Advertisement -Home Add

ಹನಿಟ್ರ್ಯಾಪ್: ಐವರು ಆರೋಪಿಗಳ ಬಂಧನ

ಪಿರಿಯಾಪಟ್ಟಣದ ಗ್ಯಾಂಗ್ ಬಂಧನ

ಪ್ರಗತಿವಾಹಿನಿ ಸುದ್ದಿ; ಮೈಸೂರು: ಹನಿಟ್ರ್ಯಾಪ್ ಮೂಲಕ ಹಣ ವಸೂಲಿ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್ ಒಂದನ್ನು ಪೊಲೀಸರು ಬಂಧಿಸಿದ್ದಾರೆ.

ಪಿರಿಯಾಪಟ್ಟಣದ ನವೀನ್, ಶಿವರಾಜು, ಹರೀಶ್, ವಿಜಿ ಹಾಗೂ ಹುಣಸೂರಿನ ಯುವತಿ ಅನಿತಾ ಬಂಧಿತ ಆರೋಪಿಗಳು. ಹನಿಟ್ರ್ಯಾಪ್ ಗೆ ಒಳಗಾಗಿದ್ದ ಡಾ.ಪ್ರಕಾಶ್ ಬಾಬು ಎಂಬುವವರ ದೂರಿನ ಮೇಲೆ ಆರೋಪಿಗಳನ್ನು ಬಂಧಿಸಲಾಗಿದೆ.

ಡಾ.ಪ್ರಕಾಶ್ ಬಾಬು ಅವರ ಖಾಸಗಿ ವಿಡಿಯೋ ಚಿತ್ರಿಸಿಕೊಂಡಿದ್ದ ಗ್ಯಾಂಗ್, 1 ಕೋಟಿ ರೂ ಹಣದ ಬೇಡಿಕೆ ಇಟ್ಟು ಬೆದರಿಕೆ ಹಾಕಿದ್ದರು. ಈ ಹಿನ್ನೆಲೆಯಲ್ಲಿ ಮೈಸೂರು ಕುವೆಂಪುನಗರ ಠಾಣೆಯಲ್ಲಿ ಪ್ರಕಾಶ್ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಐವರು ಆರೋಪಿಗಳನ್ನು ಬಂಧಿಸಲಾಗಿದೆ.