Beereshwara add 5
Crease wise add 8
KLE1099 Add

ಏರ್ ಪೋರ್ಟ್ ಮೇಲೆ ಉಗ್ರರ ರಾಕೆಟ್ ದಾಳಿ; ಅಮೆರಿಕಾ ಏರ್ ಸ್ಟ್ರೈಕ್; ಮಕ್ಕಳು ಸೇರಿ 9ಜನರ ದುರ್ಮರಣ

ಕಾಬೂಲ್ ಏರ್ ಪೋರ್ಟ್ ಮೇಲೆ ರಾಕೆಟ್ ದಾಳಿ

ಪ್ರಗತಿವಾಹಿನಿ ಸುದ್ದಿ; ಕಾಬೂಲ್: ಕಾಬೂಲ್ ಏರ್ ಪೋರ್ಟ್ ಹಾಗೂ ಸುತ್ತಮುತ್ತಲು ಉಗ್ರರು ರಾಕೆಟ್ ದಾಳಿ ನಡೆಸಿದ್ದು, ರಾಕೇಟ್ ದಾಳಿ ತಡೆಯಲು ಅಮೆರಿಕಾ ಸೇನೆ ಏರ್ ಸ್ಟ್ರೈಕ್ ನಡೆಸಿದೆ. ಎರಡು ಕಡೆ ದಾಳಿ ವೇಳೆ 6 ಮಕ್ಕಳು ಸೇರಿ ಒಟ್ಟು 9 ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಕಾಬೂಲ್ ನ ಹಮೀದ್ ಕರ್ಜೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪದ ಖಜೇಹ್ ಬಾಘ್ರಾ ಎಂಬಲ್ಲಿ ಉಗ್ರರು ರಾಕೆಟ್ ದಾಳಿ ನಡೆಸಿದ ವೇಳೆ ಮನೆ ಛಿದ್ರಗೊಂಡಿದ್ದು, ಈ ಘಟನೆಯಲ್ಲಿ ಮಗು ಹಾಗೂ ಮಹಿಳೆ ಸಾವನ್ನಪ್ಪಿದ್ದಾರೆ.

ಈ ನಡುವೆ ಕಾಬೂಲ್ ಏರ್ ಪೋರ್ಟ್ ಮೇಲೆ ಕಾರ್ ಮೂಲಕ ರಾಕೇಟ್ ದಾಳಿ ನಡೆಸಲು ಉಗ್ರರು ಯತ್ನಿಸಿದ್ದಾರೆ. ಅಮೆರಿಕ ಸೇನೆ ಸಿ-ರ್ಯಾಮ್ ಡಿಫೆನ್ಸ್ ಸಿಸ್ಟಮ್ ಮೂಲಕ ಈ ರಾಕೆಟ್ ದಾಳಿ ಹಾಗೂ ಕಾರನ್ನು ಛಿದ್ರಗೊಳಿಸಿದ್ದು, ಉಗ್ರರ ಯತ್ನ ವಿಫಲಗೊಳಿಸಿದೆ. ಉಗ್ರರು ಹಾಗೂ ಅಮೆರಿಕ ಸೇನೆ ನಡುವೆ ಫೈರಿಂಗ್ ನಡೆದಿದ್ದು ಗುಂಡಿನ ದಾಳಿ ವೇಳೆ ಒಟ್ಟು 9 ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ.
ಡ್ರಗ್ಸ್ ಪ್ರಕರಣ; ಬೆಳ್ಳಂಬೆಳಿಗ್ಗೆ ಸೆಲೆಬ್ರಿಟಿಗಳ ಮನೆ ಮೇಲೆ ಪೊಲೀಸರ ದಾಳಿ