Advertisement

ಫೆರಾರಿ ಕಾರನ್ನು ಕದ್ದು ಮಾರಲು ಯತ್ನಿಸಿದ್ದ ಕಳ್ಳರು

ಹೈದರಾಬಾದ್ ಉದ್ಯಮಿ ಕಾರನ್ನು ದೆಹಲಿಯಲ್ಲಿ ಮಾರಲು ಹೋಗಿ ಸಿಕ್ಕಿಬಿದ್ದರು

ಪ್ರಗತಿವಾಹಿನಿ ಸುದ್ದಿ; ಹೈದರಾಬಾದ್: ಐಷಾರಾಮಿ ಫೆರಾರಿ ಕಾರನ್ನು ಕದ್ದು ಬೇರೆಯವರಿಗೆ ಮಾರಲು ಪ್ರಯತ್ನಿಸಿದ ಮೂವರು ಕಳ್ಳರನ್ನು ಹೈದರಾಬಾದ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರನ್ನು ನೀರಜ್ ಶರ್ಮಾ, ಭೂಪಿಂದರ್ ಮತ್ತು ಸದ್ದಾಂ ಎಂದು ಗುರುತಿಸಲಾಗಿದೆ. ಇದರಲ್ಲಿ ನೀರಜ್ ಶರ್ಮಾ ಉನ್ನತ ಮಟ್ಟದ ಕಾರು ವ್ಯಾಪಾರಿಯಾಗಿದ್ದಾನೆ. ಈ ಮೂವರು ಹೈದರಾಬಾದ್ ಮೂಲದ ಉದ್ಯಮಿಯ ಫೆರಾರಿ ಕಾರನ್ನು ಕದ್ದು, ದೆಹಲಿಯಲ್ಲಿ ಮಾರಲು ಪ್ರಯತ್ನಿಸಿ ಪೊಲೀಸರ ಅತಿಥಿಯಾಗಿದ್ದಾರೆ.

ಹೈದರಾಬಾದ್ ಮೂಲದ ಉದ್ಯಮಿ ದಿವೇಶ್ ಗಾಂಧಿ ಜೂನ್ 23ರಂದು ತನ್ನ ಫೆರಾರಿ ಕಾರನ್ನು ನನ್ನ ಪಕ್ಕದ ಮನೆಯಿಂದ ಯಾರೋ ಕಳವು ಮಾಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ದಿವೇಶ್ ಈ ಕಾರನ್ನು 2019ರಲ್ಲಿ ಕೇರಳದ ಮೂಲದ ವ್ಯಕ್ತಿಯಿಂದ 2 ಕೋಟಿ ಕೊಟ್ಟು ಖರೀದಿ ಮಾಡಿದ್ದರು. ದಿವೇಶ್ ಖರೀದಿಸಿದ್ದ ಕಾರು ದೆಹಲಿ ನೋಂದಣಿ ಸಂಖ್ಯೆ ಹೊಂದಿತ್ತು, ಈ ಕಾರಣದಿಂದ ಕಾರನ್ನು ತನ್ನ ಹೆಸರಿಗೆ ವರ್ಗಾವಣೆ ಮಾಡಿಸಿಕೊಳ್ಳಲು ದೆಹಲಿ ಮೂಲದ ಕಾರ್ ಡೀಲರ್ ಪ್ರಿನ್ಸ್ ಪಾಠಕ್ ಜೊತೆ ಸಂಪರ್ಕದಲ್ಲಿ ಇದ್ದರು. ಇದೇ ವೇಳೆ ದಿನೇಶ್ ಕೆಲಸದ ಮೇಲೆ ಅಮೆರಿಕಗೆ ಹೋಗಿ ಅಲ್ಲೇ ಲಾಕ್‍ಡೌನ್ ಆಗಿದ್ದಾರೆ.

ದಿನೇಶ್ ಪಕ್ಕದ ಮನೆಯ ಖಾಲಿ ಜಾಗದಲ್ಲಿ ನಿಲ್ಲಿಸಿ ಹೋಗಿದ್ದರು. ಇದಾದ ನಂತರ ಜೂನ್ 23ರಂದು ಪಕ್ಕದ ಮನೆಯವರ ಬಳಿ ಬಂದ ಮೂವರು ನಾವು ದಿವೇಶ್ ಸ್ನೇಹಿತರು ಕಾರನ್ನು ಆತ ಸರಿಮಾಡಲು ಹೇಳಿದ್ದಾನೆ ಎಂದು ಕೀ ಪಡೆದುಕೊಂಡು ಕಾರನ್ನು ಎಗರಿಸಿಕೊಂಡು ಹೋಗಿದ್ದಾರೆ. ಇದಾದ ನಂತರ ದಿವೇಶ್ ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ಸ್ವೀಕರಿಸಿದ ಪೊಲೀಸರು ಸಿಸಿಟಿವಿ ವಿಡಿಯೋ ಪರಿಶೀಲಿಸಿ ಕಳ್ಳರನ್ನು ಸೆರೆಹಿಡಿದು ಕಾರನ್ನು ಸೀಜ್ ಮಾಡಿದ್ದಾರೆ.