GIT add 2024-1
Laxmi Tai add
Beereshwara 33

ಕರ್ನಾಟಕದ ಆಂತರಿಕ ವಿಚಾರದಲ್ಲಿ ಮೂಗು ತೂರಿಸಲು ಮಹಾರಾಷ್ಟ್ರ ಯತ್ನ

ನಿಜ ವಿಷಯ ತಿಳಿಯದೆ ಶಿವಾಜಿ ಪ್ರತಿಮೆ ಮರುಸ್ಥಾಪನೆಗೆ ಏಕನಾಥ ಶಿಂದೆ ಆಗ್ರಹ

Anvekar 3
Cancer Hospital 2

ಮಣಗುತ್ತಿ: ನಿಜ ವಿಷಯ ತಿಳಿಯದೆ ಶಿವಾಜಿ ಪ್ರತಿಮೆ ಮರುಸ್ಥಾಪನೆಗೆ ಏಕನಾಥ ಶಿಂದೆ ಆಗ್ರಹ

ಪ್ರಗತಿವಾಹಿನಿ ಸುದ್ದಿ, ಮುಂಬಯಿ/ ಬೆಳಗಾವಿ : ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಮಣಗುತ್ತಿ ಗ್ರಾಮದಲ್ಲಿ ತಾಂತ್ರಿಕ ಕಾರಣಕ್ಕಾಗಿ ಸ್ಥಳ ಬದಲಾಯಿಸಲು ತೆಗೆದಿರಿಸಲಾಗಿರುವ
  ಛತ್ರಪತಿ ಶಿವಾಜಿ ಪುತ್ಥಳಿಯನ್ನು ಉದ್ದೇಶಪೂರ್ವಕವಾಗಿ ತೆಗೆದು ಹಾಕಲಾಗಿದೆ ಎಂದು ಮಹಾರಾಷ್ಟ್ರ ಆರೋಪಿಸಿದ್ದು, ಪುತ್ಥಳಿ ಮರುಸ್ಥಾಪನೆಗೆ ಆಗ್ರಹಿಸಿದೆ.
ತನ್ಮೂಲಕ ಕರ್ನಾಟಕದ ಪಕ್ಕಾ ಆಂತರಿಕ ವಿದ್ಯಮಾನದಲ್ಲಿ ಅನಗತ್ಯವಾಗಿ ಮಹಾರಾಷ್ಟ್ರ ಮೂಗು ತೂರಿಸುವ ಯತ್ನ ನಡೆಸುತ್ತಿದೆ. ಅಲ್ಲದೆ ಅನಗತ್ಯಾವಾಗಿ ವಿಷಬೀಜ ಬಿತ್ತುವ ಮೂಲಕ ಉದ್ವಿಗ್ನ ವಾತಾವರಣ ನಿರ್ಮಾಣಕ್ಕೆ ಯತ್ನಿಸುತ್ತಿದೆ.
ಸ್ಥಳೀಯ ಕೆಲವು ಸಮಸ್ಯೆಗಳ ಕಾರಣಕ್ಕಾಗಿ ಶಿವಾಜಿ ಪುತ್ಥಳಿಯನ್ನು ಬದಲೀ ಸ್ಥಳದಲ್ಲಿ ಸ್ಥಾಪಿಸುವುದಕ್ಕಾಗಿ ತೆಗೆದಿರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಆದರೆ ಮಹಾರಾಷ್ಟ್ರ ಇಲ್ಲದ ವಿವಾದ ಕೆದಕಿ  ಕಾಲು ಕೆದರಿ ಜಗಳಕ್ಕೆ ಮುಂದಾಗಿದೆ.
Emergency Service
  ಛತ್ರಪತಿ ಶಿವಾಜಿ ಮಹಾರಾಜರ ಪೂರ್ಣಾಕೃತಿ ಪ್ರತಿಮೆಯನ್ನು ಗ್ರಾಮ ಪಂಚಾಯಿತಿಯ ಪೂರ್ವ ಅನುಮತಿಯನ್ನು ಪಡೆದೇ  ಸ್ಥಾಪಿಸಲಾಗಿತ್ತು. ಆದರೂ ಇದನ್ನು ಅಜ್ಞಾತ ವ್ಯಕ್ತಿಗಳು ರಾತೋರಾತ್ರಿ ತೆಗೆದು ಹಾಕುವ ಪಾಪಕೃತ್ಯ ಮಾಡಿದ್ದಾರೆ ಎಂದು ಮಹಾರಾಷ್ಟ್ರ ಗಡಿಭಾಗದ ಸಮನ್ವಯಕ ಸಚಿವರಾದ ಛಗನ್ ಭುಜಬಲ್ ಮತ್ತು ಮಂತ್ರಿ  ಏಕನಾಥ್ ಶಿಂಧೆ ಆರೋಪಿಸಿದ್ದಾರೆ.
