Yoga add Final 1
KLE1099 Add

ಮೊದಲ ಲೈಂಗಿಕ ಕ್ರಿಯೆ ವೇಳೆ ಆತ ನನಗೆ ನಶೆ ಏರಿಸಿದ್ದ; ನಟನ ವಿರುದ್ಧ ಸಾಕ್ಷ್ಯ ನುಡಿದ ಮಾಜಿ ಗೆಳತಿ

ಜಾನಿ ಮಾಜಿ ಪತ್ನಿ ನಟಿ ಅಂಬರ್ ಹರ್ಡ್ ವಿರುದ್ಧದ ಮಾನನಷ್ಟ ಮೊಕದ್ದಮೆ ಪ್ರಕರಣ

GIT Add 3
Beereshwara add 12

ಪ್ರಗತಿವಾಹಿನಿ ಸುದ್ದಿ, ವಾಷಿಂಗ್ಟನ್: ಹಾಲಿವುಡ್ ನಟ ಜಾನಿ ಡೆಪ್ ಮೊದಲ ಬಾರಿಯ ಲೈಂಗಿಕ ಕ್ರಿಯೆ ವೇಳೆ ತಮಗೆ ನಶೆ ಏರಿಸಿದ್ದಾಗಿ ಅವರ ಮಾಜಿ ಗೆಳತಿ ಎಲ್ಲೆನ್ ಬಾರ್ಕ್ ಹೇಳಿದ್ದಾರೆ.

ಜಾನಿ ತನ್ನ ಮಾಜಿ ಪತ್ನಿ ನಟಿ ಅಂಬರ್ ಹರ್ಡ್ ವಿರುದ್ಧ ಹೂಡಿದ್ದ ಮಾನನಷ್ಟ ಮೊಕದ್ದಮೆಯಲ್ಲಿ  ಅವರು ಸಾಕ್ಷಿಯಾಗಿ ಹೇಳಿಕೆ ನೀಡಿದ್ದಾರೆ.

ಮೊದಲ ಬಾರಿಯಲ್ಲಿ ಅವರು ಸ್ವತಃ ಕೆಂಪುವೈನ್ ಸೇವಿಸಿ ಮತ್ತೇರಿಸಿಕೊಂಡಿದ್ದರು. ಜೊತೆಗೆ ತಮಗೂ ನಿದ್ರಾಜನಕ ಹಾಗೂ ಸಮ್ಮೋಹನದ ಔಷಧ ನೀಡಿದ್ದರು ಎಂದು ಅವರು ಹೇಳಿದ್ದಾರೆ.

ಜಾನಿಯನ್ನು ಅಸೂಯೆ ಪಡುವ ಹಾಗೂ ನಿಯಂತ್ರಿಸುವ ಶಕ್ತಿ ಹೊಂದಿದ ವ್ಯಕ್ತಿ ಎಂದು ದೂರಿರುವ ಅವರು, ಜಾನಿ ಅವರು ಕೊಕೇನ್, ಗಾಂಜಾ ಮತ್ತು ಹಾಲ್ಯುಸಿನೋಜೆನಿಕ್ ಡ್ರಗ್ಸ್ ಬಳಸುವುದನ್ನು ನೋಡಿದ್ದು ಆತ ಅತಿರೇಕದ ಧೂಮಪಾನಿಯಾಗಿದ್ದಾಗಿ ಸಾಕ್ಷ್ಯನುಡಿದಿದ್ದಾರೆ.

ಒಮ್ಮೆ ತಮ್ಮ ಬೆನ್ನ ಮೇಲೆ ಗೀರಿದ ಗುರುತನ್ನು ನೋಡಿ ಪರಪುರುಷನೊಂದಿಗೆ ಲೈಂಗಿಕ ಕ್ರಿಯೆಗೆ ಹೋಗಿದ್ದಾಗಿ ಆರೋಪಿಸಿದ್ದರು. ಜೊತೆಗೆ ಕೆಟ್ಟ ಭಾಷೆಯಲ್ಲಿ ತಮ್ಮನ್ನು ಕೂಗಾಡುತ್ತಿದ್ದರು ಎಂದು ಎಲ್ಲೆನ್ ಬಾರ್ಕ್ ಆರೋಪಿಸಿದ್ದಾರೆ.

ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ

Home add- Bottom