಸೇವೆ ಸಲ್ಲಿಸಿದ್ದ ಪಟೇಲ್

ಪ್ರಗತಿವಾಹಿನಿ ಸುದ್ದಿ; ಗಾಂಧಿನಗರ: ಗುಜರಾತ್ ಮಾಜಿ ಸಿಎಂ ಕೇಶುಭಾಯ್ ಪಟೇಲ್ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ಅವರಿಗೆ 91 ವರ್ಷ ವಯಸ್ಸಾಗಿತ್ತು.

ಕೇಶುಭಾಯ್ ಪಟೇಲ್ ಗುಜರಾತ್ ಮುಖ್ಯಮಂತ್ರಿಯಾಗಿ ಎರಡು ಬಾರಿ ಆಯ್ಕೆಯಾಗಿದ್ದರು. 1995ರ ಮಾರ್ಚ್ ನಿಂದ 1995ರ ಅಕ್ಟೋಬರ್ ವರೆಗೆ ಮೊದಲಬಾರಿ ಹಾಗೂ 1998ರಿಂದ ಅಕ್ಟೋಬರ್ 2001ರವರೆಗೆ ಎರಡನೇ ಅವಧಿಗೆ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು.

ಎದೆನೋವಿನಿಂದ ಬಳಲುತ್ತಿದ್ದ ಕೇಶುಭಾಯ್ ಅವರನ್ನು ಅಹಮದಾಬಾದ್ ನ ಸ್ಟರ್ಲಿಂಗ್ ಆಸ್ಪರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಇಂದು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.