Reporter wanted
Crease wise (28th Jan)

ಮಲಗಿದ್ದವರ ಮೇಲೆ ಹರಿದ ಲಾರಿ; 13 ಜನರ ದುರ್ಮರಣ

ಸೂರತ್ ನಲ್ಲಿ ನಡೆದ ಭೀಕರ ರಸ್ತೆ ಅಪಘಾತ

ಪ್ರಗತಿವಾಹಿನಿ ಸುದ್ದಿ; ಸೂರತ್: ರಸ್ತೆ ಬದಿಯಲ್ಲಿ ಮಲಗಿದ್ದ ಕೂಲಿ ಕಾರ್ಮಿಕರ ಮೇಲೆ ಲಾರಿ ಹರಿದ ಪರಿಣಾಮ 13 ಜನರು ದಾರುಣವಾಗಿ ಮೃತಪಟ್ಟಿರುವ ಘಟನೆ ಗುಜರಾತ್ ನ ಸೂರತ್ ಬಳಿಯ ಕೊಸಂಬ ಬಳಿ ನಡೆದಿದೆ.

ಮೃತರನ್ನು ರಾಜಸ್ಥಾನದ ಬನ್ಸ್ ವರ ಜಿಲ್ಲೆಯವರೆಂದು ಹೇಳಲಾಗಿದೆ. ಕೊಸಂಬ ಬಳಿಯ ಪಲೋಡ್ಗಂದ ಕಿಮ್-ಮಾಂಡ್ವಿ ರಸ್ತೆಯಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ. ರಸ್ತೆ ಬದಿಯ ಫುಟ್ ಪಾತ್ ಮೇಲೆ ಕಾರ್ಮಿಕರು ಮಲಗಿದ್ದರು. ಈ ವೇಳೆ ಏಕಾಏಕಿ ಬಂದ ಟ್ರಕ್ ಮಲಗಿದ್ದವರ ಮೇಲೆ ಹರಿದಿದೆ.

13 ಕಾರ್ಮಿಕರು ಸಾವನ್ನಪ್ಪಿದ್ದು, 8ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ಘಟನೆಯಿಂದ ರಸ್ತೆಬದಿಯ 5 ಕ್ಕೂ ಹೆಚ್ಚು ಅಂಗಡಿಗಳಿಗೆ ಹಾನಿಯಾಗಿದೆ.