KLE1099 Add

ದೇವಸ್ಥಾನದಲ್ಲಿ ಬೆತ್ತಲಾಗಿ ಬೈಕ್ ಗಳಿಗೆ ಬೆಂಕಿಯಿಟ್ಟ ವ್ಯಕ್ತಿ

ವ್ಯಕ್ತಿ ಹುಚ್ಚಾಟ ಕಂಡು ದಂಗಾದ ಸ್ಥಳೀಯರು

Beereshwara 6

ತುಮಕೂರು: ದೇವಸ್ಥಾನದಲ್ಲಿ ವ್ಯಕ್ತಿಯೋರ್ವ ಬೆತ್ತಲಾಗಿ ಹುಚ್ಚಾಟ ನಡೆಸಿ, ಬೈಕ್ ಗಳಿಗೆ ಬೆಂಕಿಯಿಟ್ಟ ಘಟನೆ ತುಮಕೂರು ಜಿಲ್ಲೆಯ ಪ್ರಸಿದ್ಧ ಹತ್ಯಾಳ ನರಸಿಂಹಸ್ವಾಮಿ ದೇವಾಲಯದಲ್ಲಿ ನಡೆದಿದೆ.

ರಾತ್ರಿ ಹತ್ಯಾಳ ನರಸಿಂಹಸ್ವಾಮಿ ದೇವಸ್ಥಾನದ ಮುಂದೆ ಹತ್ಯಾಳು ದೇವೇಗೌಡ ಎಂಬ ವ್ಯಕ್ತಿ ಬೆತ್ತಲಾಗಿ ದೇವಸ್ಥಾನದ ಮುಂದಿದ್ದ 5 ಬೈಕ್ ಗಳಿಗೆ ಬೆಂಕಿ ಹಚ್ಚಿದ್ದಲ್ಲದೇ ದೇವಾಲಯದ ಆವರಣದಲ್ಲಿದ್ದ ಅಂಗಡಿಗಳಲ್ಲಿ ಪೆಪ್ಸಿ ಬಾಟಲ್ ಒಡೆದು, ಹೂವಿನ ಹಾರಗಳನ್ನು ಕೊರಳಿಗೆ ಹಾಕಿಕೊಂಡು ಹುಚ್ಚಾಟ ಮೆರೆದಿದ್ದಾನೆ.

ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಧಾವಿಸಿದ ಕೆ.ಬಿ.ಕ್ರಾಸ್ ಪೊಲೀಸರು ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ.
ಬೆಳಗಾವಿ: ಒಂದೇ ಶಾಲೆಯ 10 ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು

You cannot copy content of this page