ಕರ್ನಾಟಕ ಸರ್ಕಾರವು  ಈ ಕೃತ್ಯ ಜರುಗಿಸಿದವರ ವಿರುದ್ಧ  ಕೂಡಲೇ ಕ್ರಮವನ್ನು ಕೈಗೊಳ್ಳಬೇಕು ಹಾಗೂ ಸಂಪೂರ್ಣ ದೇಶದ ಆರಾಧ್ಯ ದೇವರಾದ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಯನ್ನು ಸನ್ಮಾನ ಪೂರ್ವಕವಾಗಿ ಮರುಪ್ರತಿಷ್ಠಾಪಿಸಬೇಕೆಂದು ಅವರು ಆಗ್ರಹಿಸಿದ್ದಾರೆ.
ಈ ಸಂಗತಿಯನ್ನು ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ದವ್ ಠಾಕ್ರೆಯವರು ಗಂಭೀರವಾಗಿ ಪರಿಗಣಿಸಿದ್ದು ಈ ಸಂಬಂಧದಲ್ಲಿ ಕರ್ನಾಟಕದ ಮುಖ್ಯಮಂತ್ರಿಯವರೊಂದಿಗೆ ಶೀಘ್ರದಲ್ಲಿ ಚರ್ಚಿಸಲಿದ್ದಾರೆ ಎಂದಿದ್ದಾರೆ.
ಈ ಸಂಬಂಧ ಇನ್ನೋರ್ವ ಸಚಿವ ಜಯಂತ ಪಾಟೀಲ ಕೂಡ ಇದೇ ರೀತಿಯ ಹೇಳಿಕೆ ನೀಡಿದ್ದಾರೆ.
ಒಟ್ಟಾರೆ ಅನಗತ್ಯವಾಗಿ ಕರ್ನಾಟಕದ ಸಣ್ಣ ಪುಟ್ಟ ವಿಷಯಗಳಲ್ಲಿ ಮೂಗು ತೂರಿಸುವ ಚಾಳಿಯನ್ನು ಮಹಾರಾಷ್ಟ್ರ ಮುಂದುವರಿಸಿದೆ.
ಕರ್ನಾಟಕ ತಕ್ಷಣ ಮಹಾರಾಷ್ಟ್ರಕ್ಕೆ ತಿರುಗೇಟು ನೀಡಬೇಕಿದೆ. ನಮ್ಮ ವಿಷಯ ನಾವು ನೋಡಿಕೊಳ್ಳುತ್ತೇವೆ, ನಿಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಿ ಎಂದು ಖಡಕ್ಕಾಗಿ ಉತ್ತರಿಸಬೇಕಿದೆ.
—————————–
भारतीय जनता पक्षाची सत्ता असलेल्या कर्नाटक राज्यातील बेळगाव जिल्ह्यातील मनगुत्ती गावात छत्रपती शिवाजी महाराजांचा पुतळा रातोरात हटवण्यात आला आहे.@NCPspeaks पक्षाकडून या घटनेचा मी तीव्र निषेध करतो.भाजपचे छत्रपती शिवाजी महाराजांबद्दलचे प्रेम फक्त मतांपुरते आहे हे पुन्हा सिद्ध झाले.
छत्रपती उदयनराजे भोसले यांनी खासदारापदाची शपथ घेतली, छत्रपती शिवाजी महाराजांचा जयघोष त्यांनी केला तेव्हा काय घडले हे आपल्याला माहिती आहे. भाजपच्या मनात महाराष्ट्राचे आराध्य दैवत छत्रपती शिवाजी महाराजांबाबत इतका द्वेष का आहे?
              *ना. जयंत पाटील*
       जलसंपदा मंत्री महाराष्ट्र राज्य
अध्यक्ष महाराष्ट्र प्रदेश राष्ट्रवादी काँग्रेस पार्टी
        पालकमंत्री सांगली जिल्हा
Bottom Add3
Bottom Ad 